ಹೆಂಡತಿಯ ಬಟ್ಟೆಬರೆ ಸುಟ್ಟ ಗಂಡ/ ಭದ್ರಾವತಿಯಲ್ಲಿ ಅನುಮಾನಸ್ಪದ ಒಮಿನಿ ಪತ್ತೆ/ ಕಾರು ಮತ್ತು ಬೈಕ್​ ಡಿಕ್ಕಿ

husband burned his wife's clothes. Suspicious Omni found in Bhadravathi. Car-bike collision

ಹೆಂಡತಿಯ ಬಟ್ಟೆಬರೆ ಸುಟ್ಟ ಗಂಡ/ ಭದ್ರಾವತಿಯಲ್ಲಿ ಅನುಮಾನಸ್ಪದ ಒಮಿನಿ ಪತ್ತೆ/ ಕಾರು ಮತ್ತು ಬೈಕ್​ ಡಿಕ್ಕಿ

SHIVAMOGGA  |  Dec 25, 2023  |   ಹೆಂಡ್ತಿಯ ಬಟ್ಟೆ ಸುಟ್ಟ ಗಂಡ

ಶಿಮವೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಜಗಳ ನಡೆದಿದ್ದು, ಈ ಮಧ್ಯೆ ಸಿಟ್ಟಿಗೆದ್ದ ಪತಿರಾಯ ಹೆಂಡತಿಯ ಬಟ್ಟೆಬರೆಗಳನ್ನ ಮನೆಯಿಂದ ಹೊರಕ್ಕೆ ಹಾಕಿ ಸುಟ್ಟು ಹಾಕಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ಹೆಂಡತಿಯ ಬಟ್ಟೆ ಸುಟ್ಟ ಪತಿರಾಯನನ್ನ ಪೊಲೀಸ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. 

ಕಾರು ಬೈಕ್​ ನಡುವೆ ಡಿಕ್ಕಿ

ಇನ್ನೊಂದಡೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ 112 ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಕರಣ ರಾಜಿಯಲ್ಲಿ ಇತ್ಯರ್ಥ ಕಂಡಿದೆ. 

READ: ಪೊಲೀಸ್​ಗೆ ಫೋಟೋ ಕೊಟ್ಟ ಪ್ರಯಾಣಿಕ! ಬಸ್​ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್​

ಭದ್ರಾವತಿಯಲ್ಲಿ ಅಪರಿಚಿತ ವಾಹನ

ಅತ್ತ ಭದ್ರಾವತಿ ತಾಲ್ಲೂಕು ಪೇಪರ್​ ಟೌನ್ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಅಪರಿಚಿತ ವಾಹನವೊಂದರ ಬಗ್ಗೆ ಅನುಮಾನ ಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 

ಕೆಲಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಾಹನದ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವಾಹನ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ತನಿಖೆ ಆರಂಭಿಸಿದ್ದಾರೆ.