ಆರಗರಿಗೆ ಏಕವಚನ, ಬಿಜೆಪಿಗೆ ಗ್ಯಾರಂಟಿ ಬಾಣ! ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್ ಏನೇನು ಹೇಳಿದ್ರು? ಓದಿ

What did DK Shivakumar say in Shivamogga? Read

ಆರಗರಿಗೆ ಏಕವಚನ, ಬಿಜೆಪಿಗೆ ಗ್ಯಾರಂಟಿ ಬಾಣ!  ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್ ಏನೇನು ಹೇಳಿದ್ರು? ಓದಿ
What did DK Shivakumar say in Shivamogga? Read

Shivamogga Feb 24, 2024  DK Shivakumar in Shivamogga ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ನಡೆಯುತ್ತಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರ ಮಾತಿನ ಬಳಿಕ ವೇದಿಕೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್   ರವರು ಕಾರ್ಯಕ್ರಮಕ್ಕೆ ಎಂಎಲ್​ಎ ಸಂಗಮೇಶ್​  ರವರು ಅನಾರೋಗ್ಯದಿಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ತಿಳಿಸಿದರು. ಹಾಗೆ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಅಭಿನಂದನೆ ತಿಳಿಸಿದರು. 

ಶಿವಪ್ಪನಾಯಕ ಆಳಿದ ನಾಡು, ಕುವೆಂಪುರವರ ಜನ್ಮ ಬೀಡು, ಸಮಾಜವಾದಿ ಚಿಂತಕರ ಬೀಡಿನಲ್ಲಿ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪರವರ ಹೊರಾಟವನ್ನು ನನ್ನ ವಿದ್ಯಾರ್ಥಿ ಜೀವನದಲ್ಲಿ ನೋಡಿದ್ದೇನೆ. ಚಿಕ್ಕಜಿಲ್ಲೆಯಾದರೂ ಅತಿಹೆಚ್ಚು ಮುಖ್ಯಮಮಂತ್ರಿಗಳನ್ನ ನೀಡಿರುವ ನಾಡು ಶಿವಮೊಗ್ಗ. ನಾನು ಬಂಗಾರಪ್ಪನವರ ಶಿಷ್ಯ. ನಾನು ಇರುವ ಕ್ರಾಟ್ರಸ್​ನ್ನ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಇದೆ. ಅದರಲ್ಲಿ ಸಿದ್ದರಾಮಯ್ಯರು ಇದ್ದರು ಎನ್ನುವ ಕಾರಣಕ್ಕೆ ಆಯ್ದುಕೊಳ್ಳಲಿಲ್ಲ. ಬಂಗಾರಪ್ಪನವರು ಇದ್ದ ಸಂದರ್ಭದಲ್ಲಿ ಅಲ್ಲಿಯೇ ಅವರಿಗಾಗಿ ಕಾಯುತ್ತಾ ಕುಳಿತಿರುತ್ತಿದ್ದೆ. ಆ ಮನೆಗೆ ಹೋಗುವುದಕ್ಕೆ ಸಿಕ್ಕ ಭಾಗ್ಯದ ಕಾರಣಕ್ಕೆ ಆ ಕ್ವಾಟ್ರಸ್​ಗೆ ಈಗ ಹೋಗಿದ್ದೇನೆ. 

ಶಿವಮೊಗ್ಗ ದೊಡ್ಡ ಇತಿಹಾಸ ಉಳ್ಳಂತಹ ನಾಡು. ಈ ಸಮಾವೇಶಕ್ಕೆ ಅತಿಹೆಚ್ಚು ತಾಯಂದಿರು, ಯುವಕರು, ರೈತರು ಬಂದಿದ್ದಾರೆ,. ನನ್ನ ಗುರಿ 141 ಸೀಟು ಬರುತ್ತೆ ಎಂದು ಹೇಳಿದ್ದೆ.  ಈ ಐದು ಗ್ಯಾರಂಟಿಗಳ  ಸಮಾವೇಶ ನಡೆಯುತ್ತಿದೆ ಬಿಜೆಪಿ ಸರ್ಕಾರದವರು ಏನೇ ಟೀಕೆ ಮಾಡಬಹುದು. ನಿಮಗೆ ಓಟು ಹಾಕದಿದ್ದರೇ ಗ್ಯಾರಂಟಿ ನಿಲ್ಲಬಹುದು ಎಂದು ಹೇಳಬಹುದು. ಆದರೆ ಕಾಂಗ್ರೆಸ್​ ಸರ್ಕಾರ ಗಟ್ಟಿಯಾಗಿದೆ. ಈ ಐದು ವರ್ಷವಲ್ಲ, ಇನ್ನೊಂದು ಸಲ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. 

ಐದು ಬೆರಳು ಸೇರಿ ಮುಷ್ಟಿಯಾಯ್ತು, ಐದು ಗ್ಯಾರಂಟಿ ಸೇರಿ ಕೈಗಟ್ಟಿಯಾಯ್ತು. ಇದನ್ನ ನೋಡಿ ಇವತ್ತು ಬಿಜೆಪಿ ಪ್ರೆಂಡ್ಸ್ ಬರಲಿಲ್ಲ. ಅರಳಿದ ಕಮಲ ಉರುಳಿ ಹೋಯ್ತು, ತೆನೆ ಹೊತ್ತ ಕುಮಾರಣ್ಣ ತೆನೆ ಎಸೆದು ಬಿಜೆಪಿ ಜೊತೆ ಹೋಗಿದ್ದಾರೆ. ನಮ್ಮ ಸಹೋದರಿಯರರು ಹೇಳಿದ್ರು ಕಾಂಗ್ರೆಸ್ ನುಡಿದಂತೆ ನಡೆದಿದ್ದಾರೆ ಎಂದು. ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ದೇವಸ್ಥಾನ ಯಾರ ಹಕ್ಕು ಆಸ್ತಿಯಲ್ಲ. ರಾಮಮಂದಿರ ಮೇಲೆ ಬಹಳ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ. 

ಅಯೋಧ್ಯೆಯಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟವರು ಯಾರು ರಾಜೀವ್ ಗಾಂಧಿಯವರು. ರಾಜಕಾರಣದಲ್ಲಿ ಧರ್ಮ ಇರಬಾರದು, ಧರ್ಮದಲ್ಲಿ ರಾಜಕಾರಣ ಇರಬಾರದು. ನಾವು ಜಾತಿ ಮೇಲೆ ಗ್ಯಾರಂಟಿ ಕೊಟ್ಟಿಲ್ಲ. ನೀತಿ ಮೇಲೆ ಗ್ಯಾರಂಟಿ ಕೊಟ್ಟಿದ್ದೇವೆ. ಕಾಂಗ್ರೆಸ್​ ಸರ್ಕಾರ ಎಲ್ಲಾ ವರ್ಗದ ಬಗ್ಗೆ ಚಿಂತನೆ ಮಾಡುತ್ತದೆ. 

ತಮ್ಮ ಮನೆಯನ್ನು ಬೆಳಗಲಿ ಎಂದು ಪ್ರಜಾಧ್ವನಿ ಯಾತ್ರೆ ಮಾಡಿದಾಗ, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರು ನಾಯಕತ್ವ ವಹಿಸಿದ್ದ ಜಾಗದಲ್ಲಿದ್ದ ಬಾವಿಯಿಂದ ನೀರು ತೆಗೆದು ಕುಡಿಸಿ ಈ ರಾಜ್ಯದ ದಾರಿದ್ರ್ಯಾ ಹೋಗಲಿ ಎಂದು ಗೃಹಜ್ಯೋತಿ ಯೋಜನೆಯನ್ನು ಆರಂಭಿಸಿದ್ದವು. ಇದಕ್ಕೆ ಮನೆಯಲ್ಲಿ ಬರುತ್ತಿರುವ ಜೀರೋ ಬಿಲ್​ಗಳೇ ಸಾಕ್ಷಿ

