ಶಿವಮೊಗ್ಗ ಲೋಕಸಭಾ ಚುನಾವಣೆ ಗೆಲ್ಲಲ್ಲು ಮಧು ಬಂಗಾರಪ್ಪ ಮಾಸ್ಟರ್ ಪ್ಲಾನ್! ಏನಂದ್ರು ಅವರು ಓದಿ!

shivamogga Mar 15, 2024 : Madhu Bangarappa ಶಿವಮೊಗ್ಗ ಲೋಕಸಭಾ ಚುನಾವಣಾ ಆಖಾಡದಲ್ಲಿ ಕಾಂಗ್ರೆಸ್​ ಕೂಡ ತನ್ನದೇ ಆದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದೆ.  ಅಭ್ಯರ್ಥಿ ಹೆಸರು ಘೋಷಣೆಯಾಗಿ ಒಂದು ವಾರದ ಮೇಲಾದರೂ,  ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿಲ್ಲ.  ಇದರ ನಡುವೆ ಸಹೋದರಿಯ ಪರವಾಗಿ ಎರಡನೇ ಬಾರಿ ಸುದ್ದಿಗೋಷ್ಟಿ ನಡೆಸಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗ್ಯಾರಂಟಿ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ . ಗ್ಯಾರಂಟಿ ಯೋಜನೆಗಳು ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ಜನರಲ್ಲಿ ವಿಶ್ವಾಸ ಬಂದಿದೆ, ಜನರು ಪಕ್ಷ ಹಾಗೂ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದಿದ್ದಾರೆ.  

ಗ್ಯಾರಂಟಿ ಸಾಕು,  ಗ್ಯಾರಂಟಿ ನಮ್ಮನ್ನ ಗೆಲ್ಲಿಸುತ್ತದೆ ಎಂದ ಅವರು,  ಗೀತಾ ಮುಂದೆ ಇರ್ತಾರಾ ಅದಕ್ಕೆಲ್ಲಾ ನಾನು ಉತ್ತರ ನೀಡುವುದಿಲ್ಲ, ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದಾಗ ಬಿ.ವೈ ರಾಘವೇಂದ್ರ ಅವರದು ಏನು ಕೊಡುಗೆ ಇತ್ತು ಎಂದು ಪ್ರಶ್ನಿಸಿದ ಮಧು ಬಂಗಾರಪ್ಪರವರು  ಹತ್ತು ವರ್ಷದ ಹಿಂದೆ ಹಣ ಇತ್ತು ಅಷ್ಟೇ, ಹಾಗಾಗಿ ಅದನ್ನ ಬಿಡಬೇಕು ಎಂದರು.  

ಗೀತಾ ಶಿವರಾಜ್ ಕುಮಾರ್ ಬಹಳ ಆಕ್ಟಿವ್ ಆಗಿ ಅವರ ಜವಾಬ್ದಾರಿಯನ್ನ ನಿರ್ವಹಿಸುತ್ತಾರೆ. ಚುನಾವಣಾ ಫಲಿತಾಂಶದ ನಂತರ ಸಂಸದರಾಗಿ ಗೀತಾ ಶಿವರಾಜ್ ಕುಮಾರ್ ಅವರ ಜವಾಬ್ದಾರಿಯನ್ನ ನಿರ್ವಹಿಸುತ್ತಾರೆ .ಜಿಲ್ಲೆಯ ಧ್ವನಿಯಾಗಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದಿದ್ದಾರೆ. 

ಇದೇ ವೇಳೆ ಚುನಾವಣೆ ತಯಾರಿ ಬಗ್ಗೆ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸುಮಾರು 400 ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ  ಡಿಸಿಎಂ ಡಿಕೆ ಶಿವಕುಮಾರ್ ರವರನ್ನು  ತಾಲೂಕು ಮಟ್ಟಕ್ಕೆ ಕೆರೆಸಬೇಕು ಅಂದುಕೊಂಡಿದ್ದೇವೆ ಮತ್ತು ಶಿವಣ್ಣರ ಮೂಲಕ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಬೇಕು ಅಂದುಕೊಂಡಿದ್ದೇವೆ ಎಂದ ಮಧು ಬಂಗಾರಪ್ಪನವರು ಈ  ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೇವೆ ಎಂದಿದ್ದಾರೆ. ಅಲ್ಲದೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬರುತ್ತಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು,  ಮೋದಿಯವರು ಶಿವಮೊಗ್ಗ ಕ್ಕೆ ಬಂದು ಸುಳ್ಳು ಹೇಳಿ ಹೋಗಬಹುದು ಎಂದಿದ್ದಾರೆ. 

Leave a Comment