ತೀರ್ಥಹಳ್ಳಿ | ಹ್ಯಾಟ್ರಿಕ್‌ ಹೀರೋ ಶಿವಣ್ಣರಿಗೆ ಜಾದು ತೋರಿಸಿದ ನಿಶ್ಚಲ್‌ ಜಾದುಗಾರ | ವಿಡಿಯೋ

Tirthahalli | Nischal magician showed magic to hat trick hero Shivanna Video. Tirthahalli, Konandur, Nischal Jadugara, Kimmane Ratnakar, RM Manjunath Gowda,

ತೀರ್ಥಹಳ್ಳಿ | ಹ್ಯಾಟ್ರಿಕ್‌ ಹೀರೋ ಶಿವಣ್ಣರಿಗೆ ಜಾದು ತೋರಿಸಿದ ನಿಶ್ಚಲ್‌ ಜಾದುಗಾರ | ವಿಡಿಯೋ
hat trick hero Shivanna , Tirthahalli, Konandur, Nischal Jadugara, Kimmane Ratnakar, RM Manjunath Gowda,

SHIVAMOGGA | MALENADUTODAY NEWS | Apr 26, 2024      

ಲೋಕಸಭಾ ಚುನಾವಣೆ ಪ್ರಚಾರದಲ್ಲಿರುವ ಗೀತಾ ಶಿವರಾಜಕುಮಾರ್‌ ದಂಪತಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಜಾದು ಮಾಡಿ ತೋರಿಸಿದ ಸಂದರ್ಭದ ಬಗ್ಗೆ ವರದಿಯಾಗಿದೆ. 

ನಿನ್ನೆ ತೀರ್ಥಹ‍ಳ್ಳಿ ತಾಲ್ಲೂಕು ಕೋಣಂದೂರು ಅಗ್ರಹಾರದ ಮೇಲಿನಕುರುವಳ್ಳಿಯಲ್ಲಿ ಗುರುವಾರ ಹೂಬಳಿ ಮಟ್ಟದ ಪ್ರಚಾರ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಖ್ಯಾತ ಜಾದೂ ಕಲಾವಿದ ನಿಶ್ಚಲ್ ಜಾದೂಗಾರರವರು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ  ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೇ ಶಿವಣ್ಣರ ಎದುರು ಅವರು ಜಾದುವೊಂದನ್ನ ಮಾಡಿ ತೋರಿಸಿದರು. ಎಲೆಕ್ಷನ್‌ ಭರಾಟೆ ನಡುವೆ ಸಿಕ್ಕ ಜಾದು ನೋಡುವ ಅವಕಾಶವನ್ನು ಮಿಸ್‌ ಮಾಡಿಕೊಳ್ಳದ ಶಿವಣ್ಣ ಕುತೂಹಲದಿಂದ ವೀಕ್ಷಿಸಿ ನಿಶ್ಚಲ್‌ರಿಗೆ ಶಹಬ್ಬಾಸ್‌ ಹೇಳಿದರು.