ಗೃಹಲಕ್ಷ್ಮೀ ಯೋಜನೆ ಹಣ ಬಿಡಿಸಿಕೊಂಡು ಬರಲು ಹೋಗಿದ್ದ ಮಹಿಳೆ ಕಣ್ಮರೆ! ಕುಟುಂಬಸ್ಥರ ಹುಡುಕಾಟ

Woman who had gone to collect money from Grihalakshmi scheme in Thirthahalli has gone missing

ಗೃಹಲಕ್ಷ್ಮೀ ಯೋಜನೆ ಹಣ ಬಿಡಿಸಿಕೊಂಡು ಬರಲು ಹೋಗಿದ್ದ ಮಹಿಳೆ ಕಣ್ಮರೆ! ಕುಟುಂಬಸ್ಥರ ಹುಡುಕಾಟ

SHIVAMOGGA|  Dec 16, 2023  |  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಗೃಹಲಕ್ಷ್ಮೀ ಹಣವನ್ನು ಬಿಡಿಸಿಕೊಂಡು ಬರಲು ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ವರದಿ ಲಭ್ಯವಾಗಿದೆ. ಇಲ್ಲಿನ ರಂಜದ ಕಟ್ಟೆಯಲ್ಲಿ ಈ ಘಟನೆ ನಡೆದಿದೆ..

ತೀರ್ಥಹಳ್ಳಿ ಪೊಲೀಸ್ ಠಾಣೆ

ರಂಜದ ಕಟ್ಟೆ ಮುಳುಬಾಗಿಲು ಗ್ರಾಮದ 60 ವರ್ಷ ವಯಸ್ಸಿನ ಪಾರ್ವತಿ ಎಂಬವರು ಸದ್ಯ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ  ನಡೆಸಲಾಗುತ್ತಿದೆ.  ಮನೆಯಿಂದ ನಡೆದುಕೊಂಡು ಹೋದವರು ಆ ಬಳಿಕ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದ ಕುಟುಂಬಸ್ಥರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕಳ್ಳತನ

ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳು ಅಷ್ಟರ ಮಟ್ಟಿಗೆ ಸುದ್ದಿ ಎನಿಸುವುದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಳ್ಳತನದ ಘಟನೆಯೊಂದು ಇದೀಗ ರಾಜ್ಯದೆಲ್ಲೆಡೆ ಸುದ್ದಿಯಾಗುತ್ತಿದೆ.  ಏಕೆಂದರೆ  ಈ  ಕಳ್ಳತನ ನಡೆದಿರುವುದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ/ 

ಹೌದು, ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಕಚೇರಿಯಲ್ಲಿ ಕಳ್ಳತನವಾಗಿದೆ.  ಸಚಿವರ ಖಾಸಗಿ ಆಪ್ತ ಸಹಾಯಕನ ಬ್ಯಾಗ್ ಕಳ್ಳತನವಾಗಿದೆ. ಅಲ್ಲದೆ ಫೈಲ್, ಖಾಸಗಿ ಡಾಕ್ಯುಮೆಂಟ್, 15 ಸಾವಿರ ಹಣ ಕಳ್ಳತನವಾಗಿದೆ ಎಂದು ವರದಿಯಾಗಿದೆ. 

READ : ಶಿವಮೊಗ್ಗ ನಗರ ನಾಗರಿಕರ ಗಮನಕ್ಕೆ | ಎರಡು ದಿನ ನೀರು ಪೂರೈಕೆ ಬಂದ್ ! ಕಾರಣವೇನು ಗೊತ್ತಾ?

ಸಚಿವರ ಆಪ್ತ ಸಹಾಯಕ ಮೋಗಣ್ಣರವರು ಚಿಕ್ಕಮಗಳೂರು  ನಗರದ ಪ್ರವಾಸಿ ಮಂದಿರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬ್ಯಾಗ್ ಇಟ್ಟು ತೆರಳಿದ್ದರು. ಈ ನಡುವೆ  ಕಳ್ಳರು ಕೈಚಳಕ ತೋರಿಸಿ ಬ್ಯಾಗ್​ ಕದ್ದು ಎಸ್ಕೇಪ್ ಆಗಿದ್ದಾರೆ. ಕಳ್ಳರು ಯಾರು ಎಂದು ಕಂಡು ಹಿಡಿಯೋಕೆ  ಸಿಸಿ ಕ್ಯಾಮರಾಗಳು  ಕೆಲಸ ಮಾಡುತ್ತಿಲ್ಲ. ಸದ್ಯ ಚಿಕ್ಕಮಗಳೂರು ನಗರ ಪೊಲೀಸರು ಕೇಸ್ ಮಾಡಿದ್ದಾರೆ.