KARNATAKA NEWS/ ONLINE / Malenadu today/ Nov 4, 2023 SHIVAMOGGA NEWS
SHIVAMOGGA | ಆನ್ಲೈನ್ನಲ್ಲಿ ಕಳ್ಳರು ಹೇಗೆಲ್ಲಾ ಮೋಸ ಮಾಡುತ್ತಾರೆ. ಅವರು ಆಯ್ದುಕೊಳ್ಳುವ ದಾರಿಗಳು ಮತ್ತು ತೋರುವ ಜಾಣತನಗಳಿಗೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದ್ದು, ವ್ಯಕ್ತಿಯೊಬ್ಬರು ಇಂತಹ ಜಾಲಕ್ಕೆ ಬಿದ್ದು 13 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಮಕ್ಕಳ ವಿಚಾರದಲ್ಲಿ ಫೇಸ್ಬುಕ್ನಲ್ಲಿ ಆ್ಯಡ್ವೊಂದು ಪ್ರದರ್ಶನಗೊಂಡಿತ್ತು. ಅದರ ನೈಜತೆಯನ್ನು ತಿಳಿಯದ ವ್ಯಕ್ತಿಯೊಬ್ಬರು ಅದನ್ನ ನಂಬಿ ತಮ್ಮ ಮಗನ ವಿಚಾರವಾಗಿ ಆ್ಯಡ್ ಮೇಲೆ ಕ್ಲಿಕ್ ಮಾಡಿದ್ದಾರೆ. ತಕ್ಷಣವೇ ಅವರಿಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ. ಮುಂದುವರಿದು ಮೊಬೈಲ್ಗೆ ಮೇಸೇಜ್ಗಳು ರವಾನೆಯಾಗಿವೆ.
ಕೆಲವೊಂದು ಟಾಸ್ಕ್ಗಳನ್ನು ನೀಡಿ ಟೆಲಿಗ್ರಾಮ್ನಲ್ಲಿ ಸಬ್ಸ್ಕ್ರೈಬ್ ಆಗುವಂತೆ ತಿಳಿಸಿದ್ದಾರೆ. ಬಳಿಕ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಒಂದೊಂದೆ ಟಾಸ್ಕ್ಗಳನ್ನು ನೀಡುತ್ತಾ, ಸಂತ್ರಸ್ತರ ಅಕೌಂಟ್ ಒಂದಿಷ್ಟು ಹಣ ಹಾಕಿದ್ದಾರೆ.
ಅವರನ್ನ ಪೂರ್ಣವಾಗಿ ತಮ್ಮ ನಂಬಿಕೆಯ ಜಾಲದಲ್ಲಿ ಸಿಲುಕಿಸಿದ ನಂತರ ಆನ್ಲೈನ್ ದುಷ್ಕರ್ಮಿಗಳು ನಿರಂತರವಾಗಿ ಸಂತ್ರಸ್ತರಿಂದ ಹಣ ಹಾಕಿಸಿಕೊಂಡಿದ್ದಾರೆ. ಸುಮಾರು 13 ಲಕ್ಷಕ್ಕೂ ಹೆಚ್ಚಿನ ಹಣ ಕಳೆದುಕೊಂಡ ನಂತರ ಸಂತ್ರಸ್ತರಿಗೆ ಅನುಮಾನ ಬಂದು shivamogga cen police station ಪೊಲೀಸರಿಗೆ ದೂರು ನೀಡಿದ್ದಾರೆ.
