KARNATAKA NEWS/ ONLINE / Malenadu today/ Nov 3, 2023 SHIVAMOGGA NEWS
CHIKKAMAGALURU | ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ಸಾವೊಂದು ಸಂಭವಿಸಿತ್ತು. ಆ ವ್ಯಕ್ತಿಯ ಅಂತ್ಯಕ್ರಿಯೆಗೆ ಅಲ್ಲಿದ್ದವರೆಲ್ಲಾ ತೆರಳಿದ್ದರು, ಮನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಷ್ಟೆ ಉಳಿದುಕೊಂಡಿದ್ದರು. ಅಷ್ಟೊತ್ತಿಗೆ ಇದ್ದಕ್ಕಿದ್ದ ಹಾಗೆ ಒಂದು ಮನೆ ಹೊತ್ತಿ ಉರಿಯಲು ಆರಂಭವಾಗಿತ್ತು.
ಗೃಹಚಾರಕ್ಕೆ ಆ ಮನೆಯಲ್ಲಿ ಒಬ್ಬ ಯಜಮಾನ ಮಲಗಿದ್ದ, ಮದ್ಯಪಾನ ಮಲಗಿದ್ದ ಆತನಿಗೆ ಎಚ್ಚರಿಕೆ ಇರಲಿಲ್ಲ. ಇನ್ನೊಂದೆಡೆ ಪುಟ್ಟ ಮಗುವೊಂದು ಮಲಗಿತ್ತು. ಈ ಕಡೆ ಉರಿ ಆವರಿಸಿ, ಇಡೀ ಮನೆ ಧಗಧಗ ಅನ್ನಲು ಆರಂಭವಾಯ್ತು.
READ : ಉದ್ಯಮಿ ಸಿದ್ದಾರ್ಥ್ ರೀತಿಯಲ್ಲಿ ನೇತ್ರಾವತಿ ನದಿಗೆ ಹಾರಿದ ಚಿಕ್ಕಮಗಳೂರು ವ್ಯಾಪಾರಿ!
ಅದೇನೂ ಅದೃಷ್ಟವೋ ಏನೋ ಊರಲ್ಲಿದ್ದ ಮಹಿಳೆಯರೇ ಓಡಿ ಬಂದರು. ಒಂದಿಬ್ಬರು ಮನೆಯೊಳಗೆ ಜೀವದ ಹಂಗು ತೊರೆದು ನುಗ್ಗಿದ್ದಾರೆ.. ಹೇಳಿಕೇಳಿ ಗುಡಿಸಲು ಜೋಪಡಿ ಮನೆ, ಕೆಲವೇ ನಿಮಿಷಗಳಲ್ಲಿ ಬೂದಿಯಾಗುತ್ತಿದ್ದ ಮನೆಯೊಳಗೆ ನುಗ್ಗಿದ ಮಹಿಳೆಯರು ಮಗುವನ್ನ ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. ಯಜಮಾನನ್ನ ಎಳೆದು ತಂದು ಜೀವ ಉಳಿಸಿದ್ದಾರೆ.
ಕಲ್ಲೇಶ್ ಎಂಬುವರ ಗುಡಿಸಿಲಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋದರು ಸಹ ಊರಿನ ಹೆಂಗಸರ ಸಾಹಸದಿಂದ ಎರಡು ಜೀವ ಉಳಿಯಿತು. ಅಷ್ಟರಲ್ಲಿ ವಿಷಯ ತಿಳಿದು ವಾಪಸ್ ಆದ ಪುರುಷರು ಬೆಂಕಿ ಹರಡುವುದನ್ನ ತಪ್ಪಿಸಿದರು.