Remote Desktop Application ಮೂಲಕ ನಾಲ್ಕು ಲಕ್ಷ ರೂಪಾಯಿ ಖಾಲಿ ಮಾಡಿದ್ರು! ಹೀಗೂ ನಡೆಯುತ್ತದೆ ಆನ್​ಲೈನ್​ ವಂಚನೆ! ಶಿವಮೊಗ್ಗದಲ್ಲಿ ಮೊದಲ ಕೇಸ್

Transfer of Rs 4 lakh through Remote Desktop Application! This is how online fraud happens! First case in Shimoga

Remote Desktop Application ಮೂಲಕ  ನಾಲ್ಕು ಲಕ್ಷ ರೂಪಾಯಿ ಖಾಲಿ ಮಾಡಿದ್ರು!  ಹೀಗೂ ನಡೆಯುತ್ತದೆ ಆನ್​ಲೈನ್​ ವಂಚನೆ! ಶಿವಮೊಗ್ಗದಲ್ಲಿ ಮೊದಲ ಕೇಸ್
Remote Desktop Application ಮೂಲಕ ನಾಲ್ಕು ಲಕ್ಷ ರೂಪಾಯಿ ಖಾಲಿ ಮಾಡಿದ್ರು! ಹೀಗೂ ನಡೆಯುತ್ತದೆ ಆನ್​ಲೈನ್​ ವಂಚನೆ! ಶಿವಮೊಗ್ಗದಲ್ಲಿ ಮೊದಲ ಕೇಸ್

MALENADUTODAY.COM | SHIVAMOGGA  | #KANNADANEWSWEB

ಆನ್​ಲೈನ್​ ಫ್ರಾಡ್​ ಕೇಸ್ಗಳು ಸಾಮಾನ್ಯವಾಗಿ ಒಟಿಪಿ ಪಡೆಯುವ ಮೂಲಕ ನಡೆಯುತ್ತವೇ ಇದೀಗ ಶಿವಮೊಗ್ಗದಲ್ಲಿ(shivamogga) ಬೇರೆಯದ್ದೆ ರೀತಿಯಲ್ಲಿ ಮೋಸವೊಂದು ನಡೆದಿದೆ. ದೂರದಿಂದ ಇನ್ನೊಬ್ಬರ ಮೊಬೈಲ್ ಅಥವಾ ಪಿಸಿಯಲ್ಲಿ ವರ್ಕ್​ ಮಾಡುವ ಅಥವಾ ರಿಪೇರಿ ಮಾಡುವ ಆನ್​ಲೈನ್​ ಸಾಪ್ಟ್​ವೇರ್ ಅಪ್ಲಿಕೇಶನ್ ಮೂಲಕ, (Remote Desktop Application)ಇಲ್ಲಿನ ನಿವಾಸಿಯೊಬ್ಬರ ಅಕೌಂಟ್​ನಿಂದ  ನಾಲ್ಕು ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ದಾಖಲಾಗಿದ್ದು, ಆನ್​ಲೈನ್ ಫ್ರಾಡ್ ಕೇಸ್ ದಾಖಲಾಗಿದೆ. 

READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ನಡೆದಿದ್ದೇನು? 

ಮೊನ್ನೆ ಅಂದರೆ,  ದಿನಾಂಕ-20-02-2023 ರಂದು, ದೂರುದಾರರ ನಂಬರ್​ಗೆ ಮೆಸೆಜ್ ಒಂದು ಬಂದಿದೆ. ಅದರಲ್ಲಿ ಮನೆಯ ಕರೆಂಟ್ ಬಿಲ್ ಕಟ್ಟಿಲ್ಲ ಎಂದು ನಮೂದಿಸಲಾಗಿತ್ತು. ಇದನ್ನು ನೋಡಿ ಗಾಬರಿಯಾದ, ಮನೆಯವರು, ಆ ನಂಬರ್​ಗೆ ಕರೆ ಮಾಡಿ ನಾವು ಬಿಲ್​ ಕಟ್ಟಿದ್ದೇವೆ ಎಂದಿದ್ದಾರೆ. ಅದಕ್ಕೆ ಕರೆ ಸ್ವೀಕರಿಸಿದ ವ್ಯಕ್ತಿಯು ಕಾಲ್ ಸೆಂಟರ್ ಗೆ ಕಾಲ್ ಮಾಡಿ ಹೇಳಿ ಎಂದು ಮೊಬೈಲ್​ ನಂಬರ್​ಗಳನ್ನ ನೀಡಿದ್ದಾರೆ. 

ಅಂದರೆ, ದೂರುದಾರರು ಆ ನಂಬರ್​ ಕರೆಮಾಡಿದ್ದಾರೆ. ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ ನೀವು ಕಟ್ಟಿದ ಹಣ  ರಿಜೆಸ್ಟ್ರೇಷನ್ ಆಗಿರುವುದಿಲ್ಲ ಎಂದಿದ್ದಾರೆ. ಅಲ್ಲದೆ  ನೀವು 11 ರೂಪಾಯಿ ಕಟ್ಟಬೇಕು ಎಂದಿದ್ದಾರೆ. ಅದಕ್ಕಾಗಿ ನೀವು  Any desk App ನ್ನು ಇನ್​ಸ್ಟಾಲ್ ಮಾಡಿಕೊಳ್ಳಿ ಎಂದಿದ್ದಾರೆ. 

ವಿಷಯ ಗೊತ್ತಾಗದ ವ್ಯಕ್ತಿಯು ಆತ ಹೇಳಿದಂತೆ ಮಾಡಿದ್ದಾರೆ, ಬಳಿಕ ನಿಮ್ಮ ಇಂಟರ್​ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಹಾಕಿ ಎಂದು ಹೇಳಿ ಅಕೌಂಟ್ ಓಪನ್ ಮಾಡಿಸಿದ್ದಾರೆ. ಬಳಿಕ, 2 ಸಲ ಒಟ್ಟು ನಾಲ್ಕು ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. 

ಸದ್ಯ ಈ ಸಂಬಂದ ನೊಂದ ಸಂತ್ರಸ್ತರು ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಶಿವಮೊಗ್ಗ ಎಸ್​ಪಿ (shivamogga sp ) ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರತಿಸಲವೂ ಇಂತಹ ಸೈಬರ್ ಫ್ರಾಡ್​ಗಳಿಗೆ ಗುರಿಯಾಗದಿರಿ ಎಂದು ಜಾಗೃತಿ ಮೂಡಿಸುತ್ತಿರುತ್ತಾರೆ. ಆದರೆ, ವಂಚಕರು ಹೊಸ ಹೊಸ ದಾರಿ ಹಿಡಿದು ಜನರಿಗೆ ಮೋಸ ಮಾಡುತ್ತಿದ್ಧಾರೆ. ಹೀಗಾಗಿ ಜನರು ಇನ್ನಷ್ಟು ಹುಷಾರಿನಲ್ಲಿರುವುದು ಒಳಿತು.