ಅಕ್ಕ ಕೊಡುತ್ತೇವೆ ಎಂದೆವು, ಕೇಂದ್ರ ಸರ್ಕಾರ ಕೊಡಲ್ಲ. ಆದರೆ ನಾವು ಮಾತು ಕೊಟ್ಟಿದ್ದೇವೆ. ಆ ಕಾರಣ 34 ರೂಪಾಯಿ ಒಂದು ಕೆಜಿ ಅಕ್ಕಿಗೆ ಪರ್ಯಾಯವಾಗಿ ನೀಡಿದೆವು. ಮನೆಯಲ್ಲಿರುವ ಹೆಣ್ಣುಮಕ್ಕಳು ಹಲವೆಡೆ ಓಡಾಡುತ್ತಾರೆ.ತಾಯಿಂದರು ಸೌಖ್ಯವಾಗಿ ಓಡಾಡುವಂತಾಗಲಿ 1000 ಬಸ್​ಗಳನ್ನ ಖರೀದಿಸಲಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ನಾನೂರು ಐನೂರು ರೂಪಾಯಿ ಖರ್ಚಾಗುತ್ತದೆ. ಮೂರು ನಾಲ್ಕು ಸಲ ಓಡಾಡಿದರೂ ತಿಂಗಳಿಗೆ 2-3 ಸಾವಿರ ಉಳಿಯುತ್ತದೆ. 

ಗ್ಯಾಸ್ ಬೆಲೆ ಜಾಸ್ತಿಯಾಯ್ತು, ಎಣ್ಣೆ ಪದಾರ್ಥಗಳ ಬೆಲೆ ಜಾಸ್ತಿಯಾಯ್ತು, ಸಾಲು ಸಾಲು ಸಂಕಷ್ಟಗಳು ಎದುರಾಗಿದ್ದವು. ಈ ಕಾರಣಕ್ಕೆ ಬ್ಯಾಗ್ಯದ ಲಕ್ಷ್ಮೀ ಬಾರಮ್ಮ ಎನ್ನುವಂತೆ ಒಂದು ಕೋಟಿ 10 ಲಕ್ಷ ರೂಪಾಯಿಯನ್ನು ನಿಮ್ಮ ಅಕೌಂಟ್​ಗೆ ಹಾಕುವಂತಹ ಯೋಜನೆ ರಾಷ್ಟ್ರದಲ್ಲಿಯೇ ಒಂದು ಇತಿಹಾಸವಾಗಿದೆ. 

ನಾನು ಹಳ್ಳಿಯಲ್ಲಿಯೇ ಓದುತ್ತಿದ್ದೆ, ಓದಬೇಕು ಎಂದು ಬೆಂಗಳೂರಿಗೆ ಬಂದೆ. ಅಷ್ಟೋಇಷ್ಟೋ ಓದಿ ನಿಮ್ಮೆದರು ನಿಂತಿದ್ದೇನೆ. ಇದೀಗ ಬೆಂಗಳೂರಿನಲ್ಲಿ ಸಿಗುವಂತಹ ವಿದ್ಯಾಭ್ಯಾಸ ಮೂರು ಪಂಚಾಯ್ತಿಗಳ ನಡುವೆ ಒಂದೊಂದು ಶಾಲೆಗೆ ಐದು ಕೋಟಿ ರೂಪಾಯಿ ಬಂಡವಾಳಾ ಕರ್ನಾಟಕ ಪಬ್ಲಿಕ್ ಸ್ಕೂಲ್​ನ್ನ ಆರಂಭಿಸುವಂತಹ ಕಾರ್ಯಕ್ರಮವನ್ನ ಮಾಡುತ್ತಿದ್ದೇವೆ. ಸಿಎಸ್​ಆರ್​ ಫಂಡ್​ ಸೇರಿದಂತೆ ದತ್ತು ಕಾರ್ಯಕ್ರಮದ ಅಡಿಯಲ್ಲಿ ಯೋಜನೆಯನ್ನ ಮಾಡುತ್ತಿದ್ದೇವೆ. 

