ಸೀಗೇಬಾಗಿಯಲ್ಲಿ ಸೊರಬ ಯಜಮಾನನ ಕೊಲೆ! ಬ್ಯಾಡಗಿ ಪೊಲೀಸ್​ ಕೇಸ್​ನಲ್ಲಿ ಆಯನೂರು ಏಳನೀರು ಲಿಂಕ್! ಹೆಂಡ್ತಿ, ಮಗ ಮತ್ತು ಆತ ಅರೆಸ್ಟ್!

SHIVAMOGGA  |  Dec 25, 2023  |    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಮಾಸಣಗಿಯ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಿದ್ದು ಕುತೂಹಲ ಮೂಡಿಸಿದೆ. ಶಿವಮೊಗ್ಗ ಜಿಲ್ಲೆ ಆಯನೂರು ನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ ಎಂಬ ಸೊರಬ ತಾಲ್ಲೂಕು ಮೂಲದ ವ್ಯಕ್ತಿಯ ಕೊಲೆ ಪ್ರಕರಣ ಸಂಬಂಧ ಬ್ಯಾಡಗಿ ಪೊಲೀಸರು ಆತನ ಪತ್ನಿ ಹಾಗೂ ಮಗ ಮತ್ತು ಶಿವಮೊಗ್ಗದ ಆಯನೂರು ನಲ್ಲಿರುವ ಎಳನೀರು ವ್ಯಾಪಾರಿಯೊಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಮತ್ತು ಈ ಕೃತ್ಯ ನಡೆದಿದ್ದು  ಭದ್ರಾವತಿ ಸೀಗೆಬಾಗಿ ಕ್ರಾಸ್​ ನಲ್ಲಿ ಎಂಬುದು ಇಂಟರ್​​ಸ್ಟಿಂಗ್ ಸಂಗತಿ

ಬ್ಯಾಡಗಿ ಪೊಲೀಸ್ ಸ್ಟೇಷನ್

ಹೌದು, ಬ್ಯಾಡಗಿ ಪೊಲೀಸ್ ಸ್ಟೇಷನ್​ ನಲ್ಲಿ  ಮಿಸ್ಸಿಂಗ್ ಕಂಪ್ಲೆಂಟ್​ ಒಂದು ದಾಖಲಾಗಿತ್ತು. ಮಹಿಳೆಯೊಬ್ಬರು ತನ್ನ ಪತಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ, ಕೇಸ್​ನಲ್ಲಿ ಬೇರೆಯದ್ದೆ ಸ್ಮೆಲ್​ ಬಡಿದಿತ್ತು. ಹೀಗಾಗಿ ದೂರುದಾರ ಮಹಿಳೆ ಹಾಗೂ ಆಕೆಯ ಮಗನನ್ನ ಸ್ಟೇಷನ್​ಗೆ ಕರೆಸಿಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. 

ಶಿವಮೊಗ್ಗ  ಜಿಲ್ಲೆ ಆಯನೂರು

ಪೊಲೀಸ್​ ಸ್ಟೈಲ್​ನಲ್ಲಿ ನಡೆದ ವಿಚಾರಣೆಯಲ್ಲಿ ಕೊಲೆ ರಹಸ್ಯವೊಂದು ಹೊರಬಂದಿತ್ತು. ಮಗನೊಂದಿಗೆ ಸೇರಿಕೊಂಡು ಮಹಿಳೆ ತನ್ನ ಗಂಡನನ್ನ ಕೊಲೆ ಮಾಡಿಸಿದ್ದಳು. ಪ್ರಕರಣದ ಮೂಲ ಹುಡುಕಿ ಹೊರಟ ಪೊಲೀಸರಿಗೆ ಕೃತ್ಯ ನಡೆದಿದ್ದು ಶಿವಮೊಗ್ಗದಲ್ಲಿ ಎಂಬುದು ಗೊತ್ತಾಗಿದೆ..

READ : ಹೆಂಡತಿಯ ಬಟ್ಟೆಬರೆ ಸುಟ್ಟ ಗಂಡ/ ಭದ್ರಾವತಿಯಲ್ಲಿ ಅನುಮಾನಸ್ಪದ ಒಮಿನಿ ಪತ್ತೆ/ ಕಾರು ಮತ್ತು ಬೈಕ್​ ಡಿಕ್ಕಿ

ಭದ್ರಾವತಿ ಸೀಗೇಬಾಗಿ ಕ್ರಾಸ್ 

ಮೂಲತಃ ಸೊರಬ ತಾಲ್ಲೂಕು ನ 50 ವರ್ಷದ ಮೌನೇಶನಿಗೆ ಇಬ್ಬರು ಹೆಂಡತಿಯರು. ಈತನನ್ನು ಕೊಲೆ ಮಾಡಿದ ಪತ್ನಿಯ ಜೊತೆಗೆ ಮೌನೇಶ ಆಯನೂರು ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಆಸ್ತಿ ವಿವಾದ ಕಾರಣಕ್ಕೆ ಮಹಿಳೆ ಮೌನೇಶನನ್ನ ಮುಗಿಸುವ ಸ್ಕೆಚ್ ಹಾಕಿದ್ದಾಳೆ. ಇದಕ್ಕೆ ಆಯನೂರು ನಲ್ಲಿ ಎಳನೀರು ಮಾರುವ ವ್ಯಕ್ತಿಯ ಸಹಾಯ ಪಡೆದಿದ್ದಾಳೆ. ಅಮ್ಮ ಮಗ ಮತ್ತು ಎಳನೀರು ವ್ಯಾಪಾರಿ ಸೇರಿಕೊಂಡು ಮೌನೇಶನನ್ನ ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿ ಸೀಗೇಬಾಗಿ ಕ್ರಾಸ್​ವರೆಗೂ ತೆರಳಿದ್ದಾರೆ.ಅಲ್ಲಿ ಮೌನೇಶನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆನಂತರ ಶವವನ್ನ ಏನು ಮಾಡಿದ್ರು ಎಂಬ ಮಾಹಿತಿ ಸಮರ್ಪಕವಾಗಿಲ್ಲ. 

ಕಾಣೆಯಾಗಿದ್ದಾರೆ

ಇಷ್ಟೆಲ್ಲಾ ಕೃತ್ಯವೆಸಗಿದ ಬಳಿಕ ಮಹಿಳೆ ತನ್ನ ಊರು ಮಾಸಣಗಿ ವ್ಯಾಪ್ತಿಯಲ್ಲಿ ಬ್ಯಾಡಗಿ ಪೊಲೀಸರಿಗೆ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ. ಪೊಲೀಸರು ಮಿಸ್ಸಿಂಗ್ ಕಂಪ್ಲೆಂಟ್​ ತೆಗೆದುಕೊಂಡು ಕೊಲೆ ಕೇಸ್ ಪತ್ತೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಗೊತ್ತಾಗದ ಕೇಸ್​ವೊಂದು ಬ್ಯಾಡಗಿಯಲ್ಲಿ ಬಯಲಾಗಿದ್ದು, ಸದ್ಯ ಪ್ರಕರಣ ಶಿವಮೊಗ್ಗದಲ್ಲಿ ಹೀಗೆಲ್ಲಾ ನಡೆಯಿತೆ ಎಂಬ ಕುತೂಹಲವನ್ನು ಮೂಡಿಸ್ತಿದೆ. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು