ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ / ಅಮ್ಮನವರ ಜಾತ್ರೆ ಯಾವಾಗ ಗೊತ್ತಾ? ವಿವರ ಇಲ್ಲಿದೆ

sri sigandur chowdeshwari temple /sri sigandur chowdeshwari temple timings

ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ / ಅಮ್ಮನವರ ಜಾತ್ರೆ ಯಾವಾಗ ಗೊತ್ತಾ? ವಿವರ ಇಲ್ಲಿದೆ
sri sigandur chowdeshwari temple /sri sigandur chowdeshwari temple timings

SHIVAMOGGA  |  Jan 5, 2024  |   ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಿದ್ಧ ದಾರ್ಮಿಕ ಕೇಂದ್ರ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ. ಇಲ್ಲಿ ಈ ವರ್ಷದ ಜಾತ್ರೆಗೆ ಮುಹೂರ್ತ ನಿಕ್ಕಿಯಾಗಿದ್ದು ಜಾತ್ರೆ ವಿವರಗಳನ್ನ ದೇವಸ್ಥಾನದ ಸಮಿತಿ ಹಂಚಿಕೊಂಡಿದೆ.. 

sri sigandur chowdeshwari temple/ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ

sri sigandur chowdeshwari temple

ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಎಸ್. ರಾಮಪ್ಪ ನೇತೃತ್ವದಲ್ಲಿ ಜನವರಿ 14 ಮತ್ತು 15 ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಜನವರಿ 14 ರಂದು ಪ್ರಾತಃಕಾಲ 4 ಗಂಟೆಗೆ ಮಹಾಭಿಷೇಕ, ಅಲಂಕಾರ, ಆಭರಣ ಪೂಜೆ, ಚಂಡಿಕಾ ಹೋಮ ನೆರವೇರಲಿದ್ದು, ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಆರ್ಯ ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ.



ಬೆಳಿಗ್ಗೆ 8 ಗಂಟೆಗೆ ರಥ ಪೂಜೆಯೊಂದಿಗೆ ದೇವಿ ಮೂಲ ಸ್ಥಾನಕ್ಕೆ ಹೊರಡಲಿದ್ದು, ಕೇರಳದ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಸ್ಥಾನ ಪ್ರವೇಶ ಮಾಡಲಿದೆ. ರಂಭಾಪುರಿ ಮಹಾಸಂಸ್ಥಾನ ಮಳಲಿಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. 

ಅದೇ ದಿನ ರಾತ್ರಿ 9.30ಕ್ಕೆ ಸಿಗಂದೂರು ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

15ರ ಬೆಳಿಗ್ಗೆ 5ರಿಂದ ನವ ಚಂಡಿಕಾ ಹೋಮ, ರಾತ್ರಿ 8 ಗಂಟೆಗೆ ದುರ್ಗಾ ದೀಪ ನಮಸ್ಕಾರ, ಗುರು ಪೂಜೆ, ದೇವಿ ಪಾರಾಯಣ, ರಂಗಪೂಜೆ, ರಾತ್ರಿ 8.30ರಿಂದ ಕುದ್ರೋಳಿ ಗಣೇಶ ಮತ್ತು ಬಳಗದಿಂದ ಮ್ಯಾಜಿಕ್ ಶೋ ನಡೆಯಲಿದೆ.

ಜಾತ್ರೆಯ ಪ್ರಯುಕ್ತ 9 ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

sri sigandur chowdeshwari temple

ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯವು ಕರ್ನಾಟಕದ ಸಾಗರ ತಾಲ್ಲೂಕಿನಲ್ಲಿರುವ ಒಂದು ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯವು ಸಿಗಂದೂರು ಚೌಡೇಶ್ವರಿ ಎಂದೂ ಕರೆಯಲ್ಪಡುವ ಚೌಡೇಶ್ವರಿ ದೇವಿಯ ನೆಲೆಯಾಗಿದೆ.

ಇಲ್ಲಿನ ತಾಯಿಯನ್ನು ತುಂಬಾ ಶಕ್ತಿಶಾಲಿ ದೇವಿ ಎಂದೇ ನಂಬಲಾಗುತ್ತದೆ. ದೇವಿಯ ಹೆಸರಿನಲ್ಲಿ ನಿತ್ಯ ವಿಶೇಷ ಪೂಜೆಗಳನ್ನ ಸಲ್ಲಿಸಲಾಗುತ್ತದೆ. ಮಕರ ಸಂಕ್ರಾಂತಿ ದಿನದಂದು ವಾರ್ಷಿಕ ಉತ್ಸವವನ್ನು (ಜಾತ್ರೆ) ನಡೆಸುತ್ತದೆ, ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. 



ಸಿಗಂದೂರು ಚೌಡೇಶ್ವರಿ ಕಳ್ಳರನ್ನು ಶಿಕ್ಷಿಸುವ ತಾಯಿ ಎಂದು ಭಕ್ತರು ನಂಬುತ್ತಾರೆ. ಬೆಲೆಬಾಳುವ ವಸ್ತುಗಳನ್ನ ಕಳೆದುಕೊಂಡ  ಜನರು ಆಗಾಗ್ಗೆ ಇಲ್ಲಿಗೆ ಬಂದು ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅವರ ಕೊರಿಕೆಯಂತೆ ನಡೆದ ಉದಾಹರಣೆಗಳು ಹಲವಷ್ಟಿದೆ.  

sri sigandur chowdeshwari temple timings

ಪವಿತ್ರ ಕ್ಷೇತ್ರ ಎನಿಸಿರುವ ಈ  ದೇವಾಲಯವು ಮೂರು ಬದಿಗಳಲ್ಲಿ ಲಿಂಗನಮಕ್ಕಿ ಜಲಾಶಯದ  ಶರಾವತಿ ನದಿ ಹಿನ್ನೀರು ಆವರಿಸಿದೆ. ದೇವಸ್ಥಾನವೂ ವಾರದ ಎಲ್ಲಾ ದಿನಗಳಲ್ಲಿ ಸಾಮಾನ್ಯವಾಗಿ 3:30 am - 2:30 pm, 5:30 pm - 7:30 pm ವರೆಗೂ ತೆರೆದಿರುತ್ತದೆ.