SHIVAMOGGA | Dec 20, 2023 | ಶಿವಮೊಗ್ಗ-ಎ ಉಪ ವಿಭಾಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕಳುವು ಪ್ರಕರಣಗಳಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು
ತುಂಗಾ ನಗರ ಪೊಲೀಸ್ ಠಾಣೆ
ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್.ಬಿ. ಪಿಐ ರವರ ನೇತೃತ್ವದ, ಶಿವಪ್ರಸಾದ್ ವಿ. ಪಿಎಸ್ಐ, ಮಂಜುನಾಥ್ ಪಿ.ಎಸ್.ಐ, ರಘುವಿರ್ ಎಮ್. ಪಿ.ಎಸ್.ಐ. ಕುಮಾರ ಕೂರಗುಂದ ಪಿ.ಎಸ್.ಐ. ದೂದ್ಯಾನಾಯ್ಕ ಪಿ.ಎಸ್.ಐ, ಮನೋಹರ್ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಮತ್ತು ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ. ಹಾಗೂ ಚೇತನ ರವರಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಇದೀಗ ಆರೋಪಿಗಳನ್ನ ಪತ್ತೆ ಹಚ್ಚಿದೆ
ತನಿಖಾ ತಂಡವು ದಿನಾಂಕಃ 20-12-2023 ರಂದು ಆರೋಪಿತರಾದ
1) ಸಂತೋಷ @ ಎಮ್ಮೆ ಸಂತೋಷ, 36 ವರ್ಷ, ಮಾಗಡಿ ರಸ್ತೆ ಬೆಂಗಳೂರು, ಸ್ವಂತ ವಿಳಾಸ ಶಿವಪ್ಪ ಬಡಾವಣೆ, ಅಲ್ಲೂರು ರಸ್ತೆ ಪಿರಿಯಾಪಟ್ಟಣ ಮೈಸೂರು ಜಿಲ್ಲೆ,
2) ಮಹಮದ್ ನದ್ದಿಮ್ @ ನದ್ದಿಮ್ @ ನದ್ದು, 30 ವರ್ಷ, ಅಶೋಕ ನಗರ, ಶಿವಮೊಗ್ಗ,
3) ಇಮ್ರಾನ್, 32 ವರ್ಷ, ಅಶೋಕನಗರ, ಶಿವಮೊಗ್ಗ
4) ಸುರೇಶ್ ಕೆ, 43 ವರ್ಷ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಶಿವಮೊಗ್ಗರನ್ನ ಬಂಧಿಸಿದೆ.
READ :ಒಂದೇ ದಿನ 2 ಕಡೆ ಸರಗಳ್ಳತನ ! ಮತ್ತೊಂದು ಕಡೆ ವಿಫಲ ಯತ್ನ! ಮಹಿಳೆಯರೇ ಹುಷಾರ್
ಇನ್ನೂ ಆರೋಪಿತರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 05 ಸ್ವತ್ತು ಕಳವು ಪ್ರಕರಣಗಳಾದ 1) ಗುನ್ನೆ ಸಂಖ್ಯೆ 128/2023, 2) ಗುನ್ನೆ ಸಂಖ್ಯೆ 175/2023, 3) ಗುನ್ನೆ ಸಂಖ್ಯೆ 412/2023, 4) ಗುನ್ನೆ ಸಂಖ್ಯೆ 462/2023 ಮತ್ತು 5) ಗುನ್ನೆ ಸಂಖ್ಯೆ 483/2023 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 12,65,000/- ರೂಗಳ 230 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 72,000/- ರೂಗಳ 1 ಕೆಜಿ 200 ಗ್ರಾಂ ಬೆಳ್ಳಿ ಆಭರಣಗಳು, ರೂ 25,140/- ನಗದು ಹಣ, ಅಂದಾಜು ಮೌಲ್ಯ 10,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು ರೂ 13,87,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
