ಶಿವಮೊಗ್ಗ | ಇವತ್ತು ಮಳೆ ಉಂಟಾ | ಹವಾಮಾನ ಇಲಾಖೆ ವರದಿಯಲ್ಲಿ ಏನಿದೆ?

The India Meteorological Department (IMD) has forecast no rain in Shivamogga for the next two days. However, heavy rainfall is expected to continue in the coastal districts of Dakshina Kannada and Udupi.

ಶಿವಮೊಗ್ಗ | ಇವತ್ತು ಮಳೆ ಉಂಟಾ | ಹವಾಮಾನ ಇಲಾಖೆ ವರದಿಯಲ್ಲಿ ಏನಿದೆ?
India Meteorological Department (IMD)

SHIVAMOGGA | MALENADUTODAY NEWS | May 27, 2024 12:00 PM  ಮಲೆನಾಡು ಟುಡೆ 

ಶಿವಮೊಗ್ಗದದಲ್ಲಿ ಇನ್ನೆರಡು ದಿನ ಮಳೆಯಾಗುವ ಮನ್ಸೂಚನೆಯಿಲ್ಲ ಐಎಂಡಿ ಬೆಂಗಳೂರು ನೀಡಿರುವ ಇವತ್ತಿನ ಹವಾಮಾನ ವರದಿ ಪ್ರಕಾರ, ಇನ್ನೆರಡು ದಿನಗಳಲ್ಲಿ ಶಿವಮೊಗ್ಗದಲ್ಲಿ ಯಾವುದೇ ಅಲರ್ಟ್‌ ನೀಡಲಾಗಿಲ್ಲ.  ಉಳಿದಂತೆ ರಾಜ್ಯದ ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಇ

ನ್ನೂ  ಹವಾಮಾನ ಇಲಾಕೆ ಹಾಗೂ ಎನ್‌ಡಿಆರ್‌ಎಫ್‌ನ ಆಪ್‌ ಪ್ರಕಾರ, ಇವತ್ತು ಶಿವಮೊಗ್ಗದಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 10 ರಿಂದ 12 ಗಂಟೆಯವರೆಗೂ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ವಾತಾವರಣ ಗರಿಷ್ಟ 29.70 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆಯಂತೆ. 

ಮೇ 27 ಹಾಗೂ 28 ರಂದು ಕರಾವಳಿಯ  ಎರಡು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಸೂಚನೆ ನೀಡಲಾಗಿದೆ. ಉಳಿದಂತೆ, ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ , ಕಲಬುರಗಿ, ಕೊಪ್ಪಳ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ತಿಳಿಸಿದೆ.ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದ ಜಿಲ್ಲೆ ಗಳಲ್ಲಿ ಸಾಧಾರಣ ಮಳೆ ಸಾಧ್ಯತೆಯಿದೆ.




The India Meteorological Department (IMD) has forecast no rain in Shivamogga for the next two days. However, heavy rainfall is expected to continue in the coastal districts of Dakshina Kannada and Udupi. A yellow alert has been issued for these two districts on May 27th and 28th. Light to moderate rain is expected in other parts of the state, including Bagalkote, Belagavi, Bidar, Dharwad, Gadag, Haveri, Kalaburagi, Koppal, Yadgir, and Vijayapura districts.