ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೇಜರ್‌ ಸರ್ಜರಿ! ಹೊಸ ಜಿಲ್ಲಾಧ್ಯಕ್ಷ ಯಾರು ಗೊತ್ತಾ? ಮೊದಲೇ ವರದಿ ಮಾಡಿತ್ತು ಮಲೆನಾಡು ಟುಡೆ

Major surgery in Shimoga District Congress! Do you know who the new district president is? Earlier reported by Malenadu Today

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೇಜರ್‌ ಸರ್ಜರಿ! ಹೊಸ ಜಿಲ್ಲಾಧ್ಯಕ್ಷ ಯಾರು ಗೊತ್ತಾ? ಮೊದಲೇ ವರದಿ ಮಾಡಿತ್ತು ಮಲೆನಾಡು ಟುಡೆ
Shimoga District Congress

Shivamogga  Apr 2, 2024  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ನಲ್ಲಿ ಲೋಕಸಭಾ ಚುನಾವಣೆ 2024 ರ ಎಲೆಕ್ಷನ್‌ ಸಂದರ್ಭದಲ್ಲಿಯೇ ಮತ್ತೊಂದು ದೊಡ್ಡ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನದಿಂದ ಎಚ್‌ ಹೆಸ್‌ ಸುಂದರೇಶ್‌ರನ್ನ ಕೆಳಕ್ಕೆ ಇಳಿಸಲಾಗಿದ್ದು, ಅವರ ಸ್ಥಾನಕ್ಕೆ ಆರ್‌ ಪ್ರಸನ್ನ ಕುಮಾರ್‌ರವರನ್ನ ತರಲಾಆಗಿದೆ

ಈ ಸಂಬಂಧ ಕೆಪಿಸಿಸಿ ನಿನ್ನೆ ಆದೇಶವನ್ನು ಹೊರಡಿಸಿದೆ. ಈ ಸಂಬಂಧ ಎಐಸಿಸಿಯಿಂದ ಪ್ರಕಟಣೆಯನ್ನ ನೀಡಲಾಗಿದ್ದು ಕೆಸಿ ವೇಣುಗೋಪಾಲ್‌ ರವರ ಲೆಟರ್‌ ಹೆಡ್‌ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ನೂತನ ಜಿಲ್ಲಾಧ್ಯಕ್ಷರ ವಿವರವನ್ನು ನೋಡುವುದಾದರೆ 

1. ಬಳ್ಳಾರಿ ನಗರ - ಪ್ರಶಾಂತ್ ಅಲ್ಲಂ ವೀರಭದ್ರಪ್ಪ

2. ಬೆಂಗಳೂರು ಪೂರ್ವ -ಕೆ.ನಂದಕುಮಾರ್

3. ಹಾವೇರಿ - ಸಂಜೀವಕುಮಾರ ನೇರಲಂಗಿ

4.ಕೊಪ್ಪಳ- ಅಮರೇಗೌಡ ಬಯ್ಯಾಪುರ

5. ಉಡುಪಿ- ಕಿಶನ್ ಹೆಗ್ಡೆ

6. ರಾಯಚೂರು- ಬಸವರಾಜ ಇಟಗಿ

7. ಶಿವಮೊಗ್ಗ- ಆರ್ ಪ್ರಸನ್ನ ಕುಮಾರ್

ರವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಮಲೆನಾಡು ಟುಡೆ ಈ ಮೊದಲೇ ಶಿವಮೊಗ್ಗ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಮೇಲುಗೈ ಆಗ್ತಿರುವ ಬಗ್ಗೆ ವರದಿ ಮಾಡಿದ್ದು ಅದರ ಪರಿಣಾಮವಾಗಿ ಜಿಲ್ಲಾಧ್ಯಕ್ಷ ಸ್ಥಾನ  ಬದಲಾವಣೆ ಆಗುತ್ತೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಪ್ರಸಾರವಾದ ವರದಿಯಂತೆ ಆರ್‌ ಪ್ರಸನ್ನಕುಮಾರ್‌ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ. 

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