ಹುಬ್ಬಳ್ಳಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಬಿದ್ದ ಮರ !
ಹುಬ್ಬಳ್ಳಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಬಿದ್ದ ಮರ ! ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಘಟನೆ / Tree falls on KSRTC bus on its way to Hubballi The incident took place at Sagar in Shivamogga district.
Shivamogga Apr 17, 2024 KSRTC bus ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದೆ.
ಸಾಗರ ತಾಲೂಕಿನ ಪಡವಗೋಡಿನ ಅಮಚಿಯಲ್ಲಿ ಬಸ್ ಸಾಗರದಿಂದ ಹುಬ್ಬಳ್ಳಿಗೆ ತೆರಳುತ್ತಿತ್ತು, ಬಸ್ಸಿನಲ್ಲಿ ಸುಮಾರು 60 ಜನ ಪ್ರಯಾಣಿಕರಿದ್ದರು. ಈ ವೇಳೆ ಮರವೊಂದು ಬಸ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಗ್ಲಾಸ್ ಒಡೆದಿದೆ. ಅದೃಷ್ಟಕ್ಕೆ ಯಾರಿಗೂ ಘಟನೆಯಲ್ಲಿ ಎನೂ ಆಗಿಲ್ಲ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮರವನ್ನು ತೆರವುಗೊಳಿಸಿ ಟ್ರಾಫಿಕ್ ಕ್ಲಿಯರ್ ಮಾಡಿಸಿದ್ದಾರೆ