ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?

Bhadravathi murder case! Shimoga police crack mystery in rowdy Mujju murder case What happened?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು  ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS 

ಶಿವವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ಬೊಮ್ಮನಕಟ್ಟೆ, ವಾಸಿ ಮಹ್ಮದ್ ಮುಜಾಹಿದ್ @ ಮುಜು, 34 ವರ್ಷ  ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಪ್ರಕರಣ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಬಂಧಿತ ಆರೋಪಿಗಳ ವಿವರ ನೀಡಿದೆ. 

ದಿನಾಂಕ: 20/07/2023 ರಂದು ರಾತ್ರಿ  ರೌಡಿ ಮುಜ್ಜುವನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಸಂಬಂಧ  ಮೃತನ ಸಹೋದರ ದೂರು ನೀಡಿದ್ದ. ಪ್ರಕರಣ ಸಂಬಂಧ ಐಪಿಸಿ 302 ಕೇಸ್ ದಾಖಲಾಗಿತ್ತು. ಅಲ್ಲದೆ ಆರೋಪಿಗಳ ಪತ್ತೆಗೆ ಭದ್ರಾವತಿ ಪೊಲೀಸರ ತಂಡವನ್ನ ನಿಯೋಜಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. 

ಬಂಧಿತರು

1) ಸಂತೋಷ ಕುಮಾರ್ @ ಗುಂಡ @ ಕರಿಯಾ, 33 ವರ್ಷ, ವಾಸ ಹಿರಿಯೂರು ಭದ್ರಾವತಿ, 

2) ಸುರೇಂದ್ರ @ ಆಟೋ ಸೂರಿ, 36 ವರ್ಷ, ಹೊಸಮನೆ, ಭದ್ರಾವತಿ, 

3) ಮಂಜುನಾಥ @ ಬಿಡಾ, 33 ವರ್ಷ, ಕುವೆಂಪು ನಗರ, ಹೊಸಮನೆ ಭದ್ರಾವತಿ, 

4) ವಿಜಯ್ ಕುಮಾರ್ @ ಪವರ್, 25 ವರ್ಷ, ಭೂತನಗುಡಿ ಭದ್ರಾವತಿ 

5) ವೆಂಕಟೇಶ @ ಲೂಸ್, 23 ವರ್ಷ, ಹಳ್ಳಿಕೆರೆ, ಬಾರಂದೂರು ಭದ್ರಾವತಿ, 

ಕೊಲೆಗೆ ಕಾರಣವೇನು?

ಮೃತ ಮಹ್ಮದ್ ಮುಜಾಹಿದ್ @ ಮುಜ್ಜು  2019ನೇ ಸಾಲಿನಲ್ಲಿ, ರಮೇಶ ಎಂಬುವರನ್ನು ಕೊಲೆಮಾಡಿ ಮೇಲ್ಕಂಡ ಆರೋಪಿತರಾದ ಸಂತೋಷ್ ಮತ್ತು ಸುರೇಂದ್ರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದೇ  ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಮಹ್ಮದ್ ಮುಜಾಹಿದ್ @ ಮುಜ್ಜು ಈತನನ್ನು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.  


ಮಳೆಯಲ್ಲಿ ಜಾರುತ್ತೆ ಜಾಗ್ರತೆ! ಜಲಪಾತ ನೋಡಲು ಬಂಡೆ ಹತ್ತಿದ್ದ ಯುವಕ ಸೆಕೆಂಡ್​ನಲ್ಲಿ ಕಣ್ಮರೆ! ನೀರಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆಯ ಯುವಕ!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಯುವಕನೊಬ್ಬ ಜಲಪಾತ ವೀಕ್ಷಣೆ ಸಂದರ್ಭದಲ್ಲಿ ಕಾಲುಜಾರಿ ಬಿದ್ದು,  ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ಧಾನೆ. 

ಏಲ್ಲಿ ನಡೆದಿದ್ದು ಘಟನೆ

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಈ ಘಟನೆ ಸಂಭವಿಸಿದೆ. ಈ ದೃಶ್ಯ ಯುವಕನ ಜೊತೆಗೆ ಬಂದಿದ್ದ ಇನ್ನೊಬ್ಬ ಯುವಕನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಹೇಗಾಯ್ತು ಘಟನೆ

ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದ ಯುವಕನೊಬ್ಬ ಕಾಲುಜಾರಿ ಕೆಳಕ್ಕೆ ಬಿದ್ದಿದ್ಧಾನೆ. ಕೆಲವೇ ಸೆಕೆಂಡ್​ಗಳಲ್ಲಿ ಆತ ಎಲ್ಲಿ ಕೊಚ್ಚಿಕೊಂಡು ಹೋದ ಎಂಬುದು ಸಹ ಅರಿವಿಗೆ ಬರಲಿಲ್ಲ.  ಭದ್ರಾವತಿ ಮೂಲದ ಶರತ್ ಕುಮಾರ್ (23) ಕೊಚ್ಚಿಹೋಗಿರುವ ಯುವಕ. ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದರು. 

