ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಕುಸಿದು ಬಿದ್ದ ಎಲ್‌ಇಡಿ | ನಾಲ್ವರಿಗೆ ಗಾಯ, ಆಸ್ಪತ್ರೆಗೆ ಸಚಿವ ದೌಡು

led collapses during Geetha Shivarajkumar's nomination procession | Four injured, minister rushed to hospital

ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಕುಸಿದು ಬಿದ್ದ ಎಲ್‌ಇಡಿ | ನಾಲ್ವರಿಗೆ ಗಾಯ, ಆಸ್ಪತ್ರೆಗೆ ಸಚಿವ ದೌಡು
led collapses ,Geetha Shivarajkumar nomination

Shivamogga  Apr 15, 2024  led collapses ,Geetha Shivarajkumar nomination   ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ನಡೆದ ಮೆರವಣಿಗೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಮೆರವಣಿಗೆ ಸಂದರ್ಭದಲ್ಲಿ ಅಳವಡಿಸಿದ್ದ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದ ಪರಿಣಾಮ ನಾಲ್ವರಿಗೆ ಗಾಯಗಳಾಗಿವೆ. 

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಈ ಘಟನೆ ನಡೆದಿದೆ. ಇವತ್ತು ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಡಿಸಿ ಕಚೇರಿಯವರೆಗೂ ಗೀತಾ ಶಿವರಾಜ್‌ ಕುಮಾರ್‌ ನಾಮಪತ್ರ ಸಲ್ಲಿಕೆಯ ಸಂಬಂಧ ಮೆರವಣಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ದೃಶ್ಯ ಪ್ರದರ್ಶಿಸಲು ಎಲ್‌ಇಡಿ ವಾಲ್‌ ಹಾಕಲಾಗಿತ್ತು. 

ಮೆರವಣಿಗೆಯಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ವಿಡಿಯೋ ವಾಲ್‌ ಬಗ್ಗೆ ಹೆಚ್ಚಿನ ಗಮನ ಹರಿದಿರಲಿಲ್ಲ. ಈ ನಡುವೆ ವಿಡಿಯೋ ವಾಲ್‌ ಕುಸಿದುಬಿದ್ದಿದೆ. ಪರಿಣಾಮ ಅದರ ಕೆಳಕ್ಕೆ ನಿಂತಿದ್ದ ಓರ್ವ ಪತ್ರಕರ್ತ ಹಾಗೂ ಮೂವರಿಗೆ ಗಾಯವಾಗಿದೆ. ಈ ಪೈಕಿ ಓರ್ವರ ತಲೆಗೆ ಪೆಟ್ಟುಬಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೂ  ಗಾಯಗೊಂಡವರನ್ನ ಭದ್ರಾವತಿ ತಾಲ್ಲೂಕಿನ ಮಾವಿನಕೆರೆ ಗ್ರಾಮದ ನಾಗರಾಜಪ್ಪ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಆಸ್ಪತ್ರೆಗೆ ಭೇಟಿ ಗಾಯಾಳು ಆರೋಗ್ಯ ವಿಚಾರಿಸಿದ್ರು.