2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

2 lakh people! More than 3 thousand police! SP briefing about tomorrow's Bandobast!2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಶಿವಮೊಗ್ಗ ನಗರದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಡೆಯಲಿದ್ದು, ಈ ನಿಟ್ಟಿನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಯ ಮುಖಂಡರು ಹೇಳುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖಂಡ ದೀನ ದಯಾಳು, ನಾಳಿನ ಮೆರವಣಿಗೆಯಲ್ಲಿ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ವಿಶೇಷ ಅಲಂಕಾರದ ಜೊತೆಯಲ್ಲಿ ವಿನಾಯಕ ವಿಸರ್ಜನಾ ಮೆರವಣಿಗೆ ವಿಶೇಷವಾಗಿ ಸಾಗಲಿದೆ ಎಂದು ತಿಳಿಸಿದ್ದಾರೆ. 

ಇನ್ನೊಂದೆಡೆ ಪೊಲೀಸ್ ಇಲಾಖೆ ವಿನಾಯಕ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಸಕಲ ಬಂದೋಬಸ್ತ್ ಕೈಗೊಂಡಿದೆ. ಈ ನಿಟ್ಟಿನಲ್ಲಿ  05 ಹೆಚ್ಚುವರಿ ಪೊಲೀಸ್  ಅಧೀಕ್ಷಕರು 14 ಪೊಲೀಸ್  ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪನಿರೀಕ್ಷಕರು, 2,500 ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು, 10 ಡಿಎಆರ್ ತುಕಡಿ, 15 ಕೆಎಸ್ಆರ್.ಪಿ ತುಕಡಿ, 02 ಆರ್.ಎ.ಎಫ್ ಕಂಪನಿಗಳು 100 ವಿಡಿಯೋ ಕ್ಯಾಮರಾಗಳು ಮತ್ತು 08 ಡ್ರೋಣ್ ಕ್ಯಾಮರಾಗಳನ್ನು  ನಿಯೋಜಿಸಲಾಗಿರುತ್ತದೆ ಹಾಗೂ ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ. 

ಇನ್ನೂ ಬಂದೋಬಸ್ತ್​ಗೆ ಪೂರಕವಾಗಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದೆ. ಸಂಜೆ 04:00  ಗಂಟೆಗೆ ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ಗೆ ಚಾಲನೆ ನೀಡಲಾಯ್ತು.  ಶಿವಮೊಗ್ಗ ನಗರದ  ಗೋಪಿ ವೃತ್ತದಿಂದ ಪ್ರಾರಂಭಿಸಿ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ಎಂಕೆಕೆ ರಸ್ತೆ, ಕೆ ಆರ್ ಪುರಂನಿಂದ ಆರ್‌.ಎಂ.ಎಲ್   ನಗರದ ಟೆಂಪೋ ಸ್ಟಾಂಡ್​ವರೆಗೆ ಪಥಸಂಚಲನ ನಡೆಸಲಾಗಿದೆ . 

ಇನ್ನೊಂದೆಡೆ  ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ,  ಮಿಥುನ್ ಕುಮಾರ್ ಐಪಿಎಸ್  ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ  ಬ್ರೀಫಿಂಗ್ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ಅವರುಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ವಿವರಿಸಿ, ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. 

ಇನ್ನೂ ವಿವಿಧ ಸರ್ಕಲ್​ಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಬರುವ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸನಾತನ ಹಿಂದೂ ಧರ್ಮದ ಪೋಸ್ಟರ್​ಗಳು ಎಲ್ಲೆಡೆ ರಾರಾಜಿಸುತ್ತಿವೆ. ಕೇಸರಿ ಬಣ್ಣದ ಅಲಂಕಾರದಜೊತೆಗೆ ಶಿವಪ್ಪ ನಾಯಕ ಸರ್ಕಲ್​ನಲ್ಲಿ ನಿಲ್ಲಿಸಲಾಗಿರುವ ಉಗ್ರ ನರಸಿಂಹನ ಅವತಾರದ ಪ್ರತಿಕೃತಿ ಜನರನ್ನು ಆಕರ್ಷಿಸುತ್ತಿದೆ. ಯುವಕರು ಯುವತಿಯರು ಉಗ್ರ ನರಸಿಂಹನ ಅಲಂಕಾರದ ವಿಡಿಯೋ ಮಾಡಿ ರೀಲ್ಸ್​ಗೆ ಪೋಸ್ಟ್ ಮಾಡುತ್ತಿದ್ದಾರೆ. ಉಗ್ರಂ ವೀರಂ ಹಾಡಿನೊಂದಿಗೆ ಈ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. 


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?