Gondi dam | ಗೋಂದಿ ಆಣೆಕಟ್ಟಿನ ಅಪಾಯಕಾರಿ ಸ್ಥಳದಲ್ಲಿ ಜನರ ಈಜಾಟ | ಪೊಲೀಸರ ವಾರ್ನಿಂಗ್‌

People swim at dangerous site of Gondi dam | Police warning

Gondi dam |  ಗೋಂದಿ ಆಣೆಕಟ್ಟಿನ ಅಪಾಯಕಾರಿ ಸ್ಥಳದಲ್ಲಿ ಜನರ ಈಜಾಟ | ಪೊಲೀಸರ ವಾರ್ನಿಂಗ್‌
Gondi dam

Shivamogga  Apr 15, 2024 Gondi dam  ಶಿವಮೊಗ್ಗದಲ್ಲಿ ಸೆಖೆ ಮೊದಲೇ ಹೆಚ್ಚಾಗಿದೆ. ಇದರ ನಡುವೆ ಹಾಗೊಂದು ಹೀಗೊಂದು ಕೊಂಗಾಟದ ವರ್ಷದ ಮೊದಲ ಮಳೆ ಬಂದು ಹೋಗಿದ್ದು, ಕಾಸಿದ ಕಬ್ಬಿಣದ ಮೇಲೆ ನೀರು ಹುಯ್ದದಂತಾಗಿದೆ. ಪರಿಣಾಮ ಜನರು ಜಲಮೂಲಗಳಲ್ಲಿ ಈಜಾಡುತ್ತಾ ಬಿಸಿಲ ಝಳ ಕಡಿಮೆ ಮಾಡಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಜಲಕ್ರೀಡೆ ಅಪಾಯಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ  ಎಂಬುದನ್ನ ಮರೆತು ಜನರು ನದಿ, ಹಳ್ಳ, ಕೊಳ್ಳಗಳಲ್ಲಿ ಈಜಾಡುತ್ತಿರುವುದು ಪೊಲೀಸ್‌ ಇಲಾಖೆಯ ಗಮನಕ್ಕೂ ಬಂದಿದೆ. 

ಇದಕ್ಕೆ ಸಾಕ್ಷಿ ಎಂಬಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಬರುವ ಗೋಂದಿ ಆಣೆಕಟ್ಟಿನಲ್ಲಿ ಜನರು ಅಪಾಯವನ್ನು ಲೆಕ್ಕಿಸದೇ ಈಜಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಬೇಸಿಗೆಯ ಬಿಸಿ ತಣಿಸಿಕೊಳ್ಳಲು ನೀರಿನಾಶ್ರಯ ಪಡೆಯುತ್ತಿರುವ ಜನರು ಅಲ್ಲಿಯೇ ಇರುವ ಅಪಾಯಕಾರಿ ಸ್ಥಳಗಳಲ್ಲಿ ಜಾಗ್ರತೆ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೂರು ಕೇಳಿದ ಬಂದ ತಕ್ಷಣವೇ ಅಲರ್ಟ್‌ ಆದ ಪೊಲೀಸರು ಸ್ಥಳಕ್ಕೆ ತೆರಳಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸಾರ್ವಜನಿಕರಿಗೆ ಸ್ಥಳದಲ್ಲಿ ಈಜುವುದು ಎಷ್ಟು ಅಪಾಯಕಾರಿ ಎಂದು ಮನವರಿಕೆ ಮಾಡಿ ಅಲ್ಲಿದ್ದವರಿಗೆ ತಿಳುವಳಿಕೆ ಮೂಡಿಸಿದ್ದಾರೆ.