ದುಡಿಯುವ ಹುಡುಗಿಯನ್ನ ಹಾಸಿಗೆ ಹಿಡಿಸಿದ ವಿಧಿ! ಬೇಕಿದೆ ಮಾನವೀಯತೆಯ ನೆರವು! ಸಹಾಯಮಾಡಿ ಪ್ಲೀಸ್

A working girl is bedridden! need humanitarian help! Please help

ದುಡಿಯುವ ಹುಡುಗಿಯನ್ನ ಹಾಸಿಗೆ ಹಿಡಿಸಿದ ವಿಧಿ! ಬೇಕಿದೆ ಮಾನವೀಯತೆಯ ನೆರವು! ಸಹಾಯಮಾಡಿ ಪ್ಲೀಸ್
A working girl is bedridden! need humanitarian help! Please help

Shivamogga Feb 13, 2024 | ಯಾರೇ ಆದರೂ ಕಷ್ಟಕ್ಕಾಗಬೇಕು. ಅದನ್ನೆ ಮನುಷ್ಯತ್ವ ಎಂದುಕೊಳ್ಳಬಹುದು. ಈ ಮಾತು ಹೇಳೋದಕ್ಕೂ ಕಾರಣವಿದೆ. ಶಿವಮೊಗ್ಗದ ಹೊಸನಗರದ ಯುವತಿಯೊಬ್ಬರಿಗೆ ಇದೀಗ ಮಾನವೀಯ ಸಹಾಯ ಬೇಕಾಗಿದೆ.  ತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ನಿವಾಸಿ ಶಂಕರಪ್ಪ ಮತ್ತು ಸಾವಿತ್ರಿ ದಂಪತಿಯ ಪುತ್ರಿ ಕು. ಮಾಲಿನಿ ಅಚಾನಕ್ ಆಗಿ ಸಂಭವಿಸಿದ ಅಪಘಾತದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ಬಲ ಸಿಗುತ್ತಿಲ್ಲ. ಅದಕ್ಕಾಗಿ ಕೊಡುಗೈಗಳ ಬೆಂಬಲವನ್ನ ನಿರೀಕ್ಷಿಸಿ ಕೈ ಚಾಚಿದ್ದಾರೆ. 

ಕಳೆದ  ಫೆ.10 ರಂದು ಮಧ್ಯಾಹ್ನ ಬೈಕ್‌ನಲ್ಲಿ ಹೋಗುವಾಗ ಹೊಸನಗರದ ಆರೋಡಿ 30 ಅಪಘಾತವಾಗಿ ಮಾಲಿನಿಯವರ ಕಾಲಿನ ಮೂಳೆ ಮುರಿದಿದೆ. ಅವರನ್ನ ಆ ತಕ್ಷಣವೆ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ. ಚಿಕಿತ್ಸೆಗಾಗಿ ಲಕ್ಷಾಂತರ ರೂ. ವೆಚ್ಚವಾಗಲಿದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಅವರ ಕುಟುಂಬ ಮಾಲಿನಿಯ ದುಡಿಮೆಯಿಂದಲೇ ಸಾಗಬೇಕು. ಜೊತೆಗೆ ಮಾಲಿನಿಯ ತಂದೆ ಅಂಗವಿಕಲರಾಗಿದ್ದು ತಾಯಿ ಅವರಿಗೂ ಥೈರಾಯ್ಡ್ ಸಂಬಂಧಿ ಕಾಯಿಲೆಯಿಂದ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಯಾಗಿದ್ದು ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ದಿನದ ದುಡಿಮೆಯಿಂದ ಜೀವನ ಸಾಗಿಸುವ ಕುಟುಂಬಕ್ಕೆ ಮಗಳ ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದು ದಾನಿಗಳ, ಸಂಘಟನೆಗಳ ಆರ್ಥಿಕ ನೆರವಿನ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದೆ. ಸಹಾಯಕ್ಕೆ ಮನವಿ ಮಾಡಿದ್ದಾರೆ.

ಕಡು ಬಡ ಕುಟುಂಬದವರಾದ ನಮಗೆ ಆಸ್ಪತ್ರೆ ವೆಚ್ಚವನ್ನು ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ನಿಮ್ಮ ಕೈಲ್ಲಾದಷ್ಟು ಸಹಾಯ ಧನ ಮಾಡುವಂತೆ ವಿನಂತಿಸಿದ್ದಾರೆ. ಸಹಾಯಧನೆ ಮಾಡಲಿಚ್ಚಿಸುವವರು Google pay Number: 8088648500 (Malini HS) A ಹಣ ಜಮೆ ಮಾಡಬಹುದು.