ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ!

Here's the parking details & Google Route Map for those arriving at the CM's event!

ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ  ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ!
Here's the parking details & Google Route Map for those arriving at the CM's event!

SHIVAMOGGA  |  Jan 10, 2024  |    ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸರ್ಕಾರ ರವರು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಈ ಸಂಬಂಧ ಪ್ರಕಟಣೆ ನೀಡಲಾಗಿದೆ. 

ಯುವನಿಧಿ ಯೋಜನೆ

ದಿನಾಂಕ: 12-01-2024 ರಂದು  ಶಿವಮೊಗ್ಗ ನಗರದ ಫ್ರೀಡಂ ಪಾರ್ಕನಲ್ಲಿ ಕರ್ನಾಟಕ ಸರ್ಕಾರದ ಯುವನಿಧಿ " ಯೋಜನೆಗೆ  ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಈ ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದ. ಯವನಿಧಿ ಫಲಾನುಭವಿಗಳು, ಸರ್ಕಾರದ ಮಂತ್ರಿಗಳು, ಶಾಸಕರು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ

 ಈ ಸಂಬಂಧ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಾರ್ವಜನಿಕ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.

ಕಾರ್ಯಕ್ರಮಕ್ಕೆ ಆಗಮಿಸಲಿರುವ ವಾಹನಗಳ ಮಾರ್ಗಗಳ ವಿವರ ಹೀಗಿದೆ

1) ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಎಡಕ್ಕೆ ತಿರುಗಿ- ಗೋಪಾಳ ಸರ್ಕಲ್ - ಆಯ್ಯೋಳ ಸರ್ಕಲ್ ಬಲಕ್ಕೆ ತಿರುಗಿ ಎ.ಪಿಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಎ.ಪಿ.ಎಂ.ಸಿ. ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.

2) ಸಾಗರ, ಹೊಸನಗರ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು  ಆಯ್ಯೋಳ ಸರ್ಕಲ್ ಸಾಗರ ರಸ್ತೆ ಅಲ್ಗೊಳ ಸರ್ಕಲ್ -ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಸೋಮಿನಕೊಪ್ಪ ಆದರ್ಶನಗರ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡುವುದು.

3) ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು :-

ಬಸವಗಂಗೂರು- ಬೊಮ್ಮನಕಟ್ಟೆ ಮಾರ್ಗವಾಗಿ, ಬೊಮ್ಮಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇಔಟ್‌ ನಲ್ಲಿ ಪಾರ್ಕಿಂಗ್ ಮಾಡುವುದು.

4) ಹೊನ್ನಾಳಿ, ಹರಿಹರ, ದಾವಣಗೆರೆ ಹಾವೇರಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು :-

ಸವಳಂಗ - ಬಸವಗಂಗೂರು ಬೊಮ್ಮನಕಟ್ಟೆ ಮಾರ್ಗವಾಗಿ, ಬೊಮ್ಮಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡುವುದು.

5) ಭದ್ರಾವತಿ, ಚಿಕ್ಕಮಗಳೂರು, ಎನ್.ಆರ್.ಪುರ-ಕೊಪ್ಪ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್. ಸರ್ಕಲ್- ಬೈಪಾಸ್ ರಸ್ತೆ ಸಂದೇಶ್ ಮೋಟಾರ್ಸ್ ಸರ್ಕಲ್ ಅಯ್ಯೋಳ ಸರ್ಕಲ್ ಬಲಕ್ಕೆ ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಎ.ಪಿ.ಎಂ.ಸಿ. ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು. - ನ್ಯೂಮಂಡ್ಲಿ ಸರ್ಕಲ್ - ಗೋಪಾಳ ಸರ್ಕಲ್



6) ಹೊಳೆಹೊನ್ನೂರು ಚನ್ನಗಿರಿ ಚಿತ್ರದುರ್ಗದ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-ಹೊಳೆಹೊನ್ನೂರು ಸರ್ಕಲ್ ಶಂಕರ ಮಠ ಸರ್ಕಲ್ ಕೆ.ಇ.ಬಿ. ಸರ್ಕಲ್- ರೈಲ್ವೆ ನಿಲ್ದಾಣದ ರಸ್ತೆ - ಉಷಾ ಸರ್ಕಲ್‌ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಗುರುತಿಸಿದ ಪಾರ್ಕಿಂಗ್ ಸ್ಥಳವಾದ ಎನ್.ಇ.ಎಸ್ ಮೈದಾನ, ಶೇಷಾದ್ರಿಪುರಂ ಗೂಡ್ಸ್ ಶೇಡ್. ಸೈನ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

ಈ ಸಂಬಂಧ ಪೊಲೀಸ್ ಇಲಾಖೆ ನೀಡಿರುವ ಗೂಗಲ್ ಮ್ಯಾಪ್​ ಲಿಂಕ್​ ಕ್ಲಿಕ್ ಮಾಡಿ : (Google)