ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

A fight broke out in the family over a mobile missed call

ಮನೆಯೊಡೆದ ಮಿಸ್ ಕಾಲ್​! ಮೊಬೈಲ್​  ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ
ಮನೆಯೊಡೆದ ಮಿಸ್ ಕಾಲ್​! ಮೊಬೈಲ್​ ಕರೆ ವಿಚಾರಕ್ಕೆ ನಡೀತು ಸಂಸಾರದ ಯುದ್ಧ! ಹೊಡೆದಾಟ

MALENADUTODAY.COM  |SHIVAMOGGA| #KANNADANEWSWEB

ಅತ್ಯಾದುನಿಕತೆಯ ತಂತ್ರಜ್ಞಾನಗಳು ಮನೆ ಮನಗಳನ್ನು ಹೇಗೆ ಒಡೆಯುತ್ತವೆ ಎಂಬುದುನ್ನ ಹೇಳುವುದೇ ಕಷ್ಟವಾಗಿದೆ. ವಾಟ್ಸ್ಯಾಪ್​ ನಲ್ಲಿ ಬರುವ ಬ್ಲ್ಯೂಟಿಕ್, ಲಾಸ್ಟ್​ ಸೀನ್​ಗಳಿಂದಲೇ ಹಲವು ಸಂಸಾರಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂಬುದು ಸುಳ್ಳಲ್ಲ. ಅದೇ ರೀತಿ ಶಿವಮೊಗ್ಗ ಜಿಲ್ಲೆ ತಾಲ್ಲೂಕುವೊಂದರಲ್ಲಿ ಮೊಬೈಲ್​ ಗೆ ಬಂದ ಮಿಸ್ ಕಾಲ್ ಸಂಸಾರದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ. 

READ |ನಿಮ್ಮ ಬ್ಯಾಂಕ್​ ಅಕೌಂಟ್​ನ್ನ ವಂಚಕರೂ ಹೀಗೆ ಬಳಸಿಕೊಳ್ಳುತ್ತಾರೆ ಹುಷಾರ್! ಯಾಮಾರಿದ್ರೆ ಕಳ್ಳರು ನೀವೇ ಆಗಬಹುದು ಎಚ್ಚರ!?

ಹೆಸರು ಹಾಗೂ ಸ್ಥಳವನ್ನು ಬಳಸದೇ ಸುದ್ದಿಯನ್ನು ನೋಡುವುದಾದರೆ,  ಜಿಲ್ಲೆಯ  ಸ್ಟೇಷನ್​ ಒಂದರ ಪೊಲೀಸರು ಈ ಸಂಬಂಧ ದೂರು , ಪ್ರತಿದೂರು ಎರಡನ್ನೂ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಹೆಣ್ಣುಮಗಳೊಬ್ಬರು ನೀಡಿದ ದೂರಿನಲ್ಲಿ ಅವರ ಪತಿ ಎರಡು ತಿಂಗಳಿನಿಂದ ತಮ್ಮ ಮೊಬೈಲ್ ಬಳಕೆಯ ಬಗ್ಗೆ ಅನುಮಾನ ಪಡುತ್ತಿದ್ದರಂತೆ. ಒಂದು ದಿನ ಮಿಸ್​ಕಾಲ್​ವೊಂದನ್ನ ನೋಡಿ ಯಾರದ್ದು ಇದು ಎಂದಿದ್ದಾರೆ. ಅದು ಕಂಪನಿಯ ಕಾಲ್​ ಆಗಿತ್ತು. ಈ ಬಗ್ಗೆ ತಿಳಿಸಿದರು ಕೇಳದೇ ಹಲ್ಲೆ ಮಾಡಿದ್ದಾರೆ. ಜಗಳ ಬಿಡಿಸಲ ಬಂದ ತಮ್ಮ ಕುಟುಂಬಸ್ಥರ ಮೇಲೂ ಗಂಡನ ಮನೆಯವರು ಹಲ್ಲೆ ನಡೆಸಿದ್ರು ಎಂಬುದು ಇವರ ಆರೋಪ

READ | ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಇನ್ನೊಂದೆಡೆ ಪತಿಯ ಮನೆಯವರು ಪತ್ನಿಯ ಮೊಬೈಲ್ ಬಳಕೆ ವಿಚಾರಕ್ಕೆ ವ್ಯಾಜ್ಯವಿದ್ದು, ಈ ಸಂಬಂಧ ಮಾತುಕತೆಗಾಗಿ ಅವರ ಕಡೆಯವನ್ನು ಕರೆಸಲಾಗಿತ್ತು. ಈ ವೇಳೆ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ಧಾರೆ ಎಂದು ದೂರಿದ್ದಾರೆ. ಸದ್ಯ ಪೊಲೀಸರು ಎರಡು ಕಡೆಯಿಂದ ದೂರು ದಾಖಲಿಸಿಕೊಂಡು ಎಫ್​ಐಆರ್​ ನಮೂದಿಸಿದ್ದಾರೆ. ಆದರೆ, ಮೊಬೈಲ್ ಬಳಕೆ ಸರಾಗವಾಗಿ ಸಾಗುವ ಸಂಸಾರವನ್ನು ಸಸಾರದಿಂದ ನೋಡುವಂತೆ ಮಾಡ್ತಿದೆ ಎಂಬುದಕ್ಕೆ ಘಟನೆ ಸಾಕ್ಷಿಯಾಗಿದೆ. 

#save visl : ಉಕ್ಕಿನ ಕಾರ್ಖಾನೆಯನ್ನು ಉಳಿಸಲು ಶ್ರೀಗಳಿಗೆ ಮೊರೆ! ಪೇಜಾವರ ಶ್ರೀಗಳ ಬಳಿಕ, ರಂಬಾಪುರಿ ಶ್ರೀಗಳಿಗೆ ಮನವಿ!

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!