ಪೊಲೀಸ್​ಗೆ ಫೋಟೋ ಕೊಟ್ಟ ಪ್ರಯಾಣಿಕ! ಬಸ್​ ಚಾಲಕನಿಗೆ ಬಿತ್ತು 5 ಸಾವಿರ ರೂಪಾಯಿ ಫೈನ್​

SHIVAMOGGA  |  Dec 25, 2023  |  ಫೋಟೋ ನೋಡಿ ಫೈನ್​ ಹಾಕುವ ಪ್ರಕ್ರಿಯೆ ಶಿವಮೊಗ್ಗದಲ್ಲಿಯು ಜೋರಾಗುತ್ತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಸರ್ಕಲ್​ಗಳ ಕ್ಯಾಮಾರಗಳು ಬೆನ್ನ ಹಿಂದಿನಿಂದಲೇ ಫೋಟೋ ತೆಗೆದು ಇಂತಿಂಥ ರೂಲ್ಸ್ ಉಲ್ಲಂಘನೆ ಆಗಿದೆ ಅಂತಾ ನೋಟಿಸ್ ಕಳಿಸ್ತಿದೆ.. ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಲೋಕಲ್ಸ್​ ಸೋಶಿಯಲ್​ ಮೀಡಿಯಾ ಮೂಲಕ ಕಳಿಸುವ ಫೋಟೋಗಳನ್ನ ಆಧರಿಸಿಯು ಫೈನ್​ ಚೀಟಿ ಹರಿಯುತ್ತಿದ್ದಾರೆ. 

ಇದಕ್ಕೆ ಸಾಕ್ಷಿ ಎಂಬಂತೆ  ಶಿವಮೊಗ್ಗ ಟ್ರಾಫಿಕ್ ಪೊಲೀಸರು 9(c). Driving Dangerously (Using Mobile phone) (Section 184(c) of the MV Act) (Others) (Section 184(c) of the MV Act) [Fine – 5000] ಅಡಿಯಲ್ಲಿ  ಸಿಟಿ ಬಸ್​ ಚಾಲಕನ ವಿರುದ್ಧ ರಸೀದಿ ಹರಿದಿದ್ದಾರೆ. 

READ : Arecanut Rate?  Dec 24, 2023 ರವಿವಾರ ಎಷ್ಟಿತ್ತು ಅಡಿಕೆ ದರ? ವಿವರ ಇಲ್ಲಿದೆ

ದಿನಾಂಕ 23-12-2023 ರಂದು ಸವಳಂಗ ರಸ್ತೆಯಲ್ಲಿ ಶಶಿಕುಮಾರ್ ಸಿಟಿ ಬಸ್ ಚಾಲಕ  ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ಮಾಡುತ್ತಿರುವುದನ್ನ ಆ ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರು ಫೋಟೋ ಹೊಡೆದು ಪೊಲೀಸರಿಗೆ ಕಳುಹಿಸಿದ್ದರು.

ಈ ಫೋಟೋ ಸಾಕ್ಷಿಯನ್ನ ಆಧರಿಸಿ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕನಿಗೆ ರೂ 5,000/- ದಂಡ ವಿಧಿಸಿ ಕ್ರಮ ಕೈಗೊಂಡಿರುತ್ತಾರೆ.

Leave a Comment