ಈಶ್ವರಪ್ಪರ ಬಳಿಕ ಕೆಇ ಕಾಂತೇಶ್‌ | ಶಿವಮೊಗ್ಗ ಬಿಜೆಪಿಯಲ್ಲಿ ದೊಡ್ಡ ನಡೆ | ಬಂಡಾಯ ಬೆಂಬಲಿತರ ಪಟ್ಟಿಯಲ್ಲಿ ಯಾರ ಹೆಸರಿದೆ?

After Eshwarappa, 10 people including KE Kantesh have been recommended for expulsion. Shimoga District BJP, District President TD Meghraj, Shimoga BJP City President D. Mohan Reddy, KE Kantesh, KS Eshwarappa,

ಈಶ್ವರಪ್ಪರ ಬಳಿಕ ಕೆಇ ಕಾಂತೇಶ್‌ |  ಶಿವಮೊಗ್ಗ ಬಿಜೆಪಿಯಲ್ಲಿ ದೊಡ್ಡ ನಡೆ | ಬಂಡಾಯ ಬೆಂಬಲಿತರ ಪಟ್ಟಿಯಲ್ಲಿ ಯಾರ ಹೆಸರಿದೆ?
Shimoga District BJP, District President TD Meghraj, Shimoga BJP City President D. Mohan Reddy, KE Kantesh, KS Eshwarappa,

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಕೆಎಸ್‌ ಈ‍ಶ್ವರಪ್ಪರನ್ನ ಈಗಾಗಲೇ ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಇದೀಗ ಅವರನ್ನ ಬೆಂಬಲಿಸಿರುವ ವ್ಯಕ್ತಿಗಳನ್ನ ಉಚ್ಚಾಟಿಸುವಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ಶಿಪಾರಸ್ಸು ಮಾಡಲಾಗಿದೆ. ಈ ಪಟ್ಟಿ ಸಾಕಷ್ಟು ಕುತೂಹಲ ಮೂಡಿಸಿದೆ. 

ಏನಿದು ?

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಜತೆಗೆ ಗುರುತಿಸಿಕೊಂಡಿರುವ ಕೆ.ಇ.ಕಾಂತೇಶ್, ಇ.ವಿಶ್ವಾಸ್ ಸೇರಿದಂತೆ 10 ಪ್ರಮುಖ ಮುಖಂಡರನ್ನು ಉಚ್ಚಾಟಿಸುವಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ. 

ಈ ಸಂಬಂಧ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಡಿ.ಮೋಹನ್ ರೆಡ್ಡಿ ವರದಿ ತಯಾರು ಮಾಡಿ ಶಿಪಾರಸ್ಸು ಮಾಡಿದ್ದಾರೆ. ಇವರು ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗಳಾದ ಸುವರ್ಣ ಶಂಕರ್, ಲತಾ ಗಣೇಶ್, ಮಾಜಿ ಉಪ ಮೇಯರ್ ಗಳಾದ ಶಂಕರ್ ಗನ್ನಿ, ಲಕ್ಷ್ಮಿಶಂಕರ ನಾಯ್ಕ, ಮಾಜಿ ಸದಸ್ಯರಾದ ಇ.ವಿಶ್ವಾಸ್, ಎಸ್.ಜಿ.ರಾಜು, ಆರತಿ ಆ.ಮ.ಪ್ರಕಾಶ್, ಶಿವಮೊಗ್ಗ ಕೋರ್ ಕಮಿಟಿ ಸದಸ್ಯ ಕೆ.ಇ.ಕಾಂತೇಶ್, ನಗರ ಉಪಾಧ್ಯಕ್ಷ ಮೋಹನ್ ರಾವ್, ಸಹ್ಯಾದ್ರಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನಿತಾ ಮಂಜುನಾಥ್ ರವರ ಹೆಸರಿದೆ. 

ಇವರೆಲ್ಲರೂ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಬಂಡಾಯ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು, ಈಶ್ವರಪ್ಪ ಬೆಂಬಲಿತ ಮುಖಂಡರನ್ನ ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿ ಆರು ವರ್ಷಗಳ ಕಾಲ ಉಚ್ಛಾಟಿಸುವಂತೆ ಟಿ.ಡಿ.ಮೇಘರಾಜ್‌ಗೆ ಶಿಫಾರಸು ಮಾಡಲಾಗಿದೆ.