ಸೀದಾ ಸೀದಾ ಬಂದ ಕಾರು, ಡಿಕ್ಕಿ ಹೊಡೆದ ರಭಸಕ್ಕೆ ಕರೆಂಟ್‌ ಕಂಬವೇ ಪೀಸ್..ಪೀಸ್‌ | ಸಿಸಿ ಕ್ಯಾಮರಾದಲ್ಲಿ ನೋಡಿ ದೃಶ್ಯ

car accident in Hosanagar taluk, Shivamogga district, was caught on CCTV. The Maruti car, traveling towards Konanduru,

ಸೀದಾ ಸೀದಾ ಬಂದ ಕಾರು, ಡಿಕ್ಕಿ ಹೊಡೆದ ರಭಸಕ್ಕೆ  ಕರೆಂಟ್‌ ಕಂಬವೇ ಪೀಸ್..ಪೀಸ್‌ | ಸಿಸಿ ಕ್ಯಾಮರಾದಲ್ಲಿ  ನೋಡಿ  ದೃಶ್ಯ
Hosanagar taluk, Shivamogga district, Konanduru

SHIVAMOGGA | MALENADUTODAY NEWS | Jun 24, 2024  ಮಲೆನಾಡು ಟುಡೆ

ಭೀಕರವಾಗಿ ಸಂಭವಿಸಿದ ಅಪಘಾತದ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ನಡೆದ ಘಟನೆ ಇದಾಗಿದ್ದು, ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವುಂಟಾಗಿಲ್ಲ

ಇಲ್ಲಿನ ಗರ್ತಿಕೆರೆಯಲ್ಲಿ ನಡೆದ ದೃಶ್ಯ ಸ್ಥಳೀಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಾಣುವಂತೆ ಕೋಣಂದೂರು ಕಡೆಗೆ ಹೋಗುತ್ತಿದ್ದ ಮಾರುತಿ ಕಾರು ರಸ್ತೆಯ ಎಡಭಾಗದಿಂದ ಟರ್ನ್‌ ಆಗಿ ನೇರವಾಗಿ ಬಲಕ್ಕೆ ಬಂದು ರಸ್ತೆಯಿಂದ ಇಳಿದಿದೆ. ಆ ಬಳಿಕ ಮತ್ತೆ ಎಡಭಾಗಕ್ಕೆ ತಿರುಗಿದ ಕಾರು, ಸ್ವಲ್ಪ ಮುಂದೆ ಬಂದು ಬಲಕ್ಕೆ ಪೂರ್ಣಪ್ರಮಾಣದಲ್ಲಿ ತಿರುಗಿ ಅಲ್ಲಿಯೇ ಇದ್ದ ಬೋರ್ಡ್‌ವೊಂದಕ್ಕೆ ಡಿಕ್ಕಿ ಹೊಡೆದು ನೇರವಾಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಕಂಬ ಎರಡು ಪೀಸಾಗಿ ಅಲ್ಲಿಯೇ ಉರುಳಿಬಿದ್ದಿದೆ. ಕಂಬದ ಬುಡವೂ ಸಹ ತುಂಡಾಗಿದೆ. ಅದೃಷ್ಟಕ್ಕೆ ಕಾರಿನಲ್ಲಿದ್ದವರಿಗೆ ಏನಾಗಿಲ್ಲ. ಇನ್ನೂ ಕಾರು ಡಿಕ್ಕಿ ಹೊಡೆಯುವ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಗಾಬರಿಗೊಂಡರೆ, ಪ್ರಾಣಿಯೊಂದು ಕೂಗುತ್ತಾ ಅಲ್ಲಿಂದ ಓಡಿದೆ. ಇನ್ನೂ ಈ ಕಾರಿನ ಹಿಂದೆ ಬರುತ್ತಿದ್ದ ಇನ್ನೊಂದು ಕಾರಿನವರು ಅಪಾಯ ಸೂಚನೆ ಕಂಡು ವಾಹನವನ್ನು ಸ್ಲೋ ಮಾಡಿದ್ದಾರೆ.ಇನ್ನೂ ವಾಹನದಲ್ಲಿ ಮಹಿಳೆಯೊಬ್ಬರು ಡ್ರೈವ್ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಈ ಸಂಬಂಧ ವಿಚಾರಿಸಲಾಗುತ್ತಿದೆ. 

A car accident in Hosanagar taluk, Shivamogga district, was caught on CCTV. The Maruti car, traveling towards Konanduru, crashed into an electric pole,  Luckily, no one was injured,