ಅರಣ್ಯ ಇಲಾಖೆಯಲ್ಲಿ ಇಲ್ಲಿ ಟ್ರಕ್ಕಿಂಗ್​ಗೆ ಅವಕಾಶ ನೀಡಿಲ್ಲ. ಇದರ ನಡುವೆ ಗುರುರಾಜ್ ಹಾಗೂ ಶರತ್ ಎಂಬವರು ಜಲಪಾತದ ಸಮೀಪಕ್ಕೆ ತೆರಳಿದ್ದಾರೆ. ಮಳೆ ಹಿನ್ನೆಲೆಯಲ್ಲಿ ವಿಪರೀತ ಜಾರುತ್ತಿರುವ ಬಂಡೆಯ ಮೇಲೆ ಶರತ್ ನಿಂತಿದ್ದಾಗ ಅವರ ಕಾಲುಜಾರಿದೆ. ತಕ್ಷಣವೇ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆನಂತರ ಅವರ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ನಿನ್ನೆ ಅಂದರೆ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ಇನ್ನೂ ಡೈವಿಂಗ್​ ಎಕ್ಸ್​ಪರ್ಟ್ ಈಶ್ವರ್​ ಮಲ್ಪೆಯವರ ಟೀಂ ಶರತ್​ರವರಿಗಾಗಿ ಹುಡುಕಾಟ ನಡೆಸ್ತಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೊಕ್ಕಾಂ ಹೂಡಿದ್ಧಾರೆ. 


ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಅಧಿಕಾರಿ! ಲೋಕಾಯುಕ್ತ ಶಾಕ್!

ಶಿವಮೊಗ್ಗದಲ್ಲಿ  ಮತ್ತೆ ಲೋಕಾಯುಕ್ತ ಪೊಲೀಸರು (Lokayukta Police)ಅಧಿಕಾರಿಯೊಬ್ಬರಿಗೆ ಶಾಕ್ ಕೊಟ್ಟಿದ್ದಾರೆ. ಒಂದೂವರೆ ಲಕ್ಷ ರೂ. ಹಣ ಸ್ವೀಕರಿಸುವಾಗ ಶಿರಸ್ತೇದಾರ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಕ್ಕು ದಾಖಲೆ ಶಾಖೆ ಶಿರಸ್ತೇದಾರ್ ಅರುಣ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಶಿವಮೊಗ್ಗ ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಿರಸ್ತೇದಾರ್ ಕಚೇರಿಯಲ್ಲಿ ದಾಳಿಯಾಗಿದೆ. ಲೋಕಾಯುಕ್ತ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ. 

ಹನುಮಂತ ಬನ್ನಿಕೋಡ್ ಎಂಬುವವರಿಗೆ  ಖಾತೆ ಬದಲಾವಣೆಗಾಗಿ  ಶಿರಸ್ತೇದಾರ್ ಜಿ.ಅರುಣ್ ಕುಮಾರ್ 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು. ಟ್ರ್ಯಾಪ್ ಪ್ಲಾನ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಇವತ್ತು  1.5 ಲಕ್ಷ ರೂ. ಹಣ ವನ್ನು ಸ್ವೀಕರಿಸುತ್ತಿದ್ದಾಗ, ಅರುಣ್​ ಕುಮಾರ್​ರವರ ಮೇಲೆ ರೇಡ್ ಮಾಡಿದ್ದಾರೆ.  

 

ಶಿರಸ್ತೇದಾರ್ ಜಿ.ಅರುಣ್ ಕುಮಾರ್ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ. 

ಲೋಕಾಯುಕ್ತ ಚಿತ್ರದುರ್ಗ ಎಸ್ಪಿ ವಾಸುದೇವ್, ಶಿವಮೊಗ್ಗ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕಚೇರಿಯಲ್ಲಿ ತನಿಖೆ ಮುಂದುವರೆದಿದೆ.

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​