ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರು ಹೇಳಿದ್ದೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

Shivamogga Feb 24, 2024  Congress guarantee schemes  ಗೃಹಲಕ್ಷ್ಮೀ ಯೋಜನೆ ಹೇಗೆಲ್ಲಾ ಉಪಯೋಗವಾಗುತ್ತದೆ ಎಂಬುದಕ್ಕೆ ಇವತ್ತು ಅಲ್ಲಮಪ್ರಭು ಮೈದಾನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಸಾಕ್ಷ್ಯವಾಯ್ತು . 

ಸಮಾರಂಭದಲ್ಲಿ ತಮ್ಮ  ಅಭಿಪ್ರಾಯವನ್ನು ಹಂಚಿಕೊಂಡ  ಫಾತಿಮಾ ರೋಡ್ರಿಗ್ರಸ್, ತಾವು ಗೃಹಲಕ್ಷ್ಮೀ ಯೋಜನೆಯಿಂದ ಲಾಭ ಪಡೆದಿದ್ದೇನೆ. ಸಿಂಗಲ್ ಪೇರೆಂಟ್ ಆಗಿದ್ದು, ತಮಗೆ ಲಂಗ್ಸ್ ಪ್ರಾಬ್ಲಮ್ ಇರುವುದರಿಂದ ಸರಿಯಾಗಿ ಕೆಲಸ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. 

ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಬಂದ ಮೇಲೆ ನನ್ನ ಮಗನ ಫೀಜ್ ಕಟ್ಟಿದ್ದೇನೆ, ನನ್ನ ಮೆಡಿಸನ್​ಗೆ ಅವಶ್ಯಕವಾದ ಹಣವನ್ನು ಪಡೆದಿದ್ದೇನೆ. ನನ್ನ ಕಷ್ಟವನ್ನು ನೋಡಿ ಅಂಗನವಾಡಿ ಕಾರ್ಯಕರ್ತರು ನನಗೆ ಗೃಹಲಕ್ಷ್ಮೀ ಹಣ ಸಿಗುವ ಹಾಗೆ ಮಾಡಿದ್ದಾರೆ. ಸರ್ಕಾರ ಮಾಡಿದ ಈ ಯೋಜನೆ ನನಗೆ ಸಾಕಷ್ಟು ಉಪಯೋಗ ಮಾಡಿಕೊಟ್ಟಿದೆ ಎಂದಿದ್ದಾರೆ. 

ಅಲ್ಲದೆ ಈ ಸೌಲಭ್ಯ ಕೊಡಿಸಿದ ಗಣ್ಯರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮನವಿ ಮಾಡಿದರು, ಇನ್ನೂ ಇದೇ ವೇಳೆ ಅನ್ನಭಾಗ್ಯದ ಫಲಾನುಭವಿಯಾದ ಮದು ಎಂಬವರು ಮಾತನಾಡ್ತಾ, ತನ್ನ ಬದುಕಿಗೆ ಅನ್ನಭಾಗ್ಯ ಸಹಾಯ ಮಾಡಿದೆ. ಮನೆ ನಡೆಸಲು ಅನುಕೂಲವಾಗುತ್ತಿದೆ. ಈ  ಸಹಾಯ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 

ಇನ್ನೂ ಭದ್ರಾವತಿ ಶಾಲಿನಿಯವರು ಮಾತನಾಡ್ತಾ , ನಾನು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೌಸ್  ಕೀಪಿಂಗ್ ಕೆಲಸಕ್ಕೆ ಬರುತ್ತಿದ್ದೆ. ಪ್ರತಿ ತಿಂಗಳು ಒಂದುವರೆ ಸಾವಿರ ಖರ್ಚಾಗುತ್ತಿತ್ತು. ಇದೀಗ ಶಕ್ತಿ ಯೋಜನೆ ಬಂದಿದ್ದರಿಂದ ನನಗೆ ಈ ಹಣವನ್ನು ಮನೆಯ ಖರ್ಚಿಗೆ ಉಪಯೋಗಿಸಲು ಸಾಧ್ಯವಾಗಿದೆ ಎಂದಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor