SHIVAMOGGA | Dec 25, 2023 | ಸಾಗರ ತಾಲ್ಲೂಕು ಆನಂದಪುರ ಸಮೀಪ ಬೈಕ್ವೊಂದಕ್ಕೆ ಲಾರಿ ರಿವರ್ಸ್ನಲ್ಲಿ ಬಂದು ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಬೈಕ್ ಸವಾರ ತನ್ನ ಬುದ್ದಿವಂತಿಕೆಯಿಂದ ಬಚಾವ್ ಆಗಿದ್ದಾನೆ.
ಶಿಕಾರಿಪುರ ಮೂಲದ ವ್ಯಕ್ತಿಯೊಬ್ಬರ ಆನಂದಪುರದ ಕಡೆಗೆ ಬರುತ್ತಿದ್ದ ವೇಳೆ ಲಾರಿಯೊಂದು ರಿವರ್ಸ್ ಬರುತ್ತಿರುವುದನ್ನ ಗಮನಿಸಿದ್ದಾನೆ. ಲಾರಿಯನ್ನು ಅವೈಡ್ ಮಾಡಿ ಮುಂದಕ್ಕೆ ಹೋಗಲು ಬೈಕ್ ಸವಾರನಿಗೆ ಸಾಧ್ಯವಾಗಲಿಲ್ಲ. ಎದುರಿನಿಂದ ಇನ್ನೊಂದು ವಾಹನ ಬರುತ್ತಿದ್ದರಿಂದ ಬೈಕ್ ಸವಾರನಿಗೆ ತಕ್ಷಣವೇ ಬೈಕ್ ನಿಲ್ಲಿಸಲು ಸಹ ಸಾಧ್ಯವಾಗಲಿಲ್ಲ.
ಈ ಮಧ್ಯೆ ಬೈಕ್ ಸ್ಲೋ ಆದರೂ, ಹಿಂದಿರುವ ಬೈಕ್ನ್ನ ಗಮನಿಸದ ಲಾರಿ ಚಾಲಕ ಇನ್ನಷ್ಟು ಹಿಂದಕ್ಕೆ ವಾಹನ ಚಲಾಯಿಸಿದ್ದಾನೆ. ಹೀಗಾಗಿ ಬೈಕ್ನಿಂದ ಹಾರಿ ಶಿಕಾರಿಪುರ ನಿವಾಸಿ ಜೀವ ಉಳಿಸಿಕೊಂಡಿದ್ದಾನೆ. ಆದರೆ ಲಾರಿ ಡಿಕ್ಕಿಯಾಗಿ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಬೈಕ್ನ ಮುಂಭಾಗ ನುಜ್ಜುಗುಜ್ಜಾಗಿದೆ.
