ಎನ್​ಕೌಂಟರ್​ನಲ್ಲಿ ಸತ್ತವರು ಜೀವಂತವಾಗಿ ಸಿಕ್ತಿದ್ದಾರೆ! ಇಲ್ಲಿದೆ ರೋಚಕ ಕಹಾನಿ! JP ಬರೆಯುತ್ತಾರೆ

Those killed in the encounter are still alive! Here's the exciting Kahaani! JP writes Naxal Suresh trapped in Kerala's Kannur

ಎನ್​ಕೌಂಟರ್​ನಲ್ಲಿ ಸತ್ತವರು ಜೀವಂತವಾಗಿ ಸಿಕ್ತಿದ್ದಾರೆ! ಇಲ್ಲಿದೆ ರೋಚಕ ಕಹಾನಿ!  JP ಬರೆಯುತ್ತಾರೆ
Suresh trapped in Kerala's Kannur

Shivamogga Feb 19, 2024 Suresh trapped in Kerala's Kannur  ಕರ್ನಾಟಕದಲ್ಲಿ ಒಂದು ಸಮಯದಲ್ಲಿ ಆಕ್ಟೀವ್ ಆಗಿದ್ದ ನಕ್ಸಲ್​​​ಗಳು ಇದೀಗ ಕೇರಳದಲ್ಲಿ ಒಬ್ಬೊಬ್ಬರಾಗಿಯೇ ಸೆರೆಯಾಗುತ್ತಿದ್ದಾರೆ. ಅವರದ್ದೇ ಆದ ಕಾರಣ, ವಯಸ್ಸು ಹಾಗೂ ಅನಾರೋಗ್ಯ ಮತ್ತು ಪ್ರಕೃತಿಯ ಅಸಹಕಾರಗಳಿಂದ ಮತ್ತು ಕೇರಳದ ಥಂಡರ್​ ಬೋಲ್ಟ್​ನ ಕ್ಷಿಪ್ರ ಆ್ಯಕ್ಷನ್​ನಿಂದಾಗಿ ಒಬ್ಬೊಬ್ಬರೇ ಸಿಕ್ಕಿಬೀಳುತ್ತಿದ್ದಾರೆ. 

karnataka naxal

ಸತ್ತವರು ಬದುಕಿ ಬರುತ್ತಿದ್ದಾರೆ 

 

ಇದರ ನಡುವೆ ವಿಶೇಷ ಅಂದರೆ, ಸತ್ತೆ ಹೋಗಿದ್ದಾರೆ ಎಂದುಕೊಂಡವರು ಜೀವಂತವಾಗಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಹೌದು ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಹೊಸಗದ್ದೆ ಪ್ರಭಾ ವರ್ಷದ ಹಿಂದೆ ಪೊಲೀಸರ ಎದುರು ಶರಣಾಗಿದ್ದಳು. ಆಕೆಯ ಆರೋಗ್ಯ ಬಹುವಾಗಿ ಕ್ಷೀಣಿಸಿದ್ದ ಸ್ಥಿತಿಯಲ್ಲಿ ಅವಳು ಶರಣಾಗಿದ್ದಳು. ಇದರ ನಡುವೆ ಮುಂಡಗಾರು ಲತಾ ಎನ್​ಕೌಂಟರ್​ಗೆ ಬಲಿಯಾಗಿದ್ದಾಳೆ ಎನ್ನಲಾಗಿತ್ತು. ಆದರೆ ಅವಳು ಸಹ ಜೀವಂತವಾಗಿದ್ದಾಳೆ ಎಂಬ ಮಾಹಿತಿ  ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. 

karnataka naxal

2019 ಅಕ್ಟೋಬರ್​ ಎನ್​ಕೌಂಟರ್​

 

ಇದರ ಬೆನ್ನಲ್ಲೆ ಕೇರಳದಿಂದ ಮತ್ತೊಂದು ಮಲೆನಾಡು ಸುದ್ದಿ ಹೊರಬಿದ್ದಿದೆ. ಆ ಸುದ್ದಿ ಅಂಗಡಿ ಸುರೇಶನದ್ದು. ನಂಬಿಕೆ ನಿಮಗೆ ಬಿಟ್ಟಿದ್ದು 2019 ಅಕ್ಟೋಬರ್ 30 ರಂದು ನಾಲ್ವರು ನಕ್ಸಲ್​ರ ಎನ್​ಕೌಂಟರ್​ ಸುದ್ದಿ ಕೇರಳದ  ಆನ್ಮನೋರಮಾ‘  ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ದೊಡ್ಡಮಟ್ಟದ ಸುದ್ದಿಯಾಗಿದ್ದ ಅಂದಿನ 2 ದಿನದ ಕಾರ್ಯಾಚರಣೆ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಇದು ಒತ್ತಟ್ಟಿಗಿರಲಿ, ಇದೀಗ ಅಂದು ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾದ ವ್ಯಕ್ತಿ ಜೀವಂತವಾಗಿ ಸಿಕ್ಕಿಬಿದ್ದಿದ್ದಾನೆ. ಅದು ಸಹ ಅಹಾಯಕ ಸ್ಥಿತಿಯಲ್ಲಿ 

ಸುರೇಶ್ ಅಲಿಯಾಸ್ ಅಂಗಡಿ ಸುರೇಶ್ 

 

2003 ರಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೋಸ್ಟ್ ವಾಂಟೆಂಡ್ ನಕ್ಸಲ್ ಅಂಗಡಿ ಸುರೇಶ್ಅಂಗಡಿ ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. 2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸುರೇಶ್ 21 ವರ್ಷಗಳಿಂದ ನಾಪತ್ತೆಯಾಗಿದ್ದ. 

karnataka naxal

 

ಕರ್ನಾಟಕ-ಕೇರಳ- ತಮಿಳುನಾಡು ಪೊಲೀಸರು ಈ ಮೋಸ್ಟ್ ವಾಂಟೆಡ್ ನಕ್ಸಲ್ ಗಾಗಿ ಹುಡುಕಾಡುತ್ತಿದ್ದರು. ಆದರೆ, 21 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಅಂಗಡಿ ಸುರೇಶ್ ಮೂಲ ಹೆಸರು ಪ್ರದೀಪ್. ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಬಳಿಕ ಹೆಸರು ಬದಲಿಸಿಕೊಂಡು ಸುರೇಶ್ ಎಂದು ಬದಲಿಸಿಕೊಂಡಿದ್ದನು ಎಂದು ತಿಳಿದುಬಂದಿದೆ. ಸುರೇಶ್ ಅಲಿಯಾಸ್ ಪ್ರದೀಪ್ ಕರ್ನಾಟಕ ಕೇಡರ್ ನಕ್ಸಲ್ ಆಗಿ ಗುರುತಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ಈತನ ಮೇಲೆ ಕರ್ನಾಟಕದಲ್ಲಿ ಒಟ್ಟು 26ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 

karnataka naxal

ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಸುರೇಶ

 

ಈತನನ್ನ ಕೊಂದೇ ಹಾಕಿದ್ದೇವೆ ಎಂದು ಕೇರಳ ಪೊಲೀಸರು ನಂಬಿದ್ದರು. ಆದರೆ ಇವರ ನಂಬಿಕೆ ಸುಳ್ಳಾಗಿದೆ. ಮೊನ್ನೆ ಮೊನ್ನೆ ಈತ ಸಿಕ್ಕಿಬಿದ್ದಿದ್ದಾನೆ. ಏಳಲು ಆಗದ ಸ್ಥಿತಿಯಲ್ಲಿ ಕಾಲಿಗೆ ಮರದ ಪಟ್ಟು ಕಟ್ಟಿಕೊಂಡು ಹಣ್ಣುಗೂದಲಿನ ರೂಪದಲ್ಲಿ ಪೊಲೀಸರ ಸೆರೆಯಾಗಿದ್ದಾನೆ. ಪೊಲೀಸರೇ ಈತನನ್ನ ಜೋಲಿ ಮಾಡಿಕೊಂಡ ಕರೆದೊಯ್ದಿದ್ದಾರೆ. ಇನ್ನೊಂದು ವಾದದ ಪ್ರಕಾರ, ಸ್ಥಳೀಯರು ಈತನ ಅವಸ್ಥೆ ನೋಡಿ ವಿಚಾರಿಸಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ

karnataka naxal

ಕಾಡಾನೆ ದಾಳಿಯಲ್ಲಿ ಸಿಕ್ಕಿಬಿದ್ದ ಸುರೇಶ

 

ಇಷ್ಟಕ್ಕೂ ನಡೆದಿದ್ದು ಏನು ಅಂದರೆ ಕಾಡಿನಲ್ಲಿ ಟೆಂಟ್​ ಹಾಕಿಕೊಂಡಿದ್ದ ನಕ್ಸಲ್​ ಕ್ಯಾಂಪ್ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿವೆ. ಈ ವೇಳೆ ಸುರೇಶ್​ ಕಾಲಿಗೆ ಗಂಭೀರ ಗಾಯವಾಗಿದೆ. ಉಳಿದವರು ಅಲ್ಲಿಂದ ಎಸ್ಕೇಪ್ ಆಗಿದ್ದರು. ಏಕೆಂದರೆ ಅದಾಗಲೇ ಆ ಪ್ರದೇಶದಲ್ಲಿ ಕೇರಳ ಪೊಲೀಸರು ಕೂಂಬಿಂಗ್ ನಡೆಸ್ತಿದ್ದರು. ಏಕಾಂಗಿಯಾಗಿ ಉಳಿದಿದ್ದ ಸುರೇಶ್​ನಲ್ಲಿ ಸ್ಥಳೀಯ ಅರಣ್ಯ ವಾಸಿಗಳು ಗಮನಿಸಿ ಉಪಚರಿಸಿದ್ದಾರೆ. ಆ ಬಳಿಕ ಅವರನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ದೃಶ್ಯವು ಸಹ ಹೊರಬಿದ್ದಿದ್ದು, ಅದರಲ್ಲಿ ಕ್ಯಾಮರಾದ ಹಿಂದಿರುವ ಧ್ವನಿಯ ಯಾರು ನೀನು ನಿನ್ನ ಹೆಸರು ಏನು ಎಂದು ಕೇಳುತ್ತದೆ. ಅದಕ್ಕೆ ಆತ ಸುರೇಶ್ ಎನ್ನುತ್ತಾರೆ. ತಕ್ಷಣವೇ ಅಜ್ಞಾತ ಧ್ವನಿ ಸುರೇಶ್ ಚಿಕ್ಕಮಗಳೂರು ಎನ್ನುತ್ತದೆ. ಸುರೇಶ್ ಹೌದು ಎನ್ನುತ್ತಾನೆ.

karnataka naxal 


ಇಷ್ಟಾದ ಬಳಿಕ ಸುರೇಶ್​ನನ್ನ ಜೋಲಿ ಮಾಡಿ ಆತನನ್ನ ಅರಣ್ಯದಿಂದ ಹೊತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಸದ್ಯ ಆತ ಕಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ.ಇನ್ನೂಈತನವಿರುದ್ದ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.  5 ಲಕ್ಷ ರು. ಬಹುಮಾನ ಕೂಡ ಘೋಷಿಸಲಾಗಿತ್ತು. 

karnataka naxal