ಭಾರತ್ ಜೋಡೋ ಯಾತ್ರೆಯಲ್ಲಿ ಒಬ್ಬ ತಾಯಿ ರಾಹುಲ್ ಗಾಂಧಿಯವರಿಗೆ ಇದು ನಿಮ್ಮ ಇಂದಿರಮ್ಮ ನೀಡಿದ ಭೂಮಿಯಲ್ಲಿ ಬೆಳೆದ ಫಸಲು ಸೌತೆಕಾಯಿ ಎಂದು ನೀಡಿದ್ದ ಘಟನೆ ನಡೆಯಿತು. ಆ ಘಟನೆಗೆ ನಾನು ಸಾಕ್ಷಿಯಾದೆ. ಇದು ದೇಶದ ಇತಿಹಾಸ. ಮುಂದಿನ ದಿನಗಳಲ್ಲಿ 25 ವರ್ಷ ಮಿತಿಯನ್ನ ಇಟ್ಟು ಅರಣ್ಯ ಜಮೀನಿನ ಹಕ್ಕನ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ನೀಡಲು ಬದ್ಧರಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ಘೋಷಿಸಿದರು. 

ಅರಣ್ಯ ಅಧಿಕಾರಿಗಳಿಗೆ ಈ ಮೂಲಕ ಹೇಳುವುದು ಏನಂದರೆ ಬಡವರನ್ನ ಒಕ್ಕಲೆಬ್ಬಿಸುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ಇದು ನಮ್ಮ ಸರ್ಕಾರದ ಜವಾಬ್ದಾರಿ ಎಂದ ಡಿಕೆ ಶಿವಕುಮಾರ್ ಶರಾವತಿ ಸಂತ್ರಸ್ತರ ಸಮಸ್ಯೆಗೂ ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದರು. ಬಿಜೆಪಿ ಸ್ನೇಹಿತರಿಗೆ ಕೇಳುವುದಿಷ್ಟೆ ನಿಮಗೆ ನಾಲ್ಕು ವರ್ಷ ಅಧಿಕಾರ ಇತ್ತಲ್ಲ, ನೀವು ಈ ರಾಜ್ಯದ ಜನರಿಗೆ ನೀಡಿದ ಕಾರ್ಯಕ್ರಮ ಏನು ಎಂಬುದನ್ನ ನೀವು ಹೇಳಬೇಕು. ನಾನು ಇಷ್ಟೆಲ್ಲಾ ಯೋಜನೆಗಳನ್ನ ಹೇಳುತ್ತೇನೆ. ಆದರೆ ನಿಮ್ಮ ಒಮ್ಮ ಶಾಸಕ ಆರಗ ಜ್ಞಾನೇಂದ್ರ ಇದು 420 ಗ್ಯಾರಂಟಿ ಎಂದು ಹೇಳುತ್ತಾರೆ. ಆರಜ ಜ್ಞಾನೇಂದ್ರ ನಿನಗೆ ಜ್ಞಾನ ಇದ್ಯಾ, ಅರೆ ಜ್ಞಾನ ಎಂದು ಟೀಕಿಸಿದ್ರು. ಅಧಿಕಾರ ಇದ್ದಾಗ ಏನೂ ಮಾಡಲಾಗದೇ ಇರುವುವರು ಇಲ್ಲದಿದ್ದಾಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಅದು ಸಾಧ್ಯವಾ.. ಯಡಿಯೂರಪ್ಪನವರು ಸೀರೆ ಸೈಕಲ್ ಕೊಟ್ಟರು, ಯಾಕೆ ನಿಲ್ಲಿಸಿದ್ದರು ಅದನ್ನ . ಸಾಲಮನ್ನಾ ಮಾಡ್ತೀವಿ ಅಂದಿದ್ರು ಮಾಡಿದ್ರು. ಇವತ್ತು ಸುಮ್ಮನೆ ಖಾಲಿ ಮಾತು ಆಡುತ್ತೀದ್ದೀರಿ ಎಂದು ಬಿಜೆಪಿಯನ್ನು ಟೀಕಿಸಿದರು. 

