ಉದ್ಯಮಿ ಸಿದ್ದಾರ್ಥ್​ ರೀತಿಯಲ್ಲಿ ನೇತ್ರಾವತಿ ನದಿಗೆ ಹಾರಿದ ಚಿಕ್ಕಮಗಳೂರು ವ್ಯಾಪಾರಿ!

ಹಂಚಿಕೊಳ್ಳಿ
WhatsApp Facebook X Telegram
ಉದ್ಯಮಿ ಸಿದ್ದಾರ್ಥ್​ ರೀತಿಯಲ್ಲಿ ನೇತ್ರಾವತಿ ನದಿಗೆ ಹಾರಿದ ಚಿಕ್ಕಮಗಳೂರು ವ್ಯಾಪಾರಿ!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

DAKSHINA KANNADA| ಜಿಲ್ಲೆಯ ನೇತ್ರಾವತಿ ಸೇತುವೆ ಮೇಲಿನಿಂದ ಚಿಕ್ಕಮಗಳೂರು ಜಿಲ್ಲೆಯ ವ್ಯಾಪಾರಿಯೊಬ್ಬರು ಹಾರಿ ಸಾವನ್ನಪ್ಪಿದ್ದಾರೆ. ಈ ಹಿಂದೆ ನಡೆದಿದ್ದ ಉದ್ಯಮಿ ಸಿದ್ದಾರ್ಥರವರ ಮಾದರಿಯಲ್ಲಿಯೇ ಈ ಪ್ರಕರಣ ನಡೆದಿದೆ. 

ಉಳ್ಳಾಲದ ಸೇತುವೆ ಮೇಲಿಂದ ವ್ಯಾಪಾರಿಯು ನದಿಗೆ ಹಾರಿದ್ದಾರೆ. ಇದನ್ನ ಗಮನಿಸಿದವರು ಅವರ ಕಾರಿನ ಫೋಟೋ ವಾಟ್ಸ್ಯಾಪ್​ಗಳಲ್ಲಿ ಹಂಚಿಕೊಂಡು ಮೃತರ ಗುರುತು ಪತ್ತೆ ಮಾಡಿದ್ದಾರೆ. ಸೇತುವೆ ಮೇಲೆ ಕಾರು ನಿಲ್ಲಿಸಿ ಚಿಕ್ಕಮಗಳೂರು ಜಿಲ್ಲೆಯ ಪ್ರಸನ್ನ ಕುಮಾರ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೊತ್ತಂಬರಿ ಸೊಪ್ಪು ಮಾರಿದ ಹಣವನ್ನು ಪಡೆದು ಬರುವುದಾಗಿ ಹೇಳಿ ಹೋಗಿದ್ದ ಪ್ರಸನ್ನಕುಮಾರ್ ಯಾವ ಕಾರಣಕ್ಕೆ ನೀರಿಗೆ ಹಾರಿದರು ಎಂಬುದು ಇನ್ನೂ ಕೂಡ ನಿಗೂಢವಾಗಿದೆ. ಅವರಾಗಿಯೇ ನೀರಿಗೆ ಹಾರಿದ್ದನ್ನ ನೋಡಿದವರಿದ್ದಾರೆ. ಮತ್ತವರೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.  


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor