KARNATAKA NEWS/ ONLINE / Malenadu today/ May 10, 2023 GOOGLE NEWS
ತೀರ್ಥಹಳ್ಳಿ/ ಶಿವಮೊಗ್ಗ ಇಲ್ಲಿನ ಮೇಗರವಳ್ಳಿ ಸಮೀಪ ಅರೆಕಲ್ಲು ಬಳಿ ಆಗುಂಬೆ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ದಡಮಘಟ್ಟದಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರೋಗಿಯೊಬ್ಬರನ್ನ ನೋಡಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಓವರ್ ಸ್ಪೀಡ್ನಲ್ಲಿ ಅನಾಹುತ
ಇವತ್ತು ಮಧ್ಯಾಹ್ನ ಒಂದುವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ಭದ್ರಾವತಿಯಿಂದ ಹೊರಟಿದ್ದರು. ಈ ವೇಳೆ ಆಗುಂಬೆಯ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್ ಸ್ಪೀಡ್ನಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸಹ ಬಹಳಷ್ಟು ದೂರ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಕಾರು ಸಹ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ.
ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕರು
ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ತೀರ್ಥಹಳ್ಳಿಯ ಆ್ಯಂಬುಲೆನ್ಸ್ ಚಾಲಕರು ರೆಹಮತ್, ಅನ್ಸರ್ ಹಾಗೂ ರಂಜಿತ್ ಗಾಯಾಳುಗಳ ಸಹಾಯಕ್ಕೆ ನಿಂತಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಮ್ತಿಯಾಜ್ ಹಾಗೂ ಫೈರೋಜ್ ರನ್ನ ಆ್ಯಂಬುಲೆನ್ಸ್ನಲ್ಲಿ ಸೀದಾ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ಧಾರೆ.
ಗಾಯಾಳುಗಳ ಬಳಿ ಇದ್ದ ಹಣ ಒಪ್ಪಿಸಿದ ಚಾಲಕರು
ಅಲ್ಲದೆ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಗಾಯಾಳುಗಳ ಬಳಿ ಇದ್ದ ಒಂದು ಲಕ್ಷ ರೂಪಾಯಿ ಹಾಗೂ ಮೊಬೈಲ್ ಗಳನ್ನು ಅವರಿಗೆ ಒಪ್ಪಿಸಿದ್ಧಾರೆ. ಸದ್ಯ ಮಣಿಪಾಲ್ನ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿರುವ ಇಬ್ಬರ ಸ್ಥಿತಿಯು ಗಂಭೀರವಾಗಿದೆ . ಇನ್ನೂ ಆ್ಯಂಬುಲೆನ್ಸ್ ಚಾಲಕರ ಸಹಾಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಪೊಲೀಸ್ ಇಲಾಖೆಯ ಬ್ಲ್ಯಾಕ್ ಬ್ಯೂಟಿ ಗೌರಿ ಇನ್ನಿಲ್ಲ
ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನ ಶ್ವಾನ ಗೌರಿ ಇನ್ನಿಲ್ಲ. ಶಿವಮೊಗ್ಗ ಜಿಲ್ಲೆಯ ಅಪರಾಧ ಪತ್ತೆ ದಳದಲ್ಲಿ ಬ್ಲ್ಯಾಕ್ ಬ್ಯೂಟಿಯಾಗಿ ಕೆಲಸ ಮಾಡುತ್ತಿದ್ದ ಗೌರಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ಸಕಲ ಸರ್ಕಾರಿ ಗೌರವದ ಜೊತೆ ಅಂತಿಮ ನಮನ ಸಲ್ಲಿಸಲಾಗಿದೆ.
ಯಾರಿ ಗೌರಿ?
ಲ್ಯಾಬ್ರಡಾರ್ ರಿಟ್ರೀವರ್ ತಳಿ ಗೌರಿ ಹೆಸರಿನ ಶ್ವಾನ ಹುಟ್ಟಿದ್ದು 2012 ರ ಆಗಸ್ಟ್ 3 ರಂದು. ಆನಂತರ ಈ ಶ್ವಾನವನ್ನು ಅಪರಾಧ ಪತ್ತೆದಳಕ್ಕೆ 2013 ರಲ್ಲಿ ಸೇರಿಸಿಕೊಳ್ಳಲಾಗಿತ್ತು. ಅಲ್ಲಿಂದ ಪೊಲೀಸ್ ಇಲಾಖೆಯೊಂದಿಗೆ ತನ್ನ ಸರ್ಕಾರಿ ಕರ್ತವ್ಯ ನಿರ್ವಹಿಸ್ತಿದ್ದ ಗೌರಿ, ಬರೋಬ್ಬರಿ 36 ಕೇಸ್ಗಳಲ್ಲಿ ಪೊಲೀಸರಿಗೆ ಅಪರಾಧಿಯ ಸುಳಿವು ನೀಡಿದ್ಧಾಳೆ.
