KARNATAKA NEWS/ ONLINE / Malenadu today/ Jul 24, 2023 SHIVAMOGGA NEWS
ಶಿವಮೊಗ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬಿಸಿಲ ಝಳವೇ ಕಾಣದಂತೆ ಮೋಡಗಳು ಛಿರಿಛಿರಿ ಮಳೆ ಸುರಿಸುತ್ತಿವೆ. ಇನ್ನೂ ಮಳೆಯಿಂದಾಗಿ ಶರಾವತಿ, ಮಾಲತಿ, ತುಂಗಾ, ಭದ್ರಾ , ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನೂ ಲಿಂಗನಮಕ್ಕಿ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ವರ್ಷಧಾರೆಯಿಂದ, 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 5 ಅಡಿ ನೀರು ಹರಿದುಬಂದಿದೆ. ಇವತ್ತು ಬೆಳಗ್ಗೆ ಲಭ್ಯವಾಗಿರುವ ಅಂಕಿಅಂಶಗಳ ಮಾಹಿತಿ ಪ್ರಕಾರ, ಡ್ಯಾಂಗೆ 73,505 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1775.15 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1797.95 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಒಂದೇ ದಿನ ಡ್ಯಾಂನಲ್ಲಿ 4 ಅಡಿ ನೀರು ಸಂಗ್ರಹವಾಗಿದೆ. ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 39,349 ಕ್ಯೂಸೆಕ್ ಇದೆ. ಪ್ರಸ್ತುತ ಡ್ಯಾಂನಲ್ಲಿ 149.6 (ಗರಿಷ್ಠ ಮಟ್ಟ : 186) ಅಡಿ ನೀರಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ.
ಹೆಚ್ಚಿದ ಹೊರ ಹರಿವು: ತುಂಗಾ ಡ್ಯಾಂ ಒಳಹರಿವಿನಲ್ಲಿಯೂ ನಿರಂತರವಾಗಿ ಏರಿಕೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ ತುಂಗಾ ಡ್ಯಾಂನ ಒಳಹರಿವು 57,352 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಹೊರ ಬಿಡಲಾಗುತ್ತಿದೆ.
ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?
ಶಿವವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬೊಮ್ಮನಕಟ್ಟೆ, ವಾಸಿ ಮಹ್ಮದ್ ಮುಜಾಹಿದ್ @ ಮುಜು, 34 ವರ್ಷ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಪ್ರಕರಣ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಬಂಧಿತ ಆರೋಪಿಗಳ ವಿವರ ನೀಡಿದೆ. ದಿನಾಂಕ: 20/07/2023 ರಂದು ರಾತ್ರಿ ರೌಡಿ ಮುಜ್ಜುವನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಸಂಬಂಧ ಮೃತನ ಸಹೋದರ ದೂರು ನೀಡಿದ್ದ. ಪ್ರಕರಣ ಸಂಬಂಧ ಐಪಿಸಿ 302 ಕೇಸ್ ದಾಖಲಾಗಿತ್ತು. ಅಲ್ಲದೆ ಆರೋಪಿಗಳ ಪತ್ತೆಗೆ ಭದ್ರಾವತಿ ಪೊಲೀಸರ ತಂಡವನ್ನ ನಿಯೋಜಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರು
1) ಸಂತೋಷ ಕುಮಾರ್ @ ಗುಂಡ @ ಕರಿಯಾ, 33 ವರ್ಷ, ವಾಸ ಹಿರಿಯೂರು ಭದ್ರಾವತಿ,
2) ಸುರೇಂದ್ರ @ ಆಟೋ ಸೂರಿ, 36 ವರ್ಷ, ಹೊಸಮನೆ, ಭದ್ರಾವತಿ,
3) ಮಂಜುನಾಥ @ ಬಿಡಾ, 33 ವರ್ಷ, ಕುವೆಂಪು ನಗರ, ಹೊಸಮನೆ ಭದ್ರಾವತಿ,
4) ವಿಜಯ್ ಕುಮಾರ್ @ ಪವರ್, 25 ವರ್ಷ, ಭೂತನಗುಡಿ ಭದ್ರಾವತಿ
5) ವೆಂಕಟೇಶ @ ಲೂಸ್, 23 ವರ್ಷ, ಹಳ್ಳಿಕೆರೆ, ಬಾರಂದೂರು ಭದ್ರಾವತಿ,
ಕೊಲೆಗೆ ಕಾರಣವೇನು?
ಮೃತ ಮಹ್ಮದ್ ಮುಜಾಹಿದ್ @ ಮುಜ್ಜು 2019ನೇ ಸಾಲಿನಲ್ಲಿ, ರಮೇಶ ಎಂಬುವರನ್ನು ಕೊಲೆಮಾಡಿ ಮೇಲ್ಕಂಡ ಆರೋಪಿತರಾದ ಸಂತೋಷ್ ಮತ್ತು ಸುರೇಂದ್ರ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಮಹ್ಮದ್ ಮುಜಾಹಿದ್ @ ಮುಜ್ಜು ಈತನನ್ನು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್ನಲ್ಲಿ ಕೋರ್ಟ್ ತೀರ್ಪು!
ಮಾಜಿ ಸಿಎಂ ಬಿಎಸ್ವೈ ಇನ್ಮುಂದೆ ಡಾ.ಬಿಎಸ್ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR
ಮಗ ಬೈಕ್ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?
ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!