ಮಂಗನ ಕಾಯಿಲೆ ! ಶಿವಮೊಗ್ಗದಲ್ಲಿ ಸಿದ್ದಾಪುರ ತಾಲ್ಲೂಕಿನ ಮಹಿಳೆ ಸಾವು! ನಡೆದಿದ್ದೇನು?
Monkey disease! Woman dies in Siddapur taluk in Shivamogga What happened?
SHIVAMOGGA Feb 27, 2024 ಕೆಎಫ್‍ಡಿ : ಸಿದ್ದಾಪುರ ತಾಲ್ಲೂಕಿನ ಮಹಿಳೆ ಸಾವು
ಕೆಎಫ್‍ಡಿ ಪಾಸಿಟಿವ್ ಹೊಂದಿದ್ದ ನಾಗಮ್ಮ ಸುಬ್ಬ ಮಡಿವಾಳ, ವಯಸ್ಸು 57 ವರ್ಷ, ಜಿಡ್ಡಿ ಉಪಕೇಂದ್ರ ಕೋರ್ಲಕೈ, ಸಿದ್ದಾಪುರ ತಾಲ್ಲೂಕು ಇವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದೆ ಪ್ರಕಟಣೆಯಲ್ಲಿ?
ಜ.28 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಇವರಿಗೆ ಕೆಮ್ಮು ಮತ್ತು ಜ್ವರ ಇರುವುದು ಗೊತ್ತಾಗಿ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿದ್ದು ರೋಗಿಯು ತಾನು ಆರಮಾಗಿ ಇರುವುದಾಗಿ ಹೇಳಿರುತ್ತಾರೆ. ತದನಂತರ ರೋಗಿಯು ಜ.29 ರಂದು ಸಾಗರದ ಭಾಗವತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ.
ಜ.30 ರಂದು ಮನೆ ಭೇಟಿ ಸಮಯದಲ್ಲಿ ಜ್ವರ ಅವರಿಗೆ ಜ್ವರ ಇರುವ ಕಾರಣ ಸಮುದಾಯ ಆರೋಗ್ಯಾಧಿಕಾರಿಗಳು ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿ, ಫೆ.1 ರಂದು ಕೆಎಫ್‍ಡಿ ಆರ್‍ಟಿಪಿಸಿಆರ್ ಪಾಸಿಟಿವ್ ಎಂದು ವಿಡಿಎಲ್ ಶಿವಮೊಗ್ಗದಿಂದ ವರದಿ ಬಂದಿರುತ್ತದೆ.
ಫೆ.2 ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿರುತ್ತಾರೆ.
ಅಲ್ಲಿಯೂ ಚೇತರಿಕೆ ಆಗದ ಕಾರಣ ಕೆಎಂಸಿ ಮಣಿಪಾಲಕ್ಕೆ ಫೆ.04 ರಂದು ರೆಫರ್ ಮಾಡಿದ್ದು ಅದೇ ದಿನ ಹೋಗಿ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿರುತ್ತಾರೆ. ಐಸಿಯು ನಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಫೆ.5 ರಂದು ಮರು ರಕ್ತ ಪರೀಕ್ಷೆ ಮಾಡಲಾಗಿ ಫೆ.06 ರಂದು ಕೆಎಫ್‍ಡಿ ಪಾಸಿಟಿವ್ ವರದಿ ಬಂದಿರುತ್ತದೆ.
ಫೆ.24 ರಂದು ವೈದ್ಯರ ಸಲಹೆ ವಿರುದ್ದವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30 ಕ್ಕೆ ಬಿಡುಗಡೆ ಹೊಂದಿರುತ್ತಾರೆ. ಆರೋಗ್ಯ ಇಲಾಖೆಯವರು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಿರುತ್ತಾರೆ. ಆದರೆ ಅವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆಂದು ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.