ನರೇಂದ್ರ ಮೋದಿ ಫೋಟೋ ಕೇಸ್ | ‌ ಶಿವಮೊಗ್ಗ ಕೋರ್ಟ್‌ನಲ್ಲಿ ಏನೆಲ್ಲಾ ಆಯ್ತು?

Narendra Modi photo case | What happened in the Shimoga court?

ನರೇಂದ್ರ ಮೋದಿ ಫೋಟೋ ಕೇಸ್ | ‌ ಶಿವಮೊಗ್ಗ ಕೋರ್ಟ್‌ನಲ್ಲಿ ಏನೆಲ್ಲಾ ಆಯ್ತು?
Narendra Modi photo case

Shivamogga Apr 19, 2024  Narendra Modi photo case   ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಫೋಟೋ ಬಳಕೆ ಸಂಬಂಧ ಪಕ್ಷೇತರ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ಶಿವಮೊಗ್ಗ ಕೋರ್ಟ್‌ಗೆ ಕೇವಿಯಟ್‌ ಸಲ್ಲಿಸಿದ್ದಾರೆ. ಇನ್ನೊಂದೆಡೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಸಹ  ಏಪ್ರಿಲ್‌ 15ರಂದು ಶಿವಮೊಗ್ಗ  ಕೋರ್ಟ್‌ನಲ್ಲಿ  interlocutory application ನನ್ನ ಸಲ್ಲಿಸಿತ್ತು . ಇದರ ವಿಚಾರಣೆ ಹದಿನಾರರಂದು ನಡೆದು 18 ನೇ ತಾರೀಖಿಗೆ ಮುಂದೂಡಲ್ಪಟ್ಟಿತ್ತು.

ಈ ನಡುವೆ ಕೇಸ್‌ ನ ಸಂಬಂಧ ಈಶ್ವರಪ್ಪ ರವರ ಪರ ವಕೀಲ ಅಶೋಕ ಜಿ.ಭಟ್ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.  ಬಿಜೆಪಿಯವರು ಸಲ್ಲಿಸಿರುವ ಪಿಟಿಶನನ್ನು ವಜಾಗೊಳಿಸುವಂತೆ ಈ ಮೂಲಕ ಅವರು ಕೋರಿದ್ದಾರೆ. ಅಶೋಕ ಭಟ್ ಅವರ ಅರ್ಜಿಗೆ ಏ‍ಪ್ರಿಲ್ 19ರಂದು ತಕರಾರು ಅರ್ಜಿ ಸಲ್ಲಿಸಲು ಕೋರ್ಟ್‌ ಬಿಜೆಪಿ ಪರ ವಕೀಲರಿಗೆ ಸೂಚಿಸಿದೆ. ಹೀಗಾಗಿ ವಿಚಾರಣೆ ಇಂದು ಮುಂದುವರಿಯಲಿದೆ. 

Please Read | ಕರೆಂಟ್‌ ಕಂಬಕ್ಕೆ ಬೈಕ್‌ ಡಿಕ್ಕಿ | ತೀರ್ಥಹಳ್ಳಿ ನಿವಾಸಿ ಸೇರಿ ಸ್ಥಳದಲ್ಲಿಯೇ ಇಬ್ಬರ ಸಾವು|

  

ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಲು ಅವಕಾಶವಿದೆ. ಬೇರೆಯವರು ಬಳಕೆ ಮಾಡಿದರೆ ಅದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್– 29ರ ಉಲ್ಲಂಘನೆಯಾಗುತ್ತದೆ ಎಂಬುದು ಬಿಜೆಪಿ ವಾದವಾಗಿದೆ.