ಭದ್ರಾ ಜಲಾಶಯಕ್ಕೆ ಒಂದೆ ದಿನ ಒಂದುವರೆ ಅಡಿ ನೀರು | ಇಲ್ಲಿದೆ ರೈತರಿಗೆ ಸಿಹಿಸುದ್ದಿ

Bhadra Dam at Lakkavalli had risen by 1.5 feet in 24 hours, with an inflow of 8,655 cusecs, 

ಭದ್ರಾ ಜಲಾಶಯಕ್ಕೆ ಒಂದೆ ದಿನ ಒಂದುವರೆ ಅಡಿ ನೀರು | ಇಲ್ಲಿದೆ ರೈತರಿಗೆ ಸಿಹಿಸುದ್ದಿ
bhadra dam water level today 2024

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   bhadra dam water level today 2024

ಮಳೆಯ ಆಶೀರ್ವಾದ ಮಲೆನಾಡಿಗೆ ಸಿಗುತ್ತಿದೆ. ಪರಿಣಾಮವಾಗಿ ರೈತರ ಜೀವನಾಡಿಯಾಗಿರುವ ಭದ್ರಾ ಡ್ಯಾಂಗೆ ಭರಪೂರ ನೀರು ಹರಿಯುತ್ತಿದೆ. ಇದು ಡ್ಯಾಂ ತುಂಬುವ ಆಶಾಭಾವನೆ ಮೂಡಿಸಿದೆಯಷ್ಟೆ ಅಲ್ಲದೆ ಬೇಸಿಗೆಯಲ್ಲಿ ಸಮರ್ಪಕ ನೀರು ಸಿಗುವ ವಿಶ್ವಾಸ ನೀಡುತ್ತಿದೆ.  ಲಕ್ಕವಳ್ಳಿಯಲ್ಲಿ ಇರುವ ಭದ್ರಾ ಜಲಾಶಯದಲ್ಲಿ ನಿನ್ನೆ ಶುಕ್ರವಾರದ ಲಭ್ಯವಾದ ಅಂಕಿ ಅಂಶಗಳ ಪ್ರಕಾರ,  24 ಗಂಟೆಗಳಲ್ಲಿ 1.5 ಅಡಿಯಷ್ಟು ಜಲಾಶಯದ ಮಟ್ಟ ಏರಿಕೆ ಕಂಡಿದೆ. 

ಬರೋಬ್ಬರಿ 8,655 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿಬಂದಿದೆ. ಇದು ಗುರುವಾರಕ್ಕಿಂತಲೂ ಎರಡು ಪಟ್ಟು ಹೆಚ್ಚಿದೆ. ಆದಾಗ್ಯು ಕಳೆದ ಸಾಲಿಗೆ ಹೋಲಿಸಿದರೆ ಜಲಾಶಯದ ಮಟ್ಟ ಇನ್ನೂ ಸುಮಾರು 15 ಅಡಿ ಕಡಿಮೆ ಇದ್ದು, ನಿನ್ನೆಯ ಅಂಕಿ ಅಂಶದ ಪ್ರಕಾರ, ಡ್ಯಾಂನ ನೀರಿನ ಮಟ್ಟ 122.3 ರಷ್ಟಿದೆ. 

 

The Bhadra Dam at Lakkavalli had risen by 1.5 feet in 24 hours, with an inflow of 8,655 cusecs,