RBI New Rules / ಮಲೆನಾಡು ಟುಡೆ ಸುದ್ದಿ / ನವದೆಹಲಿ / ಇಎಂಐನಲ್ಲಿ ತಗೊಂಡ ಫೋನ್ಗೆ ಕಂತು ಕಟ್ಟದಿದ್ದರೇ ಇಡೀ ಫೋನ್ ಇದ್ದಕ್ಕಿದ್ದ ಹಾಗೆ ಲಾಕ್ ಮಾಡುವ ಕೆಲಸವನ್ನು ಆಯಾ ಕಂಪನಿಗಳು ಮಾಡುತ್ತಿದ್ದವು. ಇದಕ್ಕೆ ಗ್ರಾಹಕರಿಗೆ ತೋರಿಸಿ ತೋರದಂತೆ ಮೊದಲೇ ಸಹಿ ಮಾಡಿಸಿಕೊಳ್ಳುತ್ತಿದ್ದವು. ಅಲ್ಲದೆ ಬಾಕಿ ಕೊಟ್ಟಮೇಲೂ ಫೋನ್ ಅನ್‌ಲಾಕ್ ಆಗುತ್ತಿರಲಿಲ್ಲ. ಆದರೆ ಇಲ್ಲಿವರೆಗೂ ಇದ್ದ ಒಂದು ಲೆಕ್ಕವನ್ನು ಇನ್ಮೇಲೆ ಆರ್‌ಬಿಐ ಬೇರೆ ರೀತಿಯಲ್ಲಿ ಬರೆಯುತ್ತಿದೆ.
ಮಾಸಿಕ ಕಂತುಗಳ (ಇಎಂಐ) ಆಧಾರದ ಮೇಲೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಆರ್‌ಬಿಐ ನ ರೂಲ್ ನೆಮ್ಮದಿ ತರುತ್ತಿದೆ. ಗ್ರಾಹಕರು ತಮ್ಮ ಸಾಲದ ಸಂಪೂರ್ಣ ಬಾಕಿಯನ್ನ ಪಾವತಿಸಿದ ಬಳಿಕವೂ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್, ಫೈನಾನ್ಸ್ ಡಿವೈಸನ್ನ ತಕ್ಷಣವೇ ಅನ್‌ಲಾಕ್ ಮಾಡದಿದ್ದರೆ, ಅಂತಹ ಸಂಸ್ಥೆಗಳಿಗೆ ಪ್ರತಿ ಗಂಟೆಗೆ 250 ರೂಪಾಯಿಗಳ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಆರ್‌ಬಿಐ ರೂಪಿಸಿರುವ ಈ ನೂತನ ಕಠಿಣ ಫ್ರೇಮ್‌ವರ್ಕ್ 1 ಜನವರಿ 2027 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
- ಇತ್ತೀಚಿನ ದಿನಗಳಲ್ಲಿ ಇಎಂಐ ಪಾವತಿಯಲ್ಲಿ ವಿಳಂಬವಾದ ತಕ್ಷಣವೇ ಹಣಕಾಸು ಸಂಸ್ಥೆ ರಿಮೋಟ್ ಕಂಟ್ರೋಲ್ ಮೂಲಕ ಡಿವೈಸ್‌ಗಳನ್ನು ಲಾಕ್ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಆರ್‌ಬಿಐ ಈ ಕಠಿಣ ಹೆಜ್ಜೆ ಇಟ್ಟಿದೆ.
- ಹೊಸ ನಿಯಮಾವಳಿಗಳ ಪ್ರಕಾರ, ಯಾವ ನಿರ್ದಿಷ್ಟ ಎಲೆಕ್ಟ್ರಾನಿಕ್ ಡಿವೈಸ್ ಖರೀದಿಸಲು ಸಾಲ ಪಡೆಯಲಾಗಿದೆಯೋ, ಆ ಡಿವೈಸ್ ಮೇಲೆ ಮಾತ್ರ ರಿಮೋಟ್ ಬ್ಯಾನ್ ಹೇರಲು ಅವಕಾಶವಿದೆ.
- ಅಂದರೆ, ವೈಯಕ್ತಿಕ ಸಾಲ ಅಥವಾ ಗ್ರಾಹಕ ಸಾಲವನ್ನು ಪಡೆದುಕೊಂಡಿದ್ದು, ಅದು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಗೆ ನೇರವಾಗಿ ಸಂಬಂಧಿಸಿಲ್ಲದಿದ್ದರೆ, ಸಾಲ ವಸೂಲಾತಿಗಾಗಿ ಆ ಸಾಧನವನ್ನು ರಿಮೋಟ್ ಮೂಲಕ ಲಾಕ್ ಮಾಡುವಂತಿಲ್ಲ.
- ಇದರ ಜೊತೆಗೆ, ಡಿವೈಸ್‌ಗಳ ಮೇಲೆ ನಿರ್ಬಂಧ ಹೇರಲು ಆರ್‌ಬಿಐ ಸ್ಪಷ್ಟ ಪ್ರಕ್ರಿಯೆಯನ್ನು ನಿಗದಿಪಡಿಸಿದೆ. ಕೇವಲ ಒಂದು ಇಎಂಐ ಪಾವತಿ ವಿಫಲವಾದ ತಕ್ಷಣವೇ ಡಿವೈಸ್ ಅನ್ನು ಬಂದ್ ಮಾಡುವಂತಿಲ್ಲ.
- ಬದಲಾಗಿ, ಸಾಲದ ಖಾತೆಯು ಕನಿಷ್ಠ 30 ದಿನಗಳವರೆಗೆ ಓವರ್‌ಡ್ಯೂ ಆಗಿದ್ದಾಗ ಮಾತ್ರ ಆರಂಭಿಕ ನಿರ್ಬಂಧಗಳನ್ನು ವಿಧಿಸಬಹುದು. ಡಿವೈಸ್ ಅನ್ನು ಸಂಪೂರ್ಣವಾಗಿ ಲಾಕ್ ಮಾಡಲು ಬಾಕಿ ಮೊತ್ತವು 60 ದಿನಗಳವರೆಗೆ ಓವರ್‌ಡ್ಯೂ ಆಗಿರಬೇಕು ಎಂಬ ಕಡ್ಡಾಯ ಷರತ್ತನ್ನು ವಿಧಿಸಲಾಗಿದೆ.