ಕುವೆಂಪುರವರ ಭಾರತಾಂಭೆಯ ಮಕ್ಕಳೆಲ್ಲಾ ಸೋದರರು ಎಂಬ ಮಾತಿನಂತೆ ನಡೆದುಕೊಂಡಿದ್ದೇವೆ. ನಮ್ಮ ಗ್ಯಾರಂಟಿ,ವ್ಯಾರಂಟಿ  ಕ್ವಾಲಿಟಿ ಎಲ್ಲವೂ ಇರುತ್ತದೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ, ದೇವರ ಬಳಿ ಎಲ್ಲಾ ಹೇಳಲಾಗುವುದಿಲ್ಲ ಪೂಜಾರಿ ಬಳಿ ಹೇಳಿಕೊಳ್ಳುತ್ತಿದ್ದೇವೆ. ನಾವು ದೊಡ್ಡ ದೊಡ್ಡ ದೇವಸ್ಥಾನದಲ್ಲಿ ಒಂದು 10 ಪರ್ಸೆಂಟ್ ಹಣ ತೆಗೆದುಕೊಂಡು ಅದನ್ನು ಅರ್ಚಕರಿಗೆ ನೀಡುವ ಎಂಬ ಯೋಜನೆಯನ್ನು ಮಾಡಿದ್ದೆವು. ಅದನ್ನ ಮೇಲ್ಮನೆಯಲ್ಲಿ ಸೋಲಿಸುತ್ತಾರೆ. ಮುಂದೊಂದು ದಿನ ಅದನ್ನ ಜಾರಿಗೆ ತರುತ್ತೇವೆ. 

52 ಸಾವಿರ ಕೋಟಿಗಳನ್ನ ಐದು ಗ್ಯಾರಂಟಿಗಳಿಗಾಗಿ ಸಿದ್ದರಾಮಯ್ಯ ಸರ್ಕಾರ ಮೀಸಲಿಟ್ಟಿದ್ದಾರೆ. ಇಂತಹ ಒಂದೇ ಒಂದು ಗ್ಯಾರಂಟಿಯನ್ನು ಬಿಜೆಪಿಯವರು ಕೊಡಲು ಸಾಧ್ಯವಾ? ಯಾವೊಬ್ಬ ಬಿಜೆಪಿಯುವರು ಗ್ಯಾರಂಟಿ ತಗಂಡವರು ವಾಪಸ್ ಕೊಡುತ್ತಾರಾ?ಶಾರದಾ ಪೂರ್ಯನಾಯ್ಕರವರು ಕಾಂಗ್ರೆಸ್​ ಸರ್ಕಾರದ ಬಗ್ಗೆ ಹೇಳಿದ ಮಾತಿಗೆ ಅವರಿಗೆ ವಂದನೆಗಳು. ಕಾಂಗ್ರೆಸ್ ಸರ್ಕಾರ ಮಾತ್ರ ಜನರಿಗೆ ಅನುಕೂಲವಾಗುವ ಯೋಜನೆಗಳನ್ನ ಜಾರಿಗೆ ತಂದು ಕೊಟ್ಟಿದೆ. 

ಬೆಳಗಾವಿಯಲ್ಲಿ ಹೆಣ್ಣುಮಗಳೊಬ್ಬರು, ಆ ಮಗನ ಶವಸಂಸ್ಕಾರದ ಸಂದರ್ಭಲ್ಲಿ ನೀನು ನನಗೆ ಸಾಕ್ತಿದ್ದೆ, ಈಗ ಸರ್ಕಾರ ನನಗೆ ಸಾಕ್ತಿದೆ ಎಂದು ಹೇಳಿದ್ದನ್ನ ಪೇಪರ್​ನಲ್ಲಿ ಓದಿದ್ದೇನೆ .ಇಂತಹ ಹಲವಾರು ಕಾರ್ಯಕ್ರಮಗಳನ್ನ ಕಾಂಗ್ರೆಸ್​ ಸರ್ಕಾರ ನೀಡಿದೆ. ಎರಡು ಕಾರ್ಯಕ್ರಮಗಳನ್ನ ಶಿವಮೊಗ್ಗದಲ್ಲಿ ನೋಡಿದ್ದೇನೆ. ಕಾರ್ಯಕ್ರಮ ಜನರ ಹೃದಯಗೆದ್ದಿದೆ. ಮುಂದಕ್ಕೆ ಚುನಾವಣೆ ಬರುತ್ತದೆ. ಈ ಕೈ ಗೆ ಶಕ್ತಿ ತುಂಬಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.