ಅಬ್ಬಿಪಾಲ್ಸ್ ದುರಂತ | ಬಳ್ಳಾರಿಯ ವಿನೋದ್ ಮೃತದೇಹ ಪತ್ತೆ | ನಡೆದಿದ್ದೇನು?
body of Vinod, a 26-year-old from Ballari who slipped and fell to his death at Yeduru Abbi Falls, has been found.

SHIVAMOGGA | MALENADUTODAY NEWS | Jun 24, 2024 ಮಲೆನಾಡು ಟುಡೆ
ಯಡೂರು ಅಬ್ಬಿಪಾಲ್ಸ್‌ನಲ್ಲಿ ಕಾಲುಜಾರಿ ಸಾವನ್ನಪ್ಪಿದ್ದ ಬಳ್ಳಾರಿಯ ವಿನೋದ್‌ರವರ ಮೃತದೇಹ ಪತ್ತೆಯಾಗಿದೆ. ಮಳೆ,ಗಾಳಿ ಹಾಗೂ ನೀರಿನ ರಭಸ ನಡುವೆ 26 ವರ್ಷದ ವಿನೋದ್‌ರ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಸ್ಥಳೀಯರು , ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವತ್ತು ಅವರ ಮೃತದೇಹ ಪತ್ತೆಯಾಗಿದೆ.
ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಪಾಲ್ಸ್ ನೋಡಲು ಬೆಂಗಳೂರಿನ 12 ಮಂದಿ ಸಾಪ್ಟ್‌ವೇರ್ ಉದ್ಯೋಗಿಗಳು ಬಂದಿದ್ದರು. ಈ ವೇಳೆ ವಿನೋದ್ ಬಂಡೆಯೊಂದರ ಮೇಲೆ ನಿಂತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ನೀರಲ್ಲಿ ಕೊಚ್ಚಿ ಹೋಗಿದ್ದ ಅವರ ಮೃತದೇಹ ಸುಮಾರು 20 ಗಂಟೆಗಳ ಕಾರ್ಯಾಚರಣೆ ಬಳಿಕ ಲಭ್ಯವಾಗಿದೆ.
The body of Vinod, a 26-year-old from Ballari who slipped and fell to his death at Yeduru Abbi Falls, has been found.