ಚಿನ್ನ ಕದ್ದ ಅಡುಗೆ ಬಟ್ಟ! ಪೊಲೀಸರ ಕೈಗೆ ಸಿಕ್ಕಿಬಿದ್ದ ಪಾಪಿ! ಏನಿದು ಪ್ರಕರಣ?

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

CHIKKAMAGALURU | ಆರ್ಟಿಫಿಷಿಯಲ್​ ಸರಗಳನ್ನು ಕದಿಯುತ್ತಿದ್ದ ಸಂಪತ್ ಕುಮಾರ್ ಅಲಿಯಾಸ್​ ಪಾಪಿ ಎಂಬ 30 ವರ್ಷದ ಯುವಕನನ್ನ ಆಲ್ದೂರು ಪೊಲೀಸರು ಬಂಧಿಸಿದ್ದಾರೆ. 

ಇಲ್ಲಿನ ತೋರಣ ಮಾವು ನಿವಾಸಿಯೊಬ್ಬರ ಮನೆಯಲ್ಲಿ  ಕಳದೆ ಅಕ್ಟೋಬರ್​ 29ರಂದು ಕಳ್ಳತನ ನಡೆದಿತ್ತು. ಮಾಲೀಕರು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಕಳ್ಳತನ ವೆಸಗಿದ್ದರು. ಸುಮಾರು 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು ಮಾಡಲಾಗಿತ್ತು. 

READ : ಧಗಧಗ ಅಂತಿದ್ದ ಮನೆಯೊಳಗೆ ನುಗ್ಗಿ ಇಬ್ಬರ ಜೀವ ಉಳಿಸಿದ ಮಹಿಳೆಯರು! ಏನಿದು ಘಟನೆ

ಈ  ಪ್ರಕರಣದ ತನಿಖೆ ಕೈಗೊಂಡ ಪೊಲೀಸರು  ತೋರಣಮಾವು ನಿವಾಸಿ ಶಾಂತಪ್ಪ ಅಲಿಯಾಸ್ ಸಂಪತ್ತಕುಮಾರ ಅಲಿಯಾಸ್ ಪಾಪಿ (30) ಎಂಬಾತನನ್ನು ಬಂಧಿಸಿದ್ದಾರೆ.  ಅಡುಗೆ ಕೆಲಸ ಮಾಡ್ತಿದ್ದ ಈತ ಕಳವು ಮಾಡಿದ್ದ ಆಭರಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. 

ಸದ್ಯ ಆರೋಪಿಯಿಂದ ಕಳುವಾದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದ್ದು, ಈ  ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಅಕ್ಷಿತಾ ಕೆ.ಪಿ, ಕೀರ್ತಿ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.


Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು