ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಗೆ ಪಕ್ಷಾತೀತ ಪೂಜೆ! ಸಚಿವ ಮಧು ಬಂಗಾರಪ್ಪರಿಂದ ವಿಶೇಷ ಪ್ರಾರ್ಥನೆ
Minister Madhu Bangarappa offered pooja to Shivamogga Hindu Mahasabha Ganapatiಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಗೆ ಸಚಿವ ಮಧು ಬಂಗಾರಪ್ಪರವರು ಪೂಜೆ ಸಲ್ಲಿಸಿದರು
KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’
ಶಿವಮೊಗ್ಗದ ಪ್ರತಿಷ್ಟಿತ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಇಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ವಿಶೇಷವಾಗಿ ಈ ಗಣಪತಿ ಉತ್ಸವದಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಇದಕ್ಕೆ ಪೂರಕವಾಗಿ ನಿನ್ನೆರಾತ್ರಿ ಭೀಮೇಶ್ವರ ದೇವಸ್ಥಾನ ಸಚಿವ ಮಧು ಬಂಗಾರಪ್ಪರವರು ಭೇಟಿಕೊಟ್ಟು ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಚನ್ನಬಸಪ್ಪ, ಮುಖಂಡ ಆಯನೂರು ಮಂಜುನಾಥ್ ಪಾಲ್ಗೊಂಡಿದ್ದರು.
ವಿನಾಯಕನ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಶಾಸಕ ಚನ್ನಬಸಪ್ಪ ಸೇರಿದಂತೆ ಅಲ್ಲಿದ್ದ ಮುಖಂಡರ ಜೊತೆ ಮಾತುಕತೆ ನಡೆಸಿದರು. ಈ ಹಿಂದೆ ಪ್ರತಿಸ್ಪರ್ಧಿಯಾಗಿದ್ದ ಆಯನೂರು ಮಂಜುನಾಥ್ ಹಾಗೂ ಶಾಸಕ ಚನ್ನಬಸಪ್ಪರವರ ನಡುವಿನ ಸಂಭಾಷಣೆಯು ವಿಶೇಷವಾಗಿ ಗಮನ ಸೆಳೆಯಿತು.
ಇಂದು ನಡೆಯಲಿರುವ ವಿಸರ್ಜನಾ ಮೆರವಣಿಗೆಯಲ್ಲಿಯು ಸಹ ಶಿವಮೊಗ್ಗದ ಎಲ್ಲಾ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದು, ಶಿವಪ್ಪನಾಯಕ ವೃತ್ತ ಪಕ್ಷಾತೀತ ರಾಜಕಾರಣಕ್ಕೆ ಸಾಕ್ಷಿಯಾಗಲಿದೆ
ಇನ್ನಷ್ಟು ಸುದ್ದಿಗಳು
-
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ
-
2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್ ಬಗ್ಗೆ ಎಸ್ಪಿ ಬ್ರೀಫಿಂಗ್!
-
ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!