ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!

Garland dedicated to Hindu Mahasabha Ganapati by 'Souhardaway Habba Shanti Nadige' committeeಹಿಂದೂ ಮಹಾಸಭಾ ಗಣಪತಿಗೆ ‘ಸೌಹಾರ್ದವೇ ಹಬ್ಬ ಶಾಂತಿ ನಡಿಗೆ’ ಸಮಿತಿಯಿಂದ ಹಾರವನ್ನು ಸಮರ್ಪಿಸಲಾಗಿದೆ

ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಶಿವಮೊಗ್ಗದಲ್ಲಿ ಸದ್ಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ಸಂಭ್ರಮ ಕಳೆಗಟ್ಟಿದೆ. ಶಾಂತಿಯುತ ಸಡಗರದ ಆಚರಣೆಗೆ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದ್ದರೇ, ಇನ್ನೊಂದಡೆ ವಿವಿಧ ಮುಖಂಡರುಗಳು ಸೌಹಾರ್ಧ ಹಬ್ಬದ ಆಚರಣೆಗಾಗಿ ಶ್ರಮವಹಿಸುತ್ತಿದ್ದಾರೆ. 

ಈ ನಿಟ್ಟಿನಲ್ಲಿ  ಶಿವಮೊಗ್ಗದಲ್ಲಿ ಪ್ರತಿಷ್ಟಾಪಿಸಿರುವ ಹಿಂದೂ ಮಹಾಸಭಾ ಗಣಪತಿಗೆ "ಸೌಹಾರ್ದವೇ ಹಬ್ಬ" ಶಾಂತಿ ನಡಿಗೆ ಸಮಿತಿಯ ವತಿಯಿಂದ  ಮಾಲಾರ್ಪಣೆಯನ್ನು ಮಾಡಲಾಗಿದೆ. 

ಸಮಿತಿಯ ಮುಖಂಡರು ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ವಿನಾಯಕನಿಗೆ ಹಾರ ಸಲ್ಲಿಸಿ ಸೌರ್ಹಾದತೆ ಸಾರುವ ಸಂದೇಶವನ್ನು ರವಾನೆ ಮಾಡಿದರು. ಹಿಂದೂ ಮಹಾಸಭಾ ಗಣಪತಿ ಕಮೀಟಿಯ ಮುಖ್ಯಸ್ಥರಾದ  ಧತ್ತಣ್ಣ ಮತ್ತು  ಪ್ರಮುಖರು ಹಾಜರಿದ್ದು  ಸೌರ್ಹಾದ ಸಮಿತಿಯವರನ್ನು ಗೌರವ ಪೂರ್ವಕವಾಗಿ ಬರಮಾಡಿಕೊಂಡರು.

ಸಮಿತಿ ಸಂಚಾಲಕ ವಕೀಲ ಕೆ.ಪಿ.ಶ್ರೀಪಾಲ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ಓಪನ್ ಮೈಂಡ್ ಸ್ಕೂಲ್ ನ ಮುಖ್ಯಸ್ಥರಾದ ಕಿರಣ್ ಕುಮಾರ್, ಜಾಮಿಯ ಮಸೀದಿ ಸದಸ್ಯರಾದ ಮೊಹಮದ್  ಹುಸೇನ್, ಮುಸ್ಲಿಂ ಮುಖಂಡರು ಮತ್ತು ಅಜ್ ಕಾ ಇನ್ ಕಿಲಾಬ್ ಪತ್ರಿಕೆಯ  ಲಿಯಾಕತ್, ಪ್ರಗತಿಪರ ಹೋರಾಟಗಾರರಾದ ಸುರೇಶ್ ಅರಸಾಳು,  ಸಾಹಿತಿ , ಅಂಕಣಕಾರ ಬಿ.ಚಂದ್ರೆಗೌಡ, ರೈತಸಂಘ, ಟಿ.ಎಂ ಚಂದ್ರಪ್ಪ, ಚೇತನ್ ,  ಪ್ರಸಾದ್ ಸೇರಿದಂತೆ ಮೊದಲಾದವರು ಹಾಜರಿದ್ದರು.  




ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?