ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

The case took place under the jurisdiction of Doddapete police station in Shimoga. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದ ಪ್ರಕರಣ,

ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

SHIVAMOGGA |  ಪತ್ನಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಕೇಳಿದ ವ್ಯಕ್ತಿಗೆ , ತನ್ನ ಕಾರನ್ನ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (Doddapete Police Station) ವ್ಯಾಪ್ತಿಯಲ್ಲಿ ನಡೆದಿದೆ. 

ಇಲ್ಲಿನ ನಿವಾಸಿಯೊಬ್ಬರು ತಮ್ಮ ಏರಿಯಾದಲ್ಲಿ ಟಿ ಅಂಗಡಿ ನಡೆಸ್ತಿದ್ದ ವ್ಯಕ್ತಿಯೊಬ್ಬರ ಪರಿಚಯದಲ್ಲಿದ್ದರು. ಪರಿಚಯಸ್ತ ವ್ಯಕ್ತಿಯು ತನ್ನ ಹೆಂಡತಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಹೀಗಾಗಿ ನಿಮ್ಮ ಕಾರನ್ನ ಸ್ವಲ್ಪ ಕೊಡಿ ಎಂದು ಟಿ ಕುಡಿಯಲು ಬಂದಿದ್ದ ವೇಳೆ ದೂರುದಾರರಿಗೆ ಹೇಳಿದ್ದಾರೆ. 

READ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ | ಸಂದರ್ಶನ ಯಾವಾಗ ಗೊತ್ತಾ?

ಇದನ್ನ ನಂಬಿದ ಸಂತ್ರಸ್ತರು ತಮ್ಮ ಕಾರನ್ನು ತಾವೆ ಖುದ್ದಾಗಿ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಆದರೆ ಟೀ ಅಂಗಡಿಯವ ಕಾರನ್ನ ವಾಪಸ್​ ಅದರ ಮಾಲಿಕರಿಗೆ ಮುಟ್ಟಿಸಲಿಲ್ಲ. ಇದರಿಂದ ಅನುಮಾನಗೊಂಡು ಫೋನ್ ಮಾಡಿದರು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದು ಗೊತ್ತಾಗಿದೆ. ವಾಹನ ಜಿಪಿಎಸ್ ಚೆಕ್ ಮಾಡಿದರೆ, ಅದು ನೆರೆಯ ಜಿಲ್ಲೆಯಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ತಮ್ಮ ಕಾರನ್ನ ಯಾರಿಗೋ ಮಾರಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.