ದರ್ಶನ್‌ ಅರೆಸ್ಟ್‌ ಕೇಸ್‌ | ಶಿವಮೊಗ್ಗದಲ್ಲಿ ಶೆಫ್‌ ಚಿದಂಬರ್‌ ನಟ ಅನಿರುದ್ಧ್‌ ಹೇಳಿದ್ದೇನು?

Actor Anirudh addressed the press at the Shivamogga Press Trust regarding the recent case involving actor Darshan 

ದರ್ಶನ್‌ ಅರೆಸ್ಟ್‌ ಕೇಸ್‌ | ಶಿವಮೊಗ್ಗದಲ್ಲಿ ಶೆಫ್‌ ಚಿದಂಬರ್‌ ನಟ ಅನಿರುದ್ಧ್‌ ಹೇಳಿದ್ದೇನು?
actor Darshan, Shivamogga Press Trus, Actor Anirudh

SHIVAMOGGA | MALENADUTODAY NEWS | Jun 19, 2024  ಮಲೆನಾಡು ಟುಡೆ 

ನಟ ದರ್ಶನ್‌ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಲ್ಲಿ ನಟ ಅನಿರುದ್ಧ್‌ ಮಾತನಾಡಿದ್ದಾರೆ. ತಮ್ಮ ಚಿತ್ರ ಶೆಫ್‌ ಚಿದಂಬರ ಚಿತ್ರದ ಕುರಿತಾದ ಪ್ರೆಸ್‌ಮೀಟ್‌ ನಲ್ಲಿ ಮಾತನಾಡ್ತಾ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಚಾಲೆಜಿಂಗ್ ಸ್ಟಾರ್ ದರ್ಶನ್ ಒಳ್ಳೆಯ ನಟರು. ಅವರ ವಿರುದ್ದದ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಅಂತಹದ್ದೊಂದು ಘಟನೆ ಆಗಬಾರದಿತ್ತು. ಹಾಗೆಯೇ ದರ್ಶನ್‌ರವರ ಜೀವನದಲ್ಲಿ ಈ ತರಹ ಆಗಬಾರದಿತ್ತು ಎಂದ ಅನಿರುದ್ಧ್‌  ಈ ಪ್ರಕರಣ ಚಿತ್ರರಂಗದವರಿಗೆ ಮಾತ್ರವಲ್ಲ ಎಲ್ಲರಿಗೂ ಎಚ್ಚರಿಕೆ ಗಂಟೆ ಎಂದರು. 

ಅಲ್ಲದೆ  ಸಾಮಾಜಿಕ ಜಾಲತಾಣವನ್ನ ಹೇಗೆ ಬಳಸಿಕೊಳ್ತಿನಿ ಎಂಬುದು ತಿಳಿದುಕೊಳ‍್ಳಬೇಕು. ಎಲ್ಲದಕ್ಕೂ ಕಾನೂನು ಇದೆ, ಸೈಬರ್ ಠಾಣೆಗೆ ದೂರು ಕೊಟ್ಟಿದ್ರೆ ಈ ರೀತಿ ಆಗುತ್ತಿರಲಿಲ್ಲ. ತುಂಬಾ ಬೇಜಾರಿನ ವಿಷಯ ಎಂದಿದ್ದಾರೆ. 

Actor Anirudh addressed the press at the Shivamogga Press Trust regarding the recent case involving actor Darshan