ಬೈಂದೂರು ನಲ್ಲಿ ನಕ್ಸಲ್​ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?

Is it true that naxals were spotted in Byndoor? What does the JP report say?

ಬೈಂದೂರು ನಲ್ಲಿ ನಕ್ಸಲ್​ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?
Is it true that naxals were spotted in Byndoor? What does the JP report say?

Shivamogga | Feb 8, 2024 |  ಮಲೆನಾಡಿನಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತುಗಳ ಬಗ್ಗೆ ಹುಳ ಬಿಟ್ಟವರು ಯಾರು ನಿಜಕ್ಕೂ ನಕ್ಸಲರು ಪುನಃ ಪ್ರತ್ಯಕ್ಷರಾದರಾ...ಡೀಪ್ ಕೂಂಬಿಂಗ್ ಮಾಡಿದ ಅಧಿಕಾರಿಗಳಿಗೆ ಸಿಕ್ಕ ಮಾಹಿತಿ ಏನು..JP EXLVUSIVE

ದಶಕದಿಂದ ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂಬ ಸುದ್ದಿ ಪೊಲೀಸರಿಗೆ ಹಾಗು ನಕ್ಸಲ್ ನಿಗ್ರಹ ದಳದ ಅಧಿಕಾರಿ ಸಿಬ್ಬಂದಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಅದರಲ್ಲೂ ಎರಡು ತಿಂಗಳಿನಿಂದ ಬೈಂದೂರು ತಾಲೂಕಿನ ಮೂದೂರು, ಬೆಳ್ಕಲ್ ಜಡ್ಕಲ್ ಕಾಡಿನ ಪರಿಸರದಲ್ಲಿ ಶಸ್ತ್ರಸಜ್ಜಿತ ನಕ್ಸಲರ ಸಂಚಾರವಿದೆ ಎಂಬ ಸುದ್ದಿ ಬಂದ ಮೇಲಂತೂ ರಾಜ್ಯ ಗುಪ್ತದಳ ಕೂಡ ಕಂಗಾಲಾಗಿದೆ. ನಕ್ಸಲ್ ಕುರುಹುಗಳಿರುವ  ಗಡಿ ಜಿಲ್ಲೆಗಳ ಎಸ್ಪಿಗಳ ಮೇಲೆ ಒತ್ತಡವೂ ಹೆಚ್ಚಾಗಿದೆ. 

ನಕ್ಸಲ್​ ಚಲನವಲನ ಸುಳ್ಳು!?

ಕೊಲ್ಲೂರು ಸಮೀಪದ ಮುದೂರು ಬೆಳ್ಕಲ್ ಜಡ್ಕಲ್ ಉದಯ ನಗರ ಗ್ರಾಮದ ಮನೆಗಳಿಗೆ ನಿಜಕ್ಕೂ ನಕ್ಸಲರು ಭೇಟಿ ನೀಡಿದ್ರಾ .ಎಂಬುದಕ್ಕೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ. 

ಸ್ಥಳೀಯ ವ್ಯಕ್ತಿಯೊಬ್ಬರ ಮನೆಗೆ ಹಸಿರು ಬಟ್ಟೆ ತೊಟ್ಟಿದ್ದ ನಾಲ್ವರು ಭೇಟಿ ನೀಡಿದ್ರು ಎಂಬ ಮಾಹಿತಿ ಮೇರೆಗೆ ಎಸ್ಪಿ ಡಿಎಸ್ಪಿ ಸೇರಿದಂತೆ ಗುಪ್ತಚರ ಅಧಿಕಾರಿಗಳು ಆ ವ್ಯಕ್ತಿಯ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.ಗುಪ್ತಚರ ಇಲಾಖೆಯ ಎಸ್ಪಿ ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಆದರೆ ಪತ್ರಿಕೆಯಲ್ಲಿ ಪ್ರಕಟವಾದಂತೆ  ಅಧಿಕಾರಿಗಳು ವಿಚಾರಿಸಿದಾಗ ಪೂರಕವಾದ ಉತ್ತರ ಎಲ್ಲೂ ಸಿಕ್ಕಿಲ್ಲ . ನಕ್ಸಲರು ಮನೆಗೆ ಬಂದಿದ್ದರು..ಆದರೆ ಯಾವ ದಾರಿಯಿಂದ ಬಂದ್ರೂ..ಹೇಗೆ ಹೋದ್ರು ಎಂಬ ವಿಚಾರದಲ್ಲಿ ವ್ಯಕ್ತಿಯಿಂದ ಪೂರಕವಾದ ಹೇಳಿಕೆಗಳು ಪೊಲೀಸರಿಗೆ ಲಭ್ಯವಾಗಿಲ್ಲ.

ಈ ಹಿಂದೆ ಮೂದೂರಿನಲ್ಲಿ ಸ್ಥಳೀಯವಾಗಿ ಚರ್ಚ್ ನಲ್ಲಿ ನಡೆದ ಜಾತ್ರೆಯಲ್ಲಿ ಸಣ್ಣದಾಗಿ ಗಲಾಟೆ  ನಡೆದಿತ್ತು. ಆ ಸಂದರ್ಭದಲ್ಲಿ ನಾಲ್ವರು  ಓಮ್ನಿಯಲ್ಲಿ  ಇಳಿದರು. ಅವರೆಲ್ಲಾ ಬಿಳಿ ಬಟ್ಟೆ ತೊಟ್ಟಿದ್ದರು  ಇದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. 

