ಹೆಂಡ್ತಿಗೆ ಹುಷಾರಿಲ್ಲ ಪ್ರಕರಣ | ಒಂದು ಕಾರಿನ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದು 8 ಕಾರು! ಹೇಗೆ ಗೊತ್ತಾ?

Here is the details of the case that took place in the jurisdiction of Doddapete Police Stationದೊಡ್ಡಪೇಟೆ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ವಿವರ ಇಲ್ಲಿದೆ

ಹೆಂಡ್ತಿಗೆ ಹುಷಾರಿಲ್ಲ ಪ್ರಕರಣ |  ಒಂದು ಕಾರಿನ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದು 8 ಕಾರು! ಹೇಗೆ ಗೊತ್ತಾ?

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS

Shivamogga |   ಮಲೆನಾಡು ಟುಡೆ ಇತ್ತೀಚೆಗೆ ಕಾರು ಪಡೆದು ವಾಪಸ್ ಕೊಡದ ಸುದ್ದಿ ಬಗ್ಗೆ ವರದಿ ಮಾಡಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ಇದೀಗ ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ 

READ : ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

ದಿನಾಂಕಃ 18-10-2023  ರಂದು ಶಿವಮೊಗ್ಗ ಟೌನ್ ಆರ್.ಎಂ.ಎಲ್ ನಗರದ ವಾಸಿ ಸೈಯದ್ ಸಾದಿಕ್ ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ @ ಗುಂಡ ಎಂಬಾತ ತೆಗೆದುಕೊಂಡು ಹೋಗಿದ್ದ. ಆನಂತರ ಕಾರನ್ನ ವಾಪಸ್​ ಕೊಡದೇ ಪೋನ್ ಸ್ವಿಚ್​ ಆಫ್​ ಮಾಡಿಕೊಂಡಿದ್ದ. 

ಈ ಬಗ್ಗೆ ಅನುಮಾನಗೊಂಡ ಸಂತ್ರಸ್ತರು ದೂರು ನೀಡಿದ್ದರು.  ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ಸಂಖ್ಯೆ 0380/2023 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖಾ ತಂಡ ರಚನೆಯಾಗಿತ್ತು.  ಅಂಜನ್ ಕುಮಾರ್, ಪಿಐ ದೊಡ್ಡಪೇಟೆ, ಪೊಲೀಸ್‌ ಠಾಣೆ ರವರ ನೇತೃತ್ವದದಲ್ಲಿ  ಮಂಜಮ್ಮ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ - ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ಪಿಸಿ - ರಮೇಶ್,  ನಿತಿನ್ ಮತ್ತು ಚಂದ್ರನಾಯ್ಕ ರವರುಗಳನ್ನೊಳಗೊಂಡ ತನಿಖಾ ತಂಡ ಇದೀಗ ಆರೋಪಿಯನ್ನ  ಬಂಧಿಸಿದೆ. 

ಅಲ್ಲದೆ ಆರೋಪಿ ಬಂಧನದ ವೇಳೆ ಒಟ್ಟು 8 ಕಾರುಗಳು ಪತ್ತೆಯಾಗಿವೆ. ದಿನಾಂಕಃ 06-11-2023  ರಂದು  ಪ್ರಕರಣದ ಆರೋಪಿ ಕಿರಣ್ ಎ @ ಗುಂಡಾ, 35 ವರ್ಷ, ಕಾರು ಚಾಲಕ ವೃತ್ತಿ ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 10,00,000/- ರೂಗಳ  2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್  ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 08 ಕಾರುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಆರೋಪಿ ಕಳ್ಳತನ ಮಾಡುತ್ತಿದ್ದನಾ? ಅಥವಾ ಕಾರುಗಳನ್ನ ಪಡೆದು ಮೋಸ ಮಾಡುತ್ತಿದ್ದನಾ? ಆತನ ವಿರುದ್ಧದ ಆರೋಪವೇನು ಎಂಬುದು ಸ್ಪಷ್ಟವಾಗಿಲ್ಲ