ಮನೆ ಮುಂದೆನೇ ಬೈಕ್‌ ನಿಲ್ಲಿಸಿದರೂ ಇರಲಿ ಎಚ್ಚರ! ಬಾಗಿಲಿಗೆ ಬರುವ ಕಳ್ಳರು ನೀಡ್ತಿದ್ದಾರೆ ಶಾಕ್!‌

Thieves steal bike parked in front of house bike theft

ಮನೆ ಮುಂದೆನೇ ಬೈಕ್‌ ನಿಲ್ಲಿಸಿದರೂ ಇರಲಿ ಎಚ್ಚರ!  ಬಾಗಿಲಿಗೆ ಬರುವ ಕಳ್ಳರು ನೀಡ್ತಿದ್ದಾರೆ ಶಾಕ್!‌
bike theft

Shivamogga  Apr 15, 2024  ಹಳೆಯ ಶಿವಮೊಗ್ಗದಲ್ಲಿ  ಇವತ್ತು ಬೆಳಗ್ಗಿನ ಜಾವ ಕಳ್ಳತನದ ಘಟನೆಯೊಂದು ನಡೆದಿದ್ದು ಪ್ರತಿಯೊಬ್ಬ ವಾಹನ ಸವಾರರು ಎಚ್ಚೆತ್ತುಕೊಳ್ಳುವ  ವಿಚಾರ ಇದರಲ್ಲಿದೆ. 

ನಡೆದಿದ್ದೇನು?

ಹಳೆಯ ಶಿವಮೊಗ್ಗದ ಪ್ರಮುಖ ಏರಿಯಾವಾದ ಹೆಚ್‌ ಸಿದ್ದಯ್ಯರಸ್ತೆಯ ಕೋರಿ ಪುಟ್ಟಪ್ಪನ ಕಾಂಪೌಂಡ್‌ನಲ್ಲಿ ಮನೆಯ ಮುಂದೆ ಕವರ್‌ ಹಾಕಿ ನಿಲ್ಲಿಸಿದ್ದ ಹೋಂಡಾ ಡ್ರೀಮ್‌ ಯುಗ್‌ ಬೈಕ್‌ನ್ನ ಕಳ್ಳರು ಬೆಳಗಿನ ಜಾವ ಕಳ್ಳತನ ಮಾಡಿದ್ದಾರೆ. ಹಲವು ಮನೆಗಳು ಒಟ್ಟೊಟಿಗೆ ಇರುವ ಓಣಿಗಳಲ್ಲಿ ಕಳ್ಳರು ಎಡತಾಕುವುದು ಅಷ್ಟು ಸುಲಭವಲ್ಲ ಮತ್ತು ಕಳ್ಳರಿಗೆ ಈ ಬಗ್ಗೆ ಭಯ ಜಾಸ್ತಿ. ಆದರೆ ಇವತ್ತು ಬೆಳಗ್ಗಿನ ಜಾವ ಮೂರು ಮೂವತ್ತರ ಸುಮಾರಿಗೆ ಓಣಿ ಒಳಗೆ ಬಂದ ಕಳ್ಳರಿಬ್ಬರು, ಮನೆಯೊಂದರ ಮುಂದೆ ನಿಲ್ಲಿಸಿದ್ದ ಕೆಎ 14 ಇಎನ್‌ 5550 ನಂಬರ್‌ನ ಬೈಕ್‌ನ ಹ್ಯಾಂಡಲ್‌ ಲಾಕ್‌ ಮುರಿದು ಓಣಿಯಿಂದ ಹೊರಕ್ಕೆ ತಳ್ಳಿಕೊಂಡು ಹೋಗಿದ್ದು, ಅಲ್ಲಿಂದ ಸ್ಟಾರ್ಟ್‌ ಮಾಡಿಕೊಂಡು ತೆರಳಿದ್ದಾರೆ. 

ಶಬ್ದವೇ ಭಾರದಂತೆ ಬೈಕ್‌ ಕಳ್ಳತನ ಮಾಡಿದಾದ್ದರೂ ಹೇಗೆ ಎಂಬುದು ನಿಗೂಢವಾಗಿದೆ. ಇನ್ನೂ ಸ್ಮಾರ್ಟ್‌ ಸಿಟಿಯ ಕ್ಯಾಮರಾಗಳು ಒಂದುಭಾಗವನ್ನ ಮಾತ್ರ ತಲುಪಿದ್ದು, ರವಿವರ್ಮ ಸರ್ಕಲ್‌ ಭಾಗಗಳಲ್ಲಿ ಕ್ಯಾಮರಾಗಳಿಲ್ಲ. ಇದು ಕಳ್ಳರಿಗೆ ವರದಾನವಾಗಿದೆ. ಇನ್ನೂ ಹಳೆಶಿವಮೊಗ್ಗದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು, ಕೆಲವೇ ದಿನಗಳ ಅಂತರದಲ್ಲಿ ಮೂರು ಬೈಕ್‌ ಕಳ್ಳತನ ನಡೆದಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಗಂಭೀರ ನಿಗಾವಹಿಸಬೇಕಿದೆ.  ಇನ್ನೂ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಒದಗಿಸಲಾಗಿದ್ದು, ಈ ಸಂಬಂಧ ಎಫ್‌ಐಆರ್‌ ಇನ್ನಷ್ಟೆ ದಾಖಲಾಗಬೇಕಿದೆ.