ಮೂದೂರು ಉದಯನಗರ, ಬೆಳ್ಕಲ್ ಈ ಭಾಗದಲ್ಲಿ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇರಳದಲ್ಲಿ ನಕ್ಸಲ್ ಸಂಘಟನೆ ಸಕ್ರೀಯವಾಗಿರುವ ಹಿನ್ನಲೆಯಲ್ಲಿ ಅಲ್ಲಿಂದ ಈ ಗ್ರಾಮಗಳಲ್ಲಿ ಕೆಲವರು ಆಶ್ರಯ ಕೇಳಿರಬಹುದು. ಎಡಪಂಧೀಯ ಚಿಂತನೆಗೆ ಹತ್ತಿರವಾಗಿರುವುದರಿಂದ ಈ ಗ್ರಾಮಗಳಲ್ಲಿ ಕಾಣಿಸಿಕೊಂಡ ಅಪರಿಚಿತರನ್ನು ನಕ್ಸಲರು ಎಂದು ಶಂಕಿಸಿರಬುಹುದು ಎಂದು ಹೇಳಲಾಗುತ್ತಿದೆ. 

ನಿರಂತರ ಕೂಂಬಿಂಗ್

ಇನ್ನು ಈ ಭಾಗಗಳಲ್ಲಿ ಪೊಲೀಸರು ಹಾಗು ಎ.ಎನ್ಎಫ್​ ನಿರಂತರವಾಗಿ ಕೂಂಬಿಂಗ್ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಮಾಹಿತಿ ಕಲೆ ಹಾಕಿದ್ರೂ, ಯಾರೊಬ್ಬರು ನಕ್ಸಲರು ನೋಡಿಲ್ಲ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಎರಡು ತಿಂಗಳಿನಿಂದ ನಕ್ಸಲರು ಈ ಭಾಗದಲ್ಲಿ ಸಕ್ರೀಯವಾಗಿದ್ದಾರೆ ಎಂದರೆ ಪೊಲೀಸ್ ಇಲಾಖೆ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ . ANF  ಸಿಬ್ಬಂದಿಗಳಿಗೂ ಮಾಹಿತಿ ಲಭ್ಯವಾಗಿರಬೇಕಿತ್ತು. ಗ್ರಾಮದಲ್ಲಿ ಆ ವ್ಯಕ್ತಿಯೊಬ್ಬ ಮಾತ್ರ ನಕ್ಸಲರನ್ನು ನೋಡಿರುವುದಾಗಿ ಹೇಳುತ್ತಿದ್ದಾರೆ ಬಿಟ್ಟರೆ, ಸ್ಥಳೀಯರಲ್ಲಿ ಯಾರೊಬ್ಬರು ನಾವು ನೋಡಿಲ್ಲ ಎಂದು ಹೇಳಿದ್ದಾರೆ. 

ಡ್ರೋನ್ ಮೂಲಕವೂ ಕಾರ್ಯಾಚರಣೆ 

ಇನ್ನು ಮೂದೂರು ಬೆಳ್ಕಲ್ ಜಡ್ಕಲ್ ಭಾಗಗಳಲ್ಲಿ ನಾಲ್ಕು ದಿಕ್ಕುಗಳಿಂದ ಕೂಂಬಿಂಗ್ ನಡೆಯುತ್ತಿದೆ ಕಾರ್ಯಾಚರಣೆಗೆ ಎ.ಎನ್.ಎಫ್ ತಂಡ ಡ್ರೋನ್ ಬಳಸಿದೆ. ನೀಲನಕ್ಷೆಯಲ್ಲಿ ನಕ್ಸಲರು ಟೆಂಟ್ ಹಾಕಿರುವುದಾಗಿ ಬೆಂಕಿ ಹೊಗೆ ಕಾಣಿಸಿಕೊಂಡಿರುವ ಬಗ್ಗೆ ಇಷ್ಟರಲ್ಲೇ ಮಾಹಿತಿ ಲಭ್ಯವಾಗಿರಬೇಕಿತ್ತು. ಆದರೆ ನಕ್ಸಲರು ಜಾಡು ಡ್ರೋನ್  ಕ್ಯಾಮರದಲ್ಲಿ ಎಲ್ಲೂ ಸೆರೆಯಾಗಿಲ್ಲ.

ಇದು ಸುಳ್ಳು ಸುದ್ದಿನಾ..? 

ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ನಕ್ಸಲರ ಮಾಹಿತಿ ಸುಳ್ಳು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ನಾನಾ ಆಯಾಮದಲ್ಲಿ ತನಿಖೆ, ಕೂಂಬಿಂಗ್, ವಿಚಾರಣೆ ನಡೆಸಿರುವ ಪೊಲೀಸರಿಗೆ ತಾರ್ಕಿಕ ಸತ್ಯವಂತೂ ಅರಿವಾಗಿದೆ. ಉಡುಪಿ ಜಿಲ್ಲಾ ಪೊಲೀಸ್, ಎ.ಎನ್.ಎಫ್ ಮತ್ತು ಗುಪ್ತಚರ ಇಲಾಖೆಗೆಳ ಅಧಿಕಾರಿ ಸಿಬ್ಬಂದಿಗಳಿಗೆ ನಕ್ಸಲರು ಬಂದಿದ್ದಾರೆ ಎಂಬ ಮಾಹಿತಿ ಫೇಕ್ ಎಂದು ಪ್ರಾಥಮಿಕವಾಗಿ ಗೊತ್ತಾಗಿದ್ದು, ಈ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.