ನಿಮ್ಮ ಬೈಕ್‌ಗಳು ಜಾಗೃತೆ | ಬೈಕ್‌ ಕದ್ದು ಸ್ಪೇರ್‌ ಪಾರ್ಟ್‌ ಮಾರುತ್ತಾರೆ ಎಚ್ಚರ | ಸಿಕ್ಕಿಬಿತ್ತು ಅಂತರ್‌ ಜಿಲ್ಲಾ ಕಳ್ಳರ ತಂಡ

Police in Chikkamagaluru district, Karnataka, have apprehended a gang of three inter-district thieves involved in motorcycle theft

ನಿಮ್ಮ ಬೈಕ್‌ಗಳು ಜಾಗೃತೆ | ಬೈಕ್‌ ಕದ್ದು ಸ್ಪೇರ್‌ ಪಾರ್ಟ್‌ ಮಾರುತ್ತಾರೆ ಎಚ್ಚರ | ಸಿಕ್ಕಿಬಿತ್ತು ಅಂತರ್‌ ಜಿಲ್ಲಾ ಕಳ್ಳರ ತಂಡ

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಹಿಡಿದಿದ್ದು ಅವರಿಂದ ಮೂರು ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 17 ಬೈಕ್'ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ವಿವರ ಹೀಗಿದೆ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾದ ಬೈಕ್‌ ಕಳ್ಳತನ ಪ್ರಕರಣ ಸಂಬಂಧ ವಿಶೇಷ ತಂಡ ರಚನೆ ಮಾಡಲಾಗಿತ್ತು. ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಕಲೈಮಾರ್ ಮತ್ತು ಪಿಎಸ್ಐ ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗಮೂರ್ತಿ, ಮಧಸೂಧನ್, ನಂಜಪ್ಪ,  ಮಧುಕುಮಾರ್, ಪ್ರದೀಪ ಮತ್ತು ನವೀನ  ಅವರ ತಂಡ ಇದೀಗ ಕಳ್ಳರ ಗ್ಯಾಂಗ್‌ನ್ನ ಹಿಡಿದಿದ್ದಾರೆ. 

ಈ ಸಂಬಂಧ ಮೂವರನ್ನ ಬಂಧಿಸಿರುವ ಪೊಲೀಸರು ರೂ. 8.5 ಲಕ್ಷ ಬೆಲೆಯ 17 ಬೈಕ್ ಗಳು, ರೂ. 2.15 ನಗದು ಮತ್ತು ರೂ. 50 ಸಾವಿರ ಮೌಲ್ಯದ ಬೈಕ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಆರೋಪಿಗಳು ಬೈಕ್‌ಗಳನ್ನು ಕದ್ದು ಅದನ್ನ ಗುಜರಿಗೆ ಹಾಕುತ್ತಿದ್ದರು. ವಾಹನಗಳ ಬಿಡಿಭಾಗಗಳನ್ನ ವಿಂಗಡಿಸಿ ಅವುಗಳನ್ನ ಮಾರಲಾಗುತ್ತಿತ್ತು. 

ಇನ್ನೂ ಆರೋಪಿಗಳು ಚಿಕ್ಕಮಗಳೂರು ನಗರದಲ್ಲಿ 22, ಕಡೂರು ಪಟ್ಟಣದಲ್ಲಿ 1, ತರೀಕೆರೆ ಪಟ್ಟಣದಲ್ಲಿ 1, ಶಿವಮೊಗ್ಗ ನಗರದಲ್ಲಿ 2, ಭದ್ರಾವತಿಯಲ್ಲಿ 2 ಹಾಗೂ ದಾವಣಗೆರೆಯಲ್ಲಿ 2 ಬೈಕ್'ಳನ್ನು ಕಳವು ಮಾಡಿದ್ದಾರೆ. ಅವುಗಳಲ್ಲಿ 17 ಬೈಕ್ ಸುಸ್ಥಿತಿಯಲ್ಲಿದೆ  

ಸಾರ್ವಜನಿಕರಿಗೆ ಎಚ್ಚರಿಕೆ

ನಮ್ಮ ಬೈಕ್‌ ಯಾರು ಕದ್ದುಕೊಂಡು ಹೋಗುತ್ತಾರೆ ಎಂಬ ಭಾವ ಕೆಲವರಲ್ಲಿದೆ. ಆದರೆ ಈಗ ಬೈಕ್‌ ಕಳುವು ಕೇವಲ ಸಾವಿರ ರೂಪಾಯಿಗಾಗಿಯು ನಡೆಯುತ್ತಿದೆ. ಒಂದು ಬೈಕ್‌ ಕದ್ದು ಅದನ್ನ ಗುಜರಿಗೆ ಹಾಕಿದಾಗ ಬರುವ ದುಡ್ಡು ಕಳ್ಳರಿಗೆ ಅವತ್ತಿನ ದುಡಿಮೆಯಾಗುತ್ತಿದೆ. ಅಲ್ಲದೆ ಕದ್ದ ಬೈಕ್‌ಗಳನ್ನ ಪಾರ್ಟ್‌ಗಳನ್ನ ಬೇರೆ ಬೇರೆ ಮಾಡಿ, ಅವುಗಳನ್ನ ಸೆಕೆಂಡ್‌ ಹ್ಯಾಂಡ್‌ ಸ್ಪೇರ್‌ ಪಾರ್ಟ್‌ ರೂಪದಲ್ಲಿ ಮಾರುವ ದೊಡ್ಡ ಗ್ಯಾಂಗ್‌ ಶಿವಮೊಗ್ಗದಲ್ಲಿಯು ಇದೆ ಚಿಕ್ಕಮಗಳೂರಿನಲ್ಲಿಯು ಇದೆ. ಆಯ್ದ ಸ್ಥಳಗಳಲ್ಲಿ ನಡೆಯುವ ಈ ದಂಧೆ ಬಗ್ಗೆ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಹಾಗೆಯೆ ಸಾರ್ವಜನಿಕರು ತಮ್ಮ ಬೈಕ್‌ಗಳಿಗೆ ವೀಲ್ಹ್‌ ಲಾಕ್‌ ಬಳಸುವುದು ಉತ್ತಮ, ಹಾಗೆ ವಾಹನಗಳ ಕೀಗಳನ್ನು ಸುಸ್ಥಿತಿಯಲ್ಲಿ ಇಡುವುದು ಒಳ್ಳೆಯ ಮುನ್ನೆಚ್ಚರಿಕಾ ಕ್ರಮವಾಗಿದೆ. 

Police in Chikkamagaluru district, Karnataka, have apprehended a gang of three inter-district thieves involved in motorcycle theft.