SHIVAMOGGA | Dec 20, 2023 | ಶಿವಮೊಗ್ಗದಲ್ಲಿಂದು ಎರಡು ಕಡೆ ಸರಗಳ್ಳತನ ಪ್ರಕರಣಗಳು ನಡೆದಿವೆ.
ಶಿವಮೊಗ್ಗದ 2 ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು ಒಂದು ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನದ ಯತ್ನ ನಡೆದಿದೆ
ದೊಡ್ಡಪೇಟೆ ಪೊಲೀಸ್ ಠಾಣೆ
ಬೈಕ್ ನಲ್ಲಿ ಬಂದ ಖದೀಮರು ಶಿವಮೊಗ್ಗದ ಶರಾವತಿನಗರದ ಆದಿಚುಂಚನಗಿರಿ ಶಾಲೆ ಬಳಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಲಲಿತಮ್ಮ ಎಂಬುವರ ಸರ ಕಳ್ಳತನ ಮಾಡಿದ್ದು, ಈ ಘಟನೆ ದೊಡ್ಡಪೇಟೆ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
READ :ಆನಂದಪುರದ ಸಮೀಪ ಆಟೋಕ್ಕೆ ಡಿಕ್ಕಿಯಾದ ಕೆಎಸ್ಆರ್ಟಿಸಿ ಬಸ್!
ವಿನೋಬನಗರ ಪೊಲೀಸ್ ಠಾಣೆ
ಇನ್ನೊಂದೆಡೆ ಧನುರ್ಮಾಸದ ಪೂಜೆಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸ್ ತೆರಳುತ್ತಿದ್ದ ಯುವತಿಯ ಸರ ಕಳ್ಳತನವಾಗಿದೆ. ಶಿವಮೊಗ್ಗದ ಎಪಿಎಂಸಿ ಬಳಿ ಈ ಘಟನೆ ನಡೆದಿದ್ದ ವಿನೋಬನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೋಟೆ ಪೊಲೀಸ್ ಠಾಣೆ
ಸೂರ್ಯ ಎಂಬ ಯುವತಿಯ ಸರ ಕಳ್ಳತನ ವಾಗಿದ್ದು, ಮತ್ತೊಂದಡೆ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಖದೀಮರು ಸರಗಳ್ಳತನದ ವಿಫಲ ಯತ್ನ ನಡೆಸಿದ್ದಾರೆ. ಈ ಘಟನೆ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ.