ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬೀಸಲಿದೆ ಬಾರೀ ಗಾಳಿ! ಹವಾಮಾನ ಸೂಚನೆ ವಿವರ ಇಲ್ಲಿದೆ

Strong winds are likely to blow in Shivamogga district today! Here's the weather forecast

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬೀಸಲಿದೆ ಬಾರೀ ಗಾಳಿ! ಹವಾಮಾನ ಸೂಚನೆ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jul 9, 2023 SHIVAMOGGA NEWS  

ಶಿವಮೊಗ್ಗ  ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಬಿಡುವು ಕೊಟ್ಟಿದೆ. ಅಬ್ಬರದ ವರ್ಷಧಾರೆಯ ಸೂಚನೆಯನ್ನ ಕೊಟ್ಟಿದ್ದ ವರುಣ, ಕೃಷಿಚಟುವಟಿಕೆಗೆ ಅನುವು ಮಾಡಿಕೊಟ್ಟಹಾಗಿದೆ. ಈ ನಡುವೆ ಮಳೆ ಬರದ ಆತಂಕವೂ ಮುಂದುವರಿದಿದೆ. ಏಕೆಂದರೆ ಮಲೆನಾಡಿನ ಡ್ಯಾಂಗಳಲ್ಲಿ ಕಳೆದವರ್ಷಕ್ಕಿಂತ ಬಹಳ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದೆ. 

ಇನ್ನೂ ಐಎಂಡಿ (Imd bangalore) ವರದಿ ಪ್ರಕಾರ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ  30- 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜಿಲ್ಲಾವಾರು ವರದಿಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಶಿವಮೊಗ್ಗದ ಶೇಕಡಾ 75 ರಷ್ಟು ಪ್ರದೇಶಗಳಲ್ಲಿ ಗರಿಷ್ಟ  64 ಮಿಲಿಮೀಟರ್​ವರೆಗೂ ಮಳೆಯಾಗುವ ಸಾಧ್ಯತೆ ಇದೆಯಂತೆ. ಇನ್ನೊಂದೆಡೆ ಎಚ್ಚರಿಕೆಯ ವಿಭಾಗದ ರಾಜ್ಯದ ನಕ್ಷೆಯಲ್ಲಿ ಶಿವಮೊಗ್ಗಕ್ಕೆ ಹಳದಿ ಬಣ್ಣವನ್ನು ನೀಡಲಾಗಿದ್ದು, ಬಾರೀ ಮಳೆ ಹಾಗೂ ಗಾಳಿ ಸೂಚನೆ ನೀಡಲಾಗಿದೆ. 

ಇನ್ನೂ ವಾತಾವರಣ ಗಮನಿಸಿದರೆ ನಿನ್ನೆ ಮತ್ತು ಇವತ್ತು ಮಳೆ ತಗ್ಗಿದೆ,  ಹನಿಕುತ್ತಿದ್ದ ಮೋಡಗಳು ಕಳೆದು ಬಿಸಿಲು ಹಲವೆಡೆ ಬೆಳಗುತ್ತಿದೆ. ಕಳೆದ  24 ಗಂಟೆಯಲ್ಲಿ ಮಾಣಿ  59 ಮಿ.ಮೀ  , ಯಡೂರಿನಲ್ಲಿ 67 ಮಿ.ಮೀ , ಹುಲಿಕಲ್‌ನಲ್ಲಿ 73 ಮಿ.ಮೀ , ಮಾಸ್ತಿಕಟ್ಟೆ 50 ಮಿ.ಮೀ , ಚಕ್ರ 49 ಮಿ.ಮೀ  , ಸಾವೆಹಕ್ಲು 64 ಮಿ.ಮೀ ಮಳೆ ಸುರಿದಿದೆ.