ಆನಂದಪುರದ ಸಮೀಪ ಆಟೋಕ್ಕೆ ಡಿಕ್ಕಿಯಾದ ಕೆಎಸ್​ಆರ್​ಟಿಸಿ ಬಸ್!

KSRTC bus collides with auto near Anandpur

ಆನಂದಪುರದ ಸಮೀಪ ಆಟೋಕ್ಕೆ ಡಿಕ್ಕಿಯಾದ ಕೆಎಸ್​ಆರ್​ಟಿಸಿ ಬಸ್!

SHIVAMOGGA |  Dec 20, 2023  |  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ಮುರುಘಾಮಠ ಸಮೀಪ ಕೆಎಸ್​ಆರ್​ಟಿಸಿ ಬಸ್ ವೊಂದು ಆಟೋವೊಂದಕ್ಕೆ ಡಿಕ್ಕಿಯಾಗಿದೆ. 

READ : ಸಾಗರ ಪೊಲೀಸರಿಂದ ಶಿವಮೊಗ್ಗ ಟಿಪ್ಪು ನಗರ ಬಾಯಿಜಾನ್ ಅರೆಸ್ಟ್ ! ಈತನ ಬಳಿ ಸಿಕ್ಕಿದ್ದು ಆರು ಲಕ್ಷ ಮೌಲ್ಯದ ಚಿನ್ನ!

ಆನಂದಪುರ ಸಮೀಪದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ  7.45 ರ ವೇಳೆಗೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಿಂತಿದ್ದ ಆಟೋ ಚರಂಡಿ ಪಕ್ಕಕ್ಕೆ ಸರಿದಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗು ಏನೂ ಸಹ ಆಗಲಿಲ್ಲ. 

ಇನ್ನೂ ಸ್ಥಳಕ್ಕೆ ಬಂದ ಆನಂದಪುರ ಠಾಣೆ ಪೊಲೀಸರು, ಎರಡು ವಾಹನಗಳನ್ನ ರಸ್ತೆಯಿಂದ ಸರಿಸಿ ಟ್ರಾಫಿಕ್ ಕ್ಲೀಯರ್ ಮಾಡಿದ್ದಲ್ಲದೇ ಅಪಘಾತಕ್ಕೀಡಾದ ವಾಹನಗಳನ್ನ ಸ್ಟೇಷನ್​ಗೆ ತೆಗೆದುಕೊಂಡು ಹೋದರು