ಕನ್ನಡದಲ್ಲಿ ಕಮ್ಯಾಂಡ್
312 ಪ್ರಕರಣಗಳಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದ ಗೌರಿ ಕನ್ನಡದಲ್ಲಿಯೇ ಕಮಾಂಡ್ ಪಡೆದುಕೊಂಡು ಅದರಂತೆ ನಡೆಯುತ್ತಿದ್ದಳು.
ಲೋಕೇಶ್ ನೋಡಿಕೊಳ್ತಿದ್ದ ಶ್ವಾನ
ಪೊಲೀಸ್ ಸಿಬ್ಬಂದಿ ಲೋಕೇಶ್ರವರ ತೆಕ್ಕೆಯಲ್ಲಿದ್ದ ಶ್ವಾನ ಹಲವು ಶ್ವಾನ ಪ್ರದರ್ಶನಗಳಲ್ಲಿಯು ಪಾಲ್ಗೊಂಡು ಜನರನ್ನ ರಂಜಿಸಿದೆ. ಪೊಲೀಸ್ ಇಲಾಖೆಯಲ್ಲಿ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಬ್ಲ್ಯಾಕ್ ಬ್ಯೂಟಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ಧಾಳೆ.
ಡಿಆರ್ಆರ್ ಗ್ರೌಂಡ್ನಲ್ಲಿ ಅಂತಿಮ ನಮನ
ಚುನಾವಣಾ ಕರ್ತವ್ಯದ ನಡುವೆಯು ಎಸ್ ಮಿಥುನ್ ಕುಮಾರ್ ಗೌರಿಶ್ವಾನಕ್ಕೆ ಅಂತಿಮ ನಮನವನ್ನು ಸಲ್ಲಿಸಿದ್ಧಾರೆ. ಡಿಎಆರ್ ಗ್ರೌಂಡ್ ನಲ್ಲಿ ಗೌರಿಗೆ ಸರ್ಕಾರಿ ಅಂತಿಮ ಗೌರವನ್ನು ಸಲ್ಲಿಸಲಾಗಿದೆ. ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ತಿತರಿದ್ದರು.
ಮತದಾನ ಮುಗಿಯುತ್ತಲೇ ಶಿವಮೊಗ್ಗದ ಹಲವೆಡೆ ವರುಣಾಗಮನ
ಶಿವಮೊಗ್ಗ ದಲ್ಲಿ ಮೋಚಾ ಏಫೆಕ್ಟ್ ತುಸು ಜೋರಾಗಿದೆ. ಮತದಾನ ಅಂತ್ಯವಾಗುವ ಹೊತ್ತಿನಲ್ಲೇ ಜೋರು ಮಳೆಯ ಲಕ್ಷಣ ಕಾಣಿಸಿತ್ತು. ಬೀಸುಗಾಳಿ,ಸಿಟಿಯಲ್ಲಿನ ಮರಗಳನ್ನ ಹಲವು ನಿಮಿಷಗಳ ಕಾಲ ವಾಡಿಸಿತ್ತು. ಆನಂತರ ಕೆಲವಡೆ ಮಳೆಯಾಗಿದೆ.
ಅತ್ತ ಭದ್ರಾವತಿಯಲ್ಲಿಯು ಸಂಜೆ ನಾಲ್ಕುಗಂಟೆಯ ಹೊತ್ತಿಗೆ ಮಳೆಯ ಆಗಮನವಾಗಿದೆ. ಗುಡುಗು ಸಿಡಿಲಿನೊಂದಿಗೆ ಸುರಿದ ವರ್ಷಧಾರೆ ಕೆಲಕಾಲ ಮತದಾರರಿಗೆ ಸಮಸ್ಯೆ ಮಾಡಿತು.
ಅತ್ತ ತೀರ್ಥಹಳ್ಳಿಯುಲ್ಲಿಯು ಕೆಲಹೊತ್ತು ಮಳೆಯಾಗಿದೆ. ಮೋಚಾ ಚಂಡಮಾರುತದ ಪರಿಣಾಮದಿಂದಾಗಿ ಶಿವಮೊಗ್ಗ ಜಿಲ್ಲೆಯು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಮೊದಲೇ ತಿಳಿಸಿತ್ತು.
ವರುಣ ಮತದಾನಕ್ಕೆ ಕೃಪೆ ತೋರಿದ್ದರಿಂದ ಶಿವಮೊಗ್ಗದಲ್ಲಿ ಉತ್ತಮ ಮತದಾನವಾಗಿದೆ. ಮತದಾನ ಮುಗಿಯುತ್ತಿದ್ದಂತೆ ಮಳೆಯ ಆಗಮನವಾಗಿದೆ.
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC) ಬಸ್ಗಳ ಓಡಾಟ! ಕಾರಣವೇನು ಗೊತ್ತಾ?
ಶಿವಮೊಗ್ಗ ನಗರದ ಬಸ್ ನಿಲ್ಧಾಣದಲ್ಲಿ ಇವತ್ತು ಬೆಂಗಳೂರು ನಗರ ಸಂಚಾರಕ್ಕೆ ಮೀಸಲಾಗಿರುವ ಬಿಎಂಟಿಸಿ ಬಸ್ಗಳ ಓಡಾಟ ಕಾಣ ಸಿಕ್ಕಿತ್ತು. ಇದು ಅಚ್ಚರಿಗೆ ಕಾರಣವಾಗಿತ್ತು. ಕೆಎಸ್ಆರ್ಟಿಸಿ ಬಸ್ಗಳು ಸೇರಿದಂತೆ ಖಾಸಗಿ ಬಸ್ಗಳನ್ನು ಸಹ ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಸ್ಗಳ ಕೊರತೆ ಎದ್ದು ಕಾಣುತ್ತಿತ್ತು. ಪರಸ್ಥಳದಿಂದ ವೋಟು ಹಾಕಲು ಹೊರಟವರು, ವೋಟು ಹಾಕಿ ವಾಪಸ್ ಹೊರಟವರು, ಬಸ್ಗಳಿಗಾಗಿ ಪರದಾಡುವಂತಾಗಿತ್ತು.
ಇನ್ನೊಂದೆಡೆ ಬಸ್ಗಳ ಕೊರತೆಯನ್ನು ನೀಗಿಸಲು ಸಾರಿಗೆ ನಿಗಮ ಶಿವಮೊಗ್ಗದಲ್ಲಿ ಬಿಎಂಟಿಸಿ ಬಸ್ಗಳನ್ನ ಬಿಟ್ಟಿತ್ತು. ಆಲ್ಮೋಸ್ಟ್ ಗಂಟೆಗೊಂದು ಬಸ್ ಗಳ ಓಡಾಟ ಕಂಡುಬಂದಿದ್ದು ವಿಶೇಷವಾಗಿ ಬಿಎಂಟಿಸಿ ಬಸ್ಗಳ ಓಡಾಟ ಕುತೂಹಲ ಮೂಡಿಸಿತ್ತು. ಜನರಿಗೆ ತೊಂದರೆಯಾಗದಂತೆ ನೀರ್ವಹಿಸಲು ಕೆಎಸ್ಆರ್ಟಿಸಿ ಬೆಂಗಳೂರಿನ ಬಸ್ಗಳನ್ನು ಲಾಂಗ್ ರೂಟ್ನಲ್ಲಿ ಓಡಿಸಿದೆ ಎನ್ನಲಾಗಿದೆ. ಈ ಬಸ್ಗಳ ಚಾಲಕರಿಗೆ ರೂಟ್ ಗೊತ್ತಿಲ್ಲದೇ ಇರುವುದು ಕೂಡ ಸಾಕಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಅಲ್ಲಲ್ಲಿ ದಾರಿಯಾವುದಯ್ಯ ಎಂದು ವಿಚಾರಿಸಿ ಚಾಲಕರು ಮುಂದಕ್ಕೆ ಸಾಗುತ್ತಿದ್ರು. ಇನ್ನೂ ಈ ಬಸ್ಗಳಲ್ಲಿ ಬೆಂಗಳೂರಿನ ಏರಿಯಾಗಳ ಟಿಕೆಟ್ನ್ನ ನೀಡಲಾಗುತ್ತಿತ್ತು.
ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲದೆ ತ್ರಾಸಪಟ್ಟುಕೊಂಡು ಬಿಎಂಟಿಸಿ ಬಸ್ಗಳನ್ನು ಚಲಾಯಿಸುತ್ತಿದ್ದ ಚಾಲಕರು ಒಂದು ಕಡೆಯಾದರೆ, ಟಿಕೆಟ್ ಗೊಂದಲ ಮತ್ತು ರಶ್ನಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು.
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media