ದಾವಣಗೆರೆಯಿಂದ ಬಂದ ಮನೆ ಮುಂದೆ ಬೈಕ್​ ನಿಲ್ಲಿಸಿ ಮಲಗಿದ್ದವನಿಗೆ ಕಾದಿತ್ತು ಶಾಕ್! ಮದ್ಯರಾತ್ರಿ ನಡೀತು ಘಟನೆ!

The incident in which the bike parked in front of the house was set on fire took place within the jurisdiction of Hosamana Shivaji Circle Police Station ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ ಹಚ್ಚಿರುವ ಘಟನೆ ಹೊಸಮನ ಶಿವಾಜಿ ಸರ್ಕಲ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ

ದಾವಣಗೆರೆಯಿಂದ ಬಂದ ಮನೆ ಮುಂದೆ ಬೈಕ್​ ನಿಲ್ಲಿಸಿ ಮಲಗಿದ್ದವನಿಗೆ ಕಾದಿತ್ತು ಶಾಕ್! ಮದ್ಯರಾತ್ರಿ ನಡೀತು ಘಟನೆ!

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA |  ಮನುಷ್ಯನೊಬ್ಬ ಯಾವ ಪ್ರಾಣಿಯ ಕಾಟವನ್ನಾದರು ಸಹಿಸಿಕೊಳ್ಳುತ್ತಾನೆ. ಅದರಿಂದ ಪಾರಾಗಿ ಹೊರಕ್ಕೆ ಬರುತ್ತಾನೆ. ಆದರೆ ಮನುಷ್ಯರಿಂದಲೇ ಆಗುವ ತೊಂದರೆಯಿಂದ ಹೊರಕ್ಕೆ ಬರಲಾರ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. READ : ಶಿವಮೊಗ್ಗ ಲೋಕಸಭಾ ಚುನಾವಣೆ | ಬೇಳೂರು ಗೋಪಾಲಕೃಷ್ಣ ಬಳಿಕ ನಾನು ಸಹ ಆಕಾಂಕ್ಷಿ ಎಂದ ಮತ್ತೊಬ್ಬ ಮುಖಂಡ

ದೂರುದಾರರು, ದಾವಣಗೆರೆಯಿಂದ ತಮ್ಮ ಕೆಲಸ ಮುಗಿಸಿಕೊಂಡು ಬಂದು, ಮನೆ ಹತ್ತಿರ ತಮ್ಮ ಬೈಕ್ ನಿಲ್ಲಿಸಿದ್ದರು. ಮಧ್ಯರಾತ್ರಿಯವರೆಗೂ ಬೈಕ್​ ಇದ್ದಲ್ಲಿಯೇ ಇರುವುದನ್ನ ಗಮನಿಸಿದ್ದಾರೆ. ಆದರೆ ಆನಂತರ ಬೈಕ್​ಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಬಿದ್ದಿದೆ. ಈ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಹೋಗಿ ನೋಡಿದರೆ ಬೈಕ್ ಸುಟ್ಟು ಕರಲಾಗಿತ್ತು. 

ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಬೈಕ್​ಗೆ ಬೆಂಕಿ ಬೀಳಲು ಸಾಧ್ಯವಿಲ್ಲ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವೆಸಗಿದ್ದಾರೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬೈಕ್​ಗೆ ಬೆಂಕಿ ಇಟ್ಟ ಹಿಂದಿನ ದ್ವೇಷಕಾರರನ್ನು ಹುಡುಕಾಡುತ್ತಿದ್ದಾರೆ.