ಪಾಲಿಕೆ ಖಾಲಿ ಜಾಗಕ್ಕೆ ರಾತೋರಾತ್ರಿ ತಂತಿ ಬೇಲಿ | ಗೋಪಾಳದ ಕೋಟಿ ಜಾಗ ಕಬಳಿಕೆ ವಿರುದ್ಧ ಸ್ಟ್ರೈಕ್‌

Residents of Gopalagowda Extension in Shivamogga recently protested against the alleged encroachment of public land by influential individuals.  

ಪಾಲಿಕೆ ಖಾಲಿ ಜಾಗಕ್ಕೆ ರಾತೋರಾತ್ರಿ ತಂತಿ ಬೇಲಿ | ಗೋಪಾಳದ ಕೋಟಿ ಜಾಗ ಕಬಳಿಕೆ ವಿರುದ್ಧ ಸ್ಟ್ರೈಕ್‌

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಇತ್ತೀಚೆಗೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಖಾಲಿ ನಿವೇಶನಕ್ಕೆ ರಾತೋರಾತ್ರಿ ಬೇಲಿ ಬಿದ್ದಿತ್ತು. ಅದು ಕೊಟ್ಯಾಂತರ ಮೌಲ್ಯದ ಜಾಗವಾಗಿದ್ದು ಆ ಜಾಗಕ್ಕೆ ಬೇಲಿ ಹಾಕಿದವರು ಯಾರು ಎಂಬುದೇ ಶಿವಮೊಗ್ಗದಲ್ಲಿ ನಿಗೂಢವಾದ ವಿಚಾರವಾಗಿ ಪರಿಣಮಿಸಿದೆ. ಅಲ್ಲದೆ  ಗೋಪಾಲಗೌಡ ಬಡಾವಣೆಯಲ್ಲಿ ಮಹಾನಗರ ಪಾಲಿಕೆಗೆ ಸೇರಿದ ನಿವೇಶನಗಳನ್ನು ಪ್ರಭಾವಿಗಳು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ಗೋಪಾಳಗೌಡ ಬಡಾವಣೆ  ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವರು ನಿನ್ನೆ ಪ್ರತಿಭಟನೆಯನ್ನ ನಡೆಸಿದ್ದಾರೆ. 

ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಖಾಲಿ ನಿವೇಶನಗಳಿವೆ. ಆ ಜಾಗಕ್ಕೆ ಕೆಲವರು ರಾತೋರಾತ್ರಿ ತಂತಿ ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದಿಢೀರ್‌ ಅಂತಾ ಹಾಕಲಾದ ಬೇಲಿಯ ಬಗ್ಗೆ ಸಾಕಷ್ಟು ಊಹಾಫೋಹಗಳಿವೆ. ಅದರ ನಡುವೆ ಇದೀಗ  ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪಾಲಿಕೆಯ ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕ್ ಅಥವಾ ಕ್ರೀಡಾಂಗಣ ನಿರ್ಮಿಸಬೇಕು ಗೋಪಾಳ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿದೆ. 

Residents of Gopalagowda Extension in Shivamogga recently protested against the alleged encroachment of public land by influential individuals.