ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

Young man who slipped and fell in falls still missing! Another incident happened while searching for Sharath among the rocks! ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS  

ಕೊಲ್ಲೂರು ಘಾಟಿಗೆ ಹೊಂದಿಕೊಂಡಿರುವ ಅರಶಿನ ಗುಂಡಿ ಫಾಲ್ಸ್​ನಲ್ಲಿ ಕಾಲು ಜಾರಿ ಬಿದ್ದ ಭದ್ರಾವತಿ ಯುವಕ ಶರತ್ ಇನ್ನೂ ಕೂಡ ಪತ್ತೆಯಾಗಿಲ್ಲ. ಕಳೆದ ಭಾನುವಾರ ಶರತ್ ಕಾಲು ಜಾರಿ ಜಲಪಾತದಲ್ಲಿ ಬಿದ್ದಿದ್ದರು. ಈ ದೃಶ್ಯ  ಮೊಬೈಲ್ ಕ್ಯಾಮರಾದಲ್ಲಿ ಸೆರಯಾಗಿತ್ತು. ಘಟನೆ ಬೆನ್ನಲ್ಲೆ ಅವರಿಗಾಗಿ ಹುಡುಕಾಟವೂ ಆರಂಭವಾಗಿತ್ತು. ಆದರೆ ವಿಪರೀತ ಮಳೆ ಹಾಗೂ ನೀರಿನ ರಭಸ ಶರತ್​ರವರನ್ನ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ

ಮಳೆಯಲ್ಲಿ ಜಾರುತ್ತೆ ಜಾಗ್ರತೆ! ಜಲಪಾತ ನೋಡಲು ಬಂಡೆ ಹತ್ತಿದ್ದ ಯುವಕ ಸೆಕೆಂಡ್​ನಲ್ಲಿ ಕಣ್ಮರೆ! ನೀರಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆಯ ಯುವಕ!

ಭದ್ರಾವತಿ ಮೂಲದ ಶರತ್ ಕುಮಾರ್  ಕಾಲು ಜಾರಿ ಬಿದ್ದ ವಿಷಯ ತಿಳಿಯುತ್ತಲೆ ಅವರ ಸಂಬಂಧಿಕರು ಫಾಲ್ಸ್ ಬಳಿಗೆ ತೆರಳಿದ್ದಾರೆ. ಅಲ್ಲಿಯೇ ಇದ್ದು ಶರತ್​ ಸಿಗಬಹುದು ಎಂದೇ ಭಾವಿಸಿ ಕಾಯುತ್ತಿದ್ದಾರೆ. ಶರತ್​ರವರ ಪತ್ತೆಗಾಗಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಡೈವಿಂಗ್ ಎಕ್ಸ್​ಪರ್ಟ್​ ಈಶ್ವರ್ ಮಲ್ಪೆ ತಂಡ ಶರತ್​ರಿಗಾಗಿ ಹುಡುಕಾಟ ನಡೆಸ್ತಿದೆ. ಕಲ್ಲುಬಂಡೆಗಳ ಕೊರಕಲಿನ ನಡುವೆ ರಭಸವಾಗಿ ನೀರು ಹರಿಯುತ್ತಿದ್ದು, ಅದರ ನಡುವೆ ಶರತ್​ರ ಹುಡುಕಾಟ ಕಷ್ಟಸಾಧ್ಯವಾಗುತ್ತಿದೆ. ಹಗ್ಗ ಕಟ್ಟಿಕೊಂಡು ಬಂಡೆಗಳ ನಡುವೆ ಸಾಹಸಿಗರು ಶರತ್​ಗಾಗಿ ಹುಡುಕಾಡಿದ್ದಾರೆ. ಪ್ರಯತ್ನ ಕೈಗೂಡುತ್ತಿಲ್ಲ ಇನ್ನೂ ಈಶ್ವರ್ ಮಲ್ಪೆಯವರು ಕೂಡ ಆಯಕಟ್ಟಿನ ಜಾಗದಿಂದ ಮೇಲಕ್ಕೆ ಹುಡುಕುತ್ತಾ ಬರುವಾಗಿ ಕಾಲು ಜಾರಿ ಅವರು ಸಹ ನೀರಿಗೆ ಬಿದ್ದಿದ್ದಾರೆ ಹಾಗಾಗಿ ಅಲ್ಲಿದ್ದವರು ಅವರನ್ನ ಕಾರ್ಯಾಚರಣೆ ಮುಂದುವರಿಸದಂತೆ ತಡೆದಿದ್ದಾರೆ.  

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ! #shivamogga #kolluru #udupi #bhadavati pic.twitter.com/cqO9U3BNBk — malenadutoday.com (@CMalenadutoday) July 25, 2023

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ವಿಚಾರ!? ಶಿಕ್ಷಣ ಇಲಾಖೆ ಹೊರಡಿಸಿರುವ ಸೂಚನೆ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ವಿಪರೀತ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಇವತ್ತು ಸಹ ರಜೆ ನೀಡುವ ಬಗ್ಗೆ ಉಪನಿರ್ದೆಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆಯಿಂದ ಪ್ರಕಟಣೆಯೊಂದನ್ನ ಹೊರಡಿಸಲಾಗಿದೆ. ಪ್ರಕಟಣೆಯಲ್ಲಿ ಶಾಲೆಗಳಿಗೆ ರಜೆ ನೀಡುವ ವಿಚಾರವನ್ನು ಆಯಾ ಶಾಲೆಯ ಎಸ್​ಡಿಎಂಸಿಯ ತೀರ್ಮಾನಕ್ಕೆ ಬಿಡಲಾಗಿದೆ. ಈ ಆದೇಶ ಹೊಸನಗರ , ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕಿಗೆ ಮಾತ್ರ ಅನ್ವಯವಾಗಲಿದೆ. 

ಜಿಲ್ಲಾಧಿಕಾರಿಗಳು  ಉಲ್ಲೇಖಿಸಿದಂತೆ ಪ್ರಕಟಣೆಯನ್ನಹೊರಡಿಸಲಾಗಿದ್ದು, ಪ್ರಕಟಣೆಯ ವಿವರ ಹೀಗಿದೆ.  

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ. ರವರ ಸೂಚನೆಯನ್ವಯ ಮೇಲ್ಕಂಡ ಮೂರು ತಾಲ್ಲೂಕುಗಳ ಶಾಲಾ ಎಸ್‌.ಡಿ.ಎಂ.ಸಿ.ಯವರು ಮಳೆಯ ತೀವ್ರತೆಗೆ ಅನುಸಾರವಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ:25/07/2023 ರಂದು ಅಗತ್ಯವಿರುವ ಪ್ರಾಥಮಿಕ / ಪ್ರೌಢ ಶಾಲೆಗಳಿಗೆ ಮಾತ್ರ ಅನ್ವಯವಾಗುವಂತೆ ರಜೆ ಘೋಷಿಸಲು ಕ್ರಮವಹಿಸುವಂತೆ ಹಾಗೂ ಸದರಿ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಅಗತ್ಯ ಸೂಚನೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

 

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 